FSSAI ನೇಮಕಾತಿ 2025 || ಸಹಾಯಕ, ವ್ಯವಸ್ಥಾಪಕ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ – ಯಾವುದೇ ಅರ್ಜಿ ಶುಲ್ಕವಿಲ್ಲ

FSSAI ನೇಮಕಾತಿ 2025 : ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (Food Safety and Standard Authority of India – FSSAI) ಒಟ್ಟು 33 ಸಹಾಯಕ, ವ್ಯವಸ್ಥಾಪಕ ಮತ್ತು ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.  ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಆಕಾಂಕ್ಷಿಗಳಿಗೆ ಒಂದು ಉತ್ತಮ ಅವಕಾಶ ಬಂದಿದೆ. ಉನ್ನತ ಶಿಕ್ಷಣವನ್ನು ಪಡೆದಿರುವ ಹಾಗೂ ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು FSSAI ನೇಮಕಾತಿ ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್/ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

FSSAI ನೇಮಕಾತಿ 2025 ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

FSSAI ನೇಮಕಾತಿ 2025 : ನೇಮಕಾತಿಯ ವಿವರಗಳು
  • ಸಂಸ್ಥೆಯ ಹೆಸರು : ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರ FSSAI
  • ಹುದ್ದೆಯ ಹೆಸರು : ಸಹಾಯಕ, ವ್ಯವಸ್ಥಾಪಕ ಮತ್ತು ಇತರ ಹುದ್ದೆಗಳು
  • ಒಟ್ಟು ಹುದ್ದೆಗಳು : 33 ಹುದ್ದೆಗಳು
  • ವರ್ಗ : ಸರ್ಕಾರಿ ಕೆಲಸ
  • ಅರ್ಜಿ ಸ್ವರೂಪ : ಆನ್ಲೈನ್‌/ಆಫ್ಲೈನ್ ಮೂಲಕ
  • ಉದ್ಯೋಗ ಸ್ಥಳ : ದೆಹಲಿ
FSSAI ನೇಮಕಾತಿ 2025 : ಹುದ್ದೆಯ ವಿವರಗಳು
  • ನಿರ್ದೇಶಕರು : 02
  • ಜಂಟಿ ನಿರ್ದೇಶಕರು : 03
  • ಹಿರಿಯ ವ್ಯವಸ್ಥಾಪಕರು : 01
  • ಹಿರಿಯ ವ್ಯವಸ್ಥಾಪಕ (ಐಟಿ) : 01
  • ವ್ಯವಸ್ಥಾಪಕ : 02
  • ವ್ಯವಸ್ಥಾಪಕ (ಐಟಿ) : 02
  • ಸಹಾಯಕ ನಿರ್ದೇಶಕರು (OL) : 01
  • ಆಡಳಿತ ಅಧಿಕಾರಿ : 10
  • ಹಿರಿಯ ಖಾಸಗಿ ಕಾರ್ಯದರ್ಶಿ : 04
  • ಸಹಾಯಕ ವ್ಯವಸ್ಥಾಪಕ (ಐಟಿ) : 01
  • ಸಹಾಯಕ : 06
FSSAI ನೇಮಕಾತಿ 2025 : ಅರ್ಹತಾ ಮಾನದಂಡಗಳು

ವಿದ್ಯಾರ್ಹತೆ :

FSSAI ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ ಯಾವುದೇ ಪದವಿ, ಬಿ.ಟೆಕ್/ಬಿಇ, ಯಾವುದೇ ಸ್ನಾತಕೋತ್ತರ ಪದವಿ, ಸಿ.ಎಸ್., ಐಸಿಡಬ್ಲ್ಯೂಎ, ಎಂಇ/ಎಂ.ಟೆಕ್, ಕಾನೂನು, ಎಂಬಿಎ/ಪಿಜಿಡಿಎಂ, ಪಿಜಿ ಡಿಪ್ಲೊಮಾ (ಸಂಬಂಧಿತ ಕ್ಷೇತ್ರಗಳು) ಹೊಂದಿರಬೇಕು.

ವಯೋಮಿತಿ :

  • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 56 ವರ್ಷಗಳು
  • ಅಧಿಸೂಚನೆಯ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
FSSAI ನೇಮಕಾತಿ 2025 : ಮಾಸಿಕ ವೇತನ

FSSAI ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ರೂ.1,23,100 ರಿಂದ 2,15,900/- ಮಾಸಿಕ ವೇತನವನ್ನು ನೀಡಲಾಗುತ್ತದೆ.

FSSAI ನೇಮಕಾತಿ 2025 : ಅರ್ಜಿ ಶುಲ್ಕ

ಯಾವುದೇ ಅರ್ಜಿ ಶುಲ್ಕವಿಲ್ಲ

FSSAI ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

ಆಯ್ಕೆ ಪ್ರಕ್ರಿಯೆಯನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ, ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.

FSSAI ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
  • FSSAI ನೇಮಕಾತಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
  • ಅಗತ್ಯವಿರುವ ಎಲ್ಲಾ ಪೂರಕ ದಾಖಲೆಗಳನ್ನು ಭರ್ತಿ ಮಾಡಿ.
  • ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ) ಸಲ್ಲಿಸು ಬಟನ್‌ ಮೇಲೆ ಕ್ಲಿಕ್‌ ಮಾಡಿ
  • ಆನ್‌ಲೈನ್ ಅರ್ಜಿಯನ್ನು ಪೂರ್ಣಗೊಳಿಸಿದ ನಂತರ, ನಿಗದಿತ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ಪೂರಕ ದಾಖಲೆಗಳೊಂದಿಗೆ ಹಾರ್ಡ್ ಪ್ರತಿಯನ್ನು ಕೆಳಗಿನ ವಿಳಾಸಕ್ಕೆ ಸ್ಪೀಡ್‌ ಪೋಸ್ಟ್‌ ಮಾಡಿ

ಅರ್ಜಿ ಕಳುಹಿಸುವ ವಿಳಾಸ :

“ಸಹಾಯಕ ನಿರ್ದೇಶಕರು, ನೇಮಕಾತಿ ಕೋಶ, FSSAI ಪ್ರಧಾನ ಕಚೇರಿ 312, 3ನೇ ಮಹಡಿ, FDA ಭವನ, ಕೋಟ್ಲಾ ರಸ್ತೆ ನವದೆಹಲಿ.”

FSSAI ನೇಮಕಾತಿ 2025 : ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15 ಏಪ್ರಿಲ್‌ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಏಪ್ರಿಲ್‌ 2025
  • ಹಾರ್ಡ್‌ ಕಾಪಿ ಕಳುಹಿಸಲು ಕೊನೆಯ ದಿನಾಂಕ : 15 ಮೇ 2025
FSSAI ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

Author: admin

Leave a Reply

Your email address will not be published. Required fields are marked *