afp header code starts here --> afp header code starts here -->

Tag: Horticulture Department Notification

  • ಕೊಡಗು ತೋಟಗಾರಿಕೆ ಇಲಾಖೆ ನೇಮಕಾತಿ 2025 || ಸಹಾಯಕ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ

    ತೋಟಗಾರಿಕೆ ಇಲಾಖೆ ನೇಮಕಾತಿ 2025 : ಕೊಡಗು ಜಿಲ್ಲೆ ತೋಟಗಾರಿಕೆ ಇಲಾಖೆಯು 2025–26 ನೇ ಸಾಲಿನ ಕೌಟುಂಬಿಕ ತೋಟಗಾರಿಕೆ ಯೋಜನೆ ಅಡಿಯಲ್ಲಿ ಒಟ್ಟು 01  ಸಹಾಯಕ ಯೋಜನಾ ವ್ಯವಸ್ಥಾಪಕರ ಹುದ್ದೆಗೆ  ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗೆ ಆಕಾಂಕ್ಷಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ತೋಟಗಾರಿಕೆ ಇಲಾಖೆಯಲ್ಲಿ ಕೆಲಸವನ್ನು ಮಾಡಲು ಬಯಸುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ. ಹಾಗೂ ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಈಗಲೇ ಅರ್ಜಿ ಸಲ್ಲಿಸಬಹುದಾಗಿದೆ. ತೋಟಗಾರಿಕೆ ಇಲಾಖೆಯ ನೇಮಕಾತಿಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    ಕೊಡಗು ತೋಟಗಾರಿಕೆ ಇಲಾಖೆ ನೇಮಕಾತಿ 2025 : ನೇಮಕಾತಿಯ ಹೈಲೈಟ್ಸ್‌
    • ಸಂಸ್ಥೆಯ ಹೆಸರು : ತೋಟಗಾರಿಕೆ ಇಲಾಖೆ
    • ಹುದ್ದೆಯ ಹೆಸರು : ಸಹಾಯಕ ಯೋಜನಾ ವ್ಯವಸ್ಥಾಪಕರು
    • ಒಟ್ಟು ಹುದ್ದೆಗಳು : 01 ಹುದ್ದೆ
    • ಅರ್ಜಿ ಸ್ವರೂಪ : ಆಫ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಕೊಡಗು ಜಿಲ್ಲೆ, ಮಡಿಕೇರಿ
    ಅರ್ಹತಾ ಮಾನದಂಡಗಳ ವಿವರಗಳು

    ಶೈಕ್ಷಣಿಕ ಅರ್ಹತೆ :

    • ಅಧಿಸೂಚನೆಯ ನಿಯಮಗಳ ಪ್ರಕಾರ ಆಕಾಂಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ (ಕೃಷಿ/ ತೋಟಗಾರಿಕೆ/ ಮೀನುಗಾರಿಕೆ/ ಅರಣ್ಯ/ ರೇಷ್ಮೆ) ಪಡೆದಿರಬೇಕು.
    • ಕನಿಷ್ಠ 2 ವರ್ಷ ಕೃಷಿ ವಿಸ್ತರಣಾ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ಅನುಭವ ಹೊಂದಿರಬೇಕು

    ವಯೋಮಿತಿ :

    • ಆಕಾಂಕ್ಷಿಗಳ ಗರಿಷ್ಠ ವಯಷ್ಷು : 45 ವರ್ಷಗಳು
    • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
    ಮಾಸಿಕ ವೇತನ

    ಅಧಿಸೂಚನೆಯ ನಿಯಮಗಳ ಪ್ರಕಾರ, ಆಯ್ಕೆಯಾದ ಅಕಾಂಕ್ಷಿಗಳಿಗೆ ರೂ. 30,000 ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ

    ಆಯ್ಕೆ ಪ್ರಕ್ರಿಯೆ

    ಆಕಾಂಕ್ಷಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಕೊಡಗು ತೋಟಗಾರಿಕೆ ಇಲಾಖೆ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • ಆಕಾಂಕ್ಷಿಗಳು ಮೊದಲಿಗೆ ಇಲಾಖೆ ವೆಬ್ಸೈಟ್‌ ಗೆ ಭೇಟಿ ನೀಡಿ, ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
    • ನಂತರ ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಅಗತ್ಯ ಮಾಹಿತಿಯನ್ನು ( ಆಕಾಂಕ್ಷಿಗಳ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ, ಪ್ರಮಾಣ ಪತ್ರ, ಅಂಕಪಟ್ಟಿಗಳು ) ಭರ್ತಿ ಮಾಡಿ.
    • ಭರ್ತಿ ಮಾಡಿದ ಅರ್ಜಿಯ ಮೇಲ್ಭಾಗದಲ್ಲಿ “ಅಪ್ಲಿಕೇಶನ್ ಫಾರ್ ಅಸಿಸ್ಟೆಂಟ್ ಪ್ರಾಜೆಕ್ಟ್ ಮ್ಯಾನೇಜರ್” ಎಂದು ಸ್ಪಷ್ಟವಾಗಿ ಬರೆದು , ಕೆಳಗೆ ನೀಡಲಾದ ವಿಳಾಸಕ್ಕೆ ಸ್ಪೀಡ್‌ ಪೋಸ್ಟ್‌ ಮಾಡಿ
    ಅರ್ಜಿ ಸಲ್ಲಿಸಬೇಕಾದ ವಿಳಾಸ:

    ಉಪನಿರ್ದೇಶಕರ ಕಚೇರಿ,
    ತೋಟಗಾರಿಕೆ ಇಲಾಖೆ,
    ಜಿಲ್ಲಾ ತೋಟಗಾರಿಕೆ ಕಚೇರಿ,
    ಮಡಿಕೇರಿ – 571201,
    ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ

    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 24 ಜೂನ್ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05 ಜುಲೈ 2025
    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ / ಅಪ್ಲಿಕೇಶನ್‌ ಲಿಂಕ್ : ಮೇಲೆ ಕ್ಲಿಕ್‌ ಮಾಡಿ