afp header code starts here --> afp header code starts here -->

Tag: NMDC 246 post job update 2025

  • NMDC ಸ್ಟೀಲ್‌ ಲಿಮಿಟೆಡ್‌ ಕಾರ್ಯನಿರ್ವಾಹಕರ ನೇಮಕಾತಿ 2025 || ಒಟ್ಟು 246 ಹುದ್ದೆಗಳಿಗೆ ಅರ್ಜಿ ಆಹ್ವಾನ

    NMDC ಸ್ಟೀಲ್ ಲಿಮಿಟೆಡ್ ಕಾರ್ಯನಿರ್ವಾಹಕರ ನೇಮಕಾತಿ 2025: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (NMDC ಸ್ಟೀಲ್) ಒಟ್ಟು 246 ಕಾರ್ಯನಿರ್ವಾಹಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ವಿವಿಧ ವಿಭಾಗಗಳಲ್ಲಿ ಪದವಿ ಪೂರ್ಣಗೊಳಿಸಿರುವ ಆಕಾಂಕ್ಷಿಗಳು ಈ ನೇಮಕಾತಿಗೆ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. NMDC ಸ್ಟೀಲ್ ಲಿಮಿಟೆಡ್ ನೇಮಕಾತಿಯೂ ಛತ್ತೀಸ್‌ಗಢದ ನಾಗರ್ನಾರ್‌ನ NMDC ಸ್ಟೀಲ್ ಲಿಮಿಟೆಡ್‌ನಲ್ಲಿ ನೇಮಕಾತಿಗಾಗಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ.

    ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಆಕಾಂಕ್ಷಿಗಳು ಕೊನೆಯ ದಿನಾಂಕದೊಳಗೆ NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 ರ ಅಧಿಕೃತ ವಬ್ಸೈಟ್‌ ಮೂಲಕ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿಯ ವಿವರಗಳು, ಅರ್ಹತಾ ಮಾನದಂಡಗಳು, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ನೇಮಕಾತಿಯ ವಿವರ
    • ಸಂಸ್ಥೆಯ ಹೆಸರು : NMDC ಸ್ಟೀಲ್ ಲಿಮಿಟೆಡ್
    • ಹುದ್ದೆಯ ಹೆಸರು : ವಿವಿಧ ಕಾರ್ಯನಿರ್ವಾಹಕರ ಹುದ್ದೆಗಳು
    • ಒಟ್ಟು ಹುದ್ದೆಗಳು : 246 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಛತ್ತೀಸ್‌ಗಢ
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಹುದ್ದೆಗಳ ವಿವರ
    • ಉಪ ಪ್ರಧಾನ ವ್ಯವಸ್ಥಾಪಕರು : 29 ಹುದ್ದೆಗಳು
    • ಸಹಾಯಕ ಪ್ರಧಾನ ವ್ಯವಸ್ಥಾಪಕರು : 48 ಹುದ್ದೆಗಳು
    • ಹಿರಿಯ ವ್ಯವಸ್ಥಾಪಕರು : 48 ಹುದ್ದೆಗಳು
    • ವ್ಯವಸ್ಥಾಪಕ : 76 ಹುದ್ದೆಗಳು
    • ಉಪ ವ್ಯವಸ್ಥಾಪಕರು : 34 ಹುದ್ದೆಗಳು
    • ಸಹಾಯಕ ವ್ಯವಸ್ಥಾಪಕ :11 ಹುದ್ದೆಗಳು
    • ಒಟ್ಟು 246 ಹುದ್ದೆಗಳು
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಅರ್ಹತಾ ಮಾನದಂಡಗಳು

    ವಿದ್ಯಾರ್ಹತೆ :

    • ಆಕಾಂಕ್ಷಿಗಳು ಬಿ.ಎಸ್ಸಿ, ಬಿ.ಟೆಕ್/ ಬಿಇ (ಸಂಬಂಧಿತ ಎಂಜಿನಿಯರಿಂಗ್ ಕ್ಷೇತ್ರಗಳು) ಹೊಂದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ತತ್ಸಮಾನ ಪದವಿಯನ್ನು ಹೊಂದಿರಬೇಕು. 
    • ಪೋಸ್ಟ್ ಲೆವೆಲ್ ಪ್ರಕಾರ 2 ವರ್ಷ (AM) ರಿಂದ 15 ವರ್ಷಗಳ (DGM) ವರೆಗಿನ ಕೆಲಸದ ಅನುಭವದ ಅಗತ್ಯವಿದೆ.

    ವಯೋಮಿತಿ :

    • ಉಪ ಪ್ರಧಾನ ವ್ಯವಸ್ಥಾಪಕರಿಗೆ (M-8): ಗರಿಷ್ಠ 52 ವರ್ಷಗಳು
    • ಸಹಾಯಕ ಪ್ರಧಾನ ವ್ಯವಸ್ಥಾಪಕರು, ಹಿರಿಯ ವ್ಯವಸ್ಥಾಪಕರು, ವ್ಯವಸ್ಥಾಪಕ, ಉಪ ವ್ಯವಸ್ಥಾಪಕರು ,ಸಹಾಯಕ ವ್ಯವಸ್ಥಾಪಕ : ಗರಿಷ್ಠ 45 ವರ್ಷಗಳು
    • ಎಸ್‌ ಸಿ /ಎಸ್‌ ಟಿ : 5 ವರ್ಷಗಳು
    • ಒಬಿಸಿ : 3 ವರ್ಷಗಳು
    • ಅಂಗವಿಕಲತೆ : 10 ವರ್ಷಗಳು
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಮಾಸಿಕ ವೇತನ

    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ ,ಆಯ್ಕೆಯಾದ ಆಕಾಂಕ್ಷಿಗಳಿಗೆ ಹುದ್ದೆಗಳಿಗೆ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    • ಉಪ ಪ್ರಧಾನ ವ್ಯವಸ್ಥಾಪಕರು (M-8) : 1,20,000-2,80,o000/-
    • -ಸಹಾಯಕ ಪ್ರಧಾನ ವ್ಯವಸ್ಥಾಪಕರು (M-7) : 1,00,000-2,60,000/-
    • ಹಿರಿಯ ವ್ಯವಸ್ಥಾಪಕರು (M-6) : 90,000-2,40,000/-
    • ವ್ಯವಸ್ಥಾಪಕ (M-5 ) : 80,000-2,20.000/-
    • ಉಪ ವ್ಯವಸ್ಥಾಪಕ (M-4) : 70,000-2,00,000/-
    • ಸಹಾಯಕ ವ್ಯವಸ್ಥಾಪಕ (M-3) : 60,000-1,80,000/-
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
    • ಸಾಮಾನ್ಯ / ಒಬಿಸಿ ವರ್ಗದ ಆಕಾಂಕ್ಷಿಗಳಿಗೆ : ₹ 500/-
    • ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ /ಇಎಸ್‌ಎಂ ಆಕಾಂಕ್ಷಿಗಳಿಗೆ : ಶುಲ್ಕ ವಿನಾಯಿತಿ

    ಪಾವತಿ ವಿಧಾನ : ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಯುಪಿಐ / ನೆಟ್ ಬ್ಯಾಂಕಿಂಗ್ ಇತ್ಯಾದಿಗಳ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಬೇಕು

    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    ಆಕಾಂಕ್ಷಗಳ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

    • ಸಂದರ್ಶನ
    • ದಾಖಲೆ ಪರಿಶೀಲನೆ
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು

    • NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. https://nmdcsteel.nmdc.co.in
    • ವೃತ್ತಿ” ವಿಭಾಗಕ್ಕೆ ಹೋಗಿ ಎಕ್ಸಿಕ್ಯುಟಿವ್ ನೇಮಕಾತಿ 2025 ಮೇಲೆ ಕ್ಲಿಕ್ ಮಾಡಿ
    • ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿ.
    • ಅಗತ್ಯವಿರುವ ವೈಯಕ್ತಿಕ ದಾಖಲೆ, ಶೈಕ್ಷಣಿಕ ದಾಖಲೆಗಳನ್ನು ಅಪ್ಲೋಡ್‌ ಮಾಡಿ ( ಛಾಯಾಚಿತ್ರ, ಸಹಿ, ಮತ್ತು ಅಗತ್ಯವಿರುವ ಪ್ರಮಾಣಪತ್ರಗಳನ್ನುಸ್ಕ್ಯಾನ್‌ ಮಾಡಿ)
    • ಆನ್ಲೈನ್‌ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ.
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 18 ಮಾರ್ಚ್ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 7 ಏಪ್ರಿಲ್ 2025
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
    ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
    ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ