DYES ಕರ್ನಾಟಕ ನೇಮಕಾತಿ 2025 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು (DYES) ಕರ್ನಾಟಕದಾದ್ಯಂತ ಕ್ರೀಡಾ ಹಾಸ್ಟೆಲ್ಗಳಲ್ಲಿ ಒಟ್ಟು 06 ಮೆಂಟರ್ (ಮಾರ್ಗದರ್ಶಕ) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಹಾಗಯೇ ಕಾಳಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್ ಮೂಲಕ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. DYES ಕರ್ನಾಟಕ ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದಾಗಿದೆ.
DYES ಕರ್ನಾಟಕ ನೇಮಕಾತಿ 2025 : ನೇಮಕಾತಿಯ ವಿವರಗಳು
- ಸಂಸ್ಥೆಯ ಹೆಸರು : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ (DYES ಕರ್ನಾಟಕ)
- ಹುದ್ದೆಯ ಹೆಸರು : ಮಾರ್ಗದರ್ಶಕರು
- ಒಟ್ಟು ಹುದ್ದೆಗಳು : 06 ಹುದ್ದೆಗಳು
- ಅರ್ಜಿ ಸ್ವರೂಪ : ಆಫ್ಲೈನ್ ಮೂಲಕ
- ಉದ್ಯೋಗ ಸ್ಥಳ : ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು – ಕರ್ನಾಟಕ
ಹುದ್ದೆಗಳ ವಿವರಗಳು
- ಬೆಂಗಳೂರು ನಗರ ವಿಭಾಗ : 01
- ಬೆಳಗಾವಿ ವಿಭಾಗ : 01
- ಕಲಬುರಗಿ ವಿಭಾಗ : 01
- ಮೈಸೂರು ವಿಭಾಗ : 01
- ಕೊಡಿಗೆ ಕ್ರೀಡಾ ಶಾಲೆ-ಹಾಸ್ಟೆಲ್ : 01
- ವಿದ್ಯಾನಗರ ತರಬೇತಿ ಕೇಂದ್ರ : 01
ಅರ್ಹತಾ ಮಾನದಂಡಗಳ ವಿವರಗಳು
ವಿದ್ಯಾರ್ಹತೆ :
ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಒಲಿಂಪಿಕ್ಸ್, ಏಷ್ಯನ್ ಕ್ರೀಡಾಕೂಟ ಅಥವಾ ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿರಬೇಕು
ಅಥವಾ ಪದಕಗಳನ್ನು ಗೆದ್ದಿರಬೇಕು.
ವಯೋಮಿತಿ :
ಅಧಿಸೂಚನೆಯನ್ನು ಗಮನಿಸಿ
ಮಾಸಿಕ ವೇತನ
DYES ಕರ್ನಾಟಕ ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕವಿಲ್ಲ
DYES ಕರ್ನಾಟಕ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
- DYES ಕರ್ನಾಟಕ ನೇಮಕಾತಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ವೃತ್ತಿ ಜೀವನದ ಮೇಲೆ ಕ್ಲಿಕ್ ಮಾಡಿ
- ಮೆಂಟರ್ಸ್ ಹುದ್ದೆಗಳಿಗೆ ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಅಥವಾ ಅಧಿಸೂಚನೆ ಲಿಂಕ್ನಿಂದ ಡೌನ್ಲೋಡ್ ಮಾಡಿ.
- ನಂತರ, ಅರ್ಜಿ ನಮೂನೆಯನ್ನು ಸಂಬಂಧಿತ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಸ್ಪೀಡ್ ಪೋಸ್ಟ್ ಮಾಡಿ
ಅರ್ಜಿ ಕಳುಹಿಸುವ ವಿಳಾಸ :
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕರು
ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ
ಬೆಂಗಳೂರು – 560001
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 18 ಸೆಪ್ಟೆಂಬರ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12 ಅಕ್ಟೋಬರ್ 2025
ಪ್ರಮುಖ ಲಿಂಕ್ ಗಳು
ಅಧಿಸೂಚನೆ ಲಿಂಕ್ : ಮೇಲೆ ಕ್ಲಿಕ್ ಮಾಡಿ
ಅಪ್ಲಿಕೇಶನ್ ಲಿಂಕ್ : ಮೇಲೆ ಕ್ಲಿಕ್ ಮಾಡಿ