IPPB ನೇಮಕಾತಿ 2025 : ಕೇಂದ್ರ ಸರ್ಕಾರ ಅಧೀನದಲ್ಲಿ ಬರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಒಟ್ಟು 309 ಸಹಾಯಕ ವ್ಯವಸ್ಥಾಪಕ, ಜೂನಿಯರ್ ಅಸೋಸಿಯೇಟ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. IPPB ನೇಮಕಾತಿಯ ಹುದ್ದೆಯ ವಿವರಗಳು, ಅರ್ಜಿ ಶುಲ್ಕ, ಅರ್ಹತಾ ಮಾನದಂಡಗಳ ವಿವರಗಳು, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.
ಸೂಚನೆ : ನಾವು ನೀಡುವಂತಹ ಉದ್ಯೋಗ ಮಾಹಿತಿಗಳು ನಿಮಗೆ ಇಷ್ಟವಾದರೆ ತಪ್ಪದೇ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಶೇರ್ ಮಾಡುವುದನ್ನು ಮರೆಯಬೇಡಿ
IPPB ನೇಮಕಾತಿ 2025 :
IPPB ನೇಮಕಾತಿಯ ಪ್ರಮುಖ ವಿವರಗಳು
- ಸಂಸ್ಥೆಯ ಹೆಸರು : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB)
- ಹುದ್ದೆಯ ಹೆಸರು : ಜೂನಿಯರ್ ಅಸೋಸಿಯೇಟ್, ಸಹಾಯಕ ವ್ಯವಸ್ಥಾಪಕ
- ಒಟ್ಟು ಹುದ್ದೆಗಳು : 309 ಹುದ್ದೆಗಳು
- ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ : ಅಖಿಲ ಭಾರತ
ಹುದ್ದೆಗಳ ವಿವರಗಳು
- ಸಹಾಯಕ ವ್ಯವಸ್ಥಾಪಕರು : 110 ಹುದ್ದೆಗಳು
- ಜೂನಿಯರ್ ಅಸೋಸಿಯೇಟ್ : 199 ಹುದ್ದೆಗಳು
IPPB ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು
ಶೈಕ್ಷಣಿಕ ಅರ್ಹತೆ :
IPPB ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.
ISRO NRSC ನೇಮಕಾತಿ ತಂತ್ರಜ್ಞ ಮತ್ತು ಡ್ರಾಫ್ಟ್ಸ್ ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಯೋಮಿತಿ :
- ಆಕಾಂಕ್ಷಿಗಳ ಕನಿಷ್ಠ ವಯಸ್ಸು : 20 ವರ್ಷಗಳು
- ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು
- ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಮಾಸಿಕ ವೇತನ
IPPB ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.
ಅರ್ಜಿ ಶುಲ್ಕ
- ಭಾರತೀಯ ಅಂಚೆ ಪಾವತಿ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ ಎಲ್ಲಾ ವರ್ಗಗಳ ಆಕಾಂಕ್ಷಿಗಳಿಗೂ : 750/-ನಿಗದಿ ಮಾಡಲಾಗಿದೆ
ಪಾವತಿ ವಿಧಾನ : ಆಕಾಂಕ್ಷಿಗಳು ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ
- ಮೌಲ್ಯಮಾಪನ
- ಆನ್‌ಲೈನ್ ಪರೀಕ್ಷೆ
- ಗುಂಪು ಚರ್ಚೆ
- ಸಂದರ್ಶನ
IPPB ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
- IPPB ನೇಮಕಾತಿ ಅಧಿಕರತ ವೆಬ್ಸೈಟ್ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್ ಮಾಡಿ,
- ಮಾನ್ಯ ಇ-ಮೇಲ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನೋಂದಾಯಿಸಿ
- ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
- ನಿಮ್ಮ ಛಾಯಾಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿ
- ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
- ಭವಿಷ್ಯ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ.
IPPB ನೇಮಕಾತಿ 2025 : ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 11 ನವೆಂಬರ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01 ಡಿಸೆಂಬರ್ 2025
ಪ್ರಮುಖ ಲಿಂಕ್ ಗಳು
| ಪರಿವಿಡಿ | ಲಿಂಕ್ |
|---|---|
| ಅಧಿಸೂಚನೆ ಲಿಂಕ್ | ಮೇಲೆ ಕ್ಲಿಕ್ ಮಾಡಿ |
| ಅಪ್ಲಿಕೇಶನ್ ಲಿಂಕ್ | ಮೇಲೆ ಕ್ಲಿಕ್ ಮಾಡಿ |