afp header code starts here --> afp header code starts here -->

Tag: IRCTC

  • IRCTC : ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ನೇಮಕಾತಿ 2025 || 50 ಹುದ್ದೆಗಳಿಗೆ ವಾಕ್-ಇನ್ ಸಂದರ್ಶನದ ಮೂಲಕ ಅರ್ಜಿ ಆಹ್ವಾನಿಸಿದೆ

    IRCTC ನೇಮಕಾತಿ 2025 : ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ದಲ್ಲಿ ಒಟ್ಟು 50 ಹಾಸ್ಪಿಟಾಲಿಟಿ ಮಾನಿಟರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಹಾಗೂ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ ಕೆಲಸವನ್ನು ಬಯಸುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಅಧಿಸೂಚನೆಯನ್ನು ಓದಬಹುದು. ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ನೇಮಕಾತಿಯ ಹುದ್ದೆಯ ವಿವರಗಳು, ಅರ್ಜಿ ಶುಲ್ಕ, ಅರ್ಹತಾ ಮಾನದಂಡಗಳ ವಿವರಗಳು, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿಸುಕೊಳ್ಳಬಹುದು.

    IRCTC ನೇಮಕಾತಿ 2025

    IRCTC ನೇಮಕಾತಿಯ ಪ್ರಮುಖ ಅಂಶಗಳು

    • ಸಂಸ್ಥೆಯ ಹೆಸರು : ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC)
    • ಹುದ್ದೆಯ ಹೆಸರು : ಹಾಸ್ಪಿಟಾಲಿಟಿ ಮಾನಿಟರ್
    • ಒಟ್ಟು ಹುದ್ದೆಗಳು : 50 ಹುದ್ದೆಗಳು
    • ಅರ್ಜಿ ಸ್ವರೂಪ : ನೇರ ಸಂದರ್ಶನದ ಮೂಲಕ
    • ಉದ್ಯೋಗ ಸ್ಥಳ : ಅಖಿಲ ಭಾರತ

    ಹುದ್ದೆಗಳ ವಿವರಗಳು

    • ಹಾಸ್ಪಿಟಾಲಿಟಿ ಮಾನಿಟರ್ : 50 ಹುದ್ದೆಗಳು

    IRCTC ನೇಮಕಾತಿ 2025 : ಅರ್ಹತಾ ಮಾದಂಡಗಳ ವಿವರಗಳು

    ಶೈಕ್ಷಣಿಕ ಅರ್ಹತೆ :

    IRCTC ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಕೆಳಗಿರುವ ಅರ್ಹತೆಯನ್ನು ಪೂರೈಸಿರಬೇಕು

    • ಹೋಟೆಲ್ ಆಡಳಿತದಲ್ಲಿ ಬಿ.ಎಸ್ಸಿ.
    • ಭಾರತೀಯ ಪಾಕಶಾಲೆಯ ಸಂಸ್ಥೆಯಿಂದ ಬಿಬಿಎ/ಎಂಬಿಎ 
    • ಯುಜಿಸಿ/ಎಐಸಿಟಿಇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಅಡುಗೆ ವಿಜ್ಞಾನ
    • ಯುಜಿಸಿ/ಎಐಸಿಟಿಇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಎ (ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣೆ)

    ವಯೋಮಿತಿ :

    ಆಕಾಂಕ್ಷಿಗಳ ಗರಿಷ್ಠ ವಯಸ್ಸು :  28 ವರ್ಷಗಳು

    ವಯೋಮಿತಿ ಸಡಿಲಿಕೆ:

    • ಒಬಿಸಿ ಆಕಾಂಕ್ಷಿಗಳು : 3 ವರ್ಷಗಳು
    • ಎಸ್‌ ಸಿ / ಎಸ್‌ ಟಿ ಆಕಾಂಕ್ಷಿಗಳು : 5 ವರ್ಷಗಳು
    • ಪಿಡಬ್ಲ್ಯೂಡಿ ಆಕಾಂಕ್ಷಿಗಳು : 10 ವರ್ಷಗಳು

    ಮಾಸಿಕ ವೇತನ

    RCTC ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ ರೂ. 30,000/- ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ

    ಆಯ್ಕೆ ಪ್ರಕ್ರಿಯೆ

    ಅಧಿಸೂಚನೆಯ ನಿಯಮಗಳ ಪ್ರಕಾರ ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡುಯುತ್ತದೆ

    IRCTC ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    IRCTC ನೇಮಕಾತಿಯಲ್ಲಿ ಉದ್ಯೋಗವನ್ನು ಬಯಸುವ ಆಕಾಂಕ್ಷಿಗಳು ಅಗತ್ಯ ದಾಖಲೆಗಳೊಂದಿಗೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

    ನೇರ ಸಂದರ್ಶನ ನಡೆಸುವ ವಿಳಾಸ :

    IRCTC ವಲಯ ಕಚೇರಿ 3 ಕೊಯಿಲಾಘಾಟ್ ಬೀದಿ, ನೆಲ ಮಹಡಿ ಕೋಲ್ಕತ್ತಾ-700 001

    IRCTC ನೇಮಕಾತಿ 2025 : ಪ್ರಮುಖ ದಿನಾಂಕಗಳು

    • ಅಧಿಸೂಚನೆ ಬಿಡುಗಡೆ ದಿನಾಂಕ : 24 ನವೆಂಬರ್ 2025
    • ವಾಕ್-ಇನ್ ಸಂದರ್ಶನ ದಿನಾಂಕಗಳು : 08ನೇ, 09ನೇ, 10ನೇ ಡಿಸೆಂಬರ್ 2025

    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
    ಅಧಿಕೃತ ವೆಬ್ಸೈಟ್ಮೇಲೆ ಕ್ಲಿಕ್‌ ಮಾಡಿ

    ಪ್ರಶ್ನೋತ್ತರಗಳು (FAQs)

    1 . IRCTC ನೇಮಕಾತಿಯ ವಿಸ್ತೃತ ರೂಪ ಏನು? IRCTC ನೇಮಕಾತಿಯ ವಿಸ್ತೃತ ರೂಪ, ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ

    2. ನೇಮಕಾತಿಯ ಒಟ್ಟು ಹುದ್ದೆಗಳ ಸಂಖ್ಯೆ ಎಷ್ಟು? IRCTC ನೇಮಕಾತಿಯ ಒಟ್ಟು ಹುದ್ದೆಗಳ ಸಂಖ್ಯೆ 50 ಹುದ್ದೆಗಳು.

    3. IRCTC ನೇಮಕಾತಿಯ ಉದ್ಯೋಗ ಸ್ಥಳ ಯಾವುದು? ಅಖಿಲ ಭಾರತದಾದ್ಯಂತ IRCTC ಕೆಲಸವನ್ನು ಮಾಡಬಹುದು.

    4. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ ಗರಿಷ್ಠ ವಯಸ್ಸು ಎಷ್ಟಿರಬೇಕು? ನೇಮಕಾತಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ ಗರಿಷ್ಠ ವಯಸ್ಸು  28 ವರ್ಷಗಳು ಮೀರಿರಬಾರದು.

    5. ಹಾಸ್ಪಿಟಾಲಿಟಿ ಮಾನಿಟರ್ ಹುದ್ದೆಗಳ ಮಾಸಿಕ ವೇತನ ಏನು? ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ ರೂ. 30,000/- ಮಾಸಿಕ ವೇತನವನ್ನು ನೀಡಲಾಗುತ್ತದೆ.

    6. ಹಾಸ್ಪಿಟಾಲಿಟಿ ಮಾನಿಟರ್ ನೇಮಕಾತಿಗೆ ಅರ್ಜಿ ಶುಲ್ಕವೇನು? ಅಧಿಸೂಚನೆಯ ಪ್ರಕಾರ, ಯಾವುದೇ ಅರ್ಜಿ ಶುಲ್ಕವಿಲ್ಲ.

    7. ಈ ನೇಮಕಾತಿಯ ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತದೆ? ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ಇರುತ್ತದೆ.

    8. ವಾಕ್-ಇನ್ ಸಂದರ್ಶನ ನಡೆಯುವ ಸ್ಥಳ ಯಾವುದು? ವಾಕ್-ಇನ್ ಸಂದರ್ಶನ ನಡೆಯುವ ಸ್ಥಳ – IRCTC ವಲಯ ಕಚೇರಿ 3 ಕೊಯಿಲಾಘಾಟ್ ಬೀದಿ, ನೆಲ ಮಹಡಿ ಕೋಲ್ಕತ್ತಾ-700 001

    9. ದಿನಾಂಕದಂದು ವಾಕ್-ಇನ್ ಸಂದರ್ಶನ ನಡೆಯುತ್ತದೆ? 08ನೇ, 09ನೇ, 10ನೇ ಡಿಸೆಂಬರ್ 2025 ರಂದು ವಾಕ್-ಇನ್ ಸಂದರ್ಶನ ನಡೆಯುತ್ತದೆ.

    10. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಿರಬೇಕು? ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪಾಕಶಾಲೆಯಲ್ಲಿ ಬಿ ಎಸ್ಸಿ, ಬಿಬಿಎ, ಎಂಬಿಎ ಪೂರ್ಣಗೊಳಿಸಿರಬೇಕು.

  • IRCTC ಅಪ್ರೆಂಟಿಸ್ ನೇಮಕಾತಿ 2025 || ಒಟ್ಟು 25 ಹುದ್ದೆಗಳಿಗೆ ಆನ್ಲೈನ್‌ ನಲ್ಲಿ ಅರ್ಜಿ ಆಹ್ವಾನ

    IRCTC ಅಪ್ರೆಂಟಿಸ್ ನೇಮಕಾತಿ 2025 : ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ( IRCTC ಭಾರತೀಯ ರೈಲ್ವೆಯ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್‌) ದಕ್ಷಿಣ ವಲಯದಲ್ಲಿ ಒಟ್ಟು 25 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕೇರಳ – ಕರ್ನಾಟಕ- ತಮಿಳುನಾಡು ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಆಕಾಂಕ್ಷಿಗಳು ಕೊನೆಯ ದಿನಾಂಕದೊಳಗೆ ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

    IRCTC ಅಪ್ರೆಂಟಿಸ್ ನೇಮಕಾತಿ 2025 ಹುದ್ದೆಯ ವಿವರ, ಅರ್ಹತಾ ಮಾನದಂಡಗಳು, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

    IRCTC ಅಪ್ರೆಂಟಿಸ್ ನೇಮಕಾತಿ 2025 : ನೇಮಕಾತಿಯ ವಿವರ
    • ಸಂಸ್ಥೆಯ ಹೆಸರು : ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC)
    • ಹುದ್ದೆಯ ಹೆಸರು : ಅಪ್ರೆಂಟಿಸ್ ಹುದ್ದೆಗಳು
    • ಒಟ್ಟು ಹುದ್ದೆಗಳು : 25 ಹುದ್ದೆಗಳು
    • ವರ್ಗ : ಕೇಂದ್ರ ಸರ್ಕಾರಿ ಉದ್ಯೋಗಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಕರ್ನಾಟಕ – ತಮಿಳುನಾಡು – ಕೇರಳ 
    IRCTC ಅಪ್ರೆಂಟಿಸ್ ನೇಮಕಾತಿ 2025 : ಹುದ್ದೆಯ ವಿವರಗಳು
    • ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟಂಟ್ (COPA): 05
    • ಕಾರ್ಯನಿರ್ವಾಹಕ – ಸಂಗ್ರಹಣೆ : 10
    • ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ವೇತನದಾರರ ಪಟ್ಟಿ ಮತ್ತು ಉದ್ಯೋಗಿ ದತ್ತಾಂಶ ನಿರ್ವಹಣೆ – 02
    • ಕಾರ್ಯನಿರ್ವಾಹಕ-ಮಾನವ ಸಂಪನ್ಮೂಲ – 01
    • ಸಿಎಸ್ಆರ್ ಕಾರ್ಯನಿರ್ವಾಹಕರು – 01
    • ಮಾರ್ಕೆಟಿಂಗ್ ಅಸೋಸಿಯೇಟ್ ತರಬೇತಿ – 04
    • ಐಟಿ ಬೆಂಬಲ ಕಾರ್ಯನಿರ್ವಾಹಕ – 02
    IRCTC ಅಪ್ರೆಂಟಿಸ್ ನೇಮಕಾತಿ 2025 : ಅರ್ಹತಾ ಮಾನದಂಡಗಳು

    ವಿದ್ಯಾರ್ಹತೆ :

    ಅಧಿಸೂಚನೆಯ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ವಿದ್ಯಾರ್ಹತೆಯನ್ನು ಗುರುತಿಸಲಾಗುತ್ತದೆ. ಆಕಾಂಕ್ಷಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಐಟಿಐ ಪದವಿ, ಯಾವುದೇ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.

    ವಯೋಮಿತಿ :

    ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ,

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 15 ವರ್ಷಗಳು
    • ಆಕಾಂಕ್ಷಿಳ ಗರಿಷ್ಠ ವಯಸ್ಸು : 25 ವರ್ಷಗಳು

    ವಯೋಮಿತಿ ಸಡಿಲಿಕೆ :

    • ಎಸ್‌ ಸಿ / ಎಸ್‌ ಟಿ ಆಕಾಂಕ್ಷಿಗಳಿಗೆ : 5 ವರ್ಷಗಳು
    • ಓಬಿಸಿ ಆಕಾಂಕ್ಷಿಗಳಿಗೆ : 3 ವರ್ಷಗಳು
    • ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳಿಗೆ : 10 ವರ್ಷಗಳು
    IRCTC ಅಪ್ರೆಂಟಿಸ್ ನೇಮಕಾತಿ 2025 : ಮಾಸಿಕ ವೇತನ

    ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ  ರೂ.5000-9000/- ರವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    IRCTC ಅಪ್ರೆಂಟಿಸ್ ನೇಮಕಾತಿ 2025 : ಅರ್ಜಿ ಶುಲ್ಕ

    ಅರ್ಜಿ ಶುಲ್ಕವನ್ನು ಉಲ್ಲೇಖಿಸಿಲ್ಲ

    IRCTC ಅಪ್ರೆಂಟಿಸ್ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    • ಮೆರಿಟ್ ಪಟ್ಟಿ,
    • ದಾಖಲೆಗಳ ಪರಿಶೀಲನೆ
    IRCTC ಅಪ್ರೆಂಟಿಸ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ
    • IRCTC ಅಪ್ರೆಂಟಿಸ್ ಟ್ರೈನೀಸ್ ಅಪ್ಲೈ ಲಿಂಕ್ ಮೇಲೆ ಕ್ಲಿಕ್ ಮಾಡಿ.
    • ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ
    • ಛಾಯಾಚಿತ್ರ, ಸಹಿ, ಅಗತ್ಯವಿರುವ ಪ್ರಮಾಣ ಪತ್ರಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ
    • ಅರ್ಜಿ ಶುಲ್ಕವನ್ನು ಆನ್ಲೈನ್‌ ಮೂಲಕ ಪಾವತಿಸಿ. ( ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    IRCTC ಅಪ್ರೆಂಟಿಸ್ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 24 ಮಾರ್ಚ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07 ಏಪ್ರಿಲ್ 2025
    IRCTC ಅಪ್ರೆಂಟಿಸ್ ನೇಮಕಾತಿ 2025 : ಪ್ರಮುಖ ಲಿಂಕ್‌ ಗಳು