ಪ್ರಸಾರ ಭಾರತಿ ನೇಮಕಾತಿ 2025 : ʼಪ್ರಸಾರ ಭಾರತಿʼ ಭಾರತಿಯ ಬೆಂಗಳೂರು ದೂರದರ್ಶನ ಕೇಂದ್ರದ ಪ್ರಾದೇಶಿಕ ನ್ಯೂಸ್ ಘಟಕವು ಕರ್ನಾಟಕ ರಾಜ್ಯದ 29 ಜಿಲ್ಲೆಗಳಲ್ಲಿ ಒಪ್ಪಂದದ ಆಧಾರದ ಮೇಲೆ ಸ್ಟ್ರಿಂಗರ್‌ಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಪ್ರಸಾರ ಭಾರತಿ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ದೂರದರ್ಶನವು ಬೆಂಗಳೂರು ನಗರದಲ್ಲಿ 5 ಸ್ಟ್ರಿಂಗರ್‌ಗಳನ್ನು, ಹಾಗೂ ಪ್ರತಿ ಜಿಲ್ಲೆಯಲ್ಲಿ 2 ಸ್ಟ್ರಿಂಗರ್‌ಗಳನ್ನು ನೇಮಕ ಮಾಡಲು ಮುಂದಾಗಿದೆ. ಇದರ ಪ್ರಕಾರ ರಾಜ್ಯದಲ್ಲಿ 60 ಕ್ಕೂ ಹೆಚ್ಚು ಸ್ಟ್ರಿಂಗರ್‌ಗಳನ್ನು ಹೊಸದಾಗಿ ನೇಮಕ ಮಾಡಲಿದೆ.
ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರಸಾರ ಭಾರತಿ ನೇಮಕಾತಿ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.
ಪ್ರಸಾರ ಭಾರತಿ ನೇಮಕಾತಿ 2025 : ನೇಮಕಾತಿಯ ವಿವರಗಳು
- ಸಂಸ್ಥೆಯ ಹೆಸರು : ಪ್ರಸಾರ ಭಾರತಿ (ಬೆಂಗಳೂರು ದೂರದರ್ಶನ ಕೇಂದ್ರ)
- ಹುದ್ದೆಯ ಹೆಸರು : ಸ್ಟ್ರಿಂಗರ್‌ಗಳು
- ಒಟ್ಟು ಹುದ್ದೆಗಳು : 60ಕ್ಕೂ ಹೆಚ್ಚು ಹುದ್ದೆಗಳು
- ಅರ್ಜಿ ಸ್ವರೂಪ : ಆಫ್ಲೈನ್ ಮೂಲಕ
- ಉದ್ಯೋಗ ಸ್ಥಳ : ಕರ್ನಾಟಕದ 29 ಜಿಲ್ಲೆಗಳಲ್ಲಿ
ಈ ನೇಮಕಾತಿಯು ಸ್ಟ್ರಿಂಗರ್‌ಗಳನ್ನು ಒಪ್ಪಂದದ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದ್ದು, ಆಯ್ಕೆಯಾದ ಆಕಾಂಕ್ಷಿಗಳು ಬೆಂಗಳೂರಿನ ದೂರದರ್ಶನ ಕೇಂದ್ರದಲ್ಲಿರುವ ಪ್ರಾದೇಶಿಕ ಸುದ್ದಿ ಘಟಕದೊಂದಿಗೆ ಕೆಲಸ ಮಾಡುತ್ತಾರೆ.
ಪ್ರಸಾರ ಭಾರತಿ ನೇಮಕಾತಿ 2025 : ಅರ್ಹತಾ ಮಾನದಂಡಗಳು
ವಿದ್ಯಾರ್ಹತೆ :
ಪ್ರಸಾರ ಭಾರತಿ ಅಧಿಕೃತ ಅಧಿಸೂಚನೆಯ ಪ್ರಕಾರ ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಮಾಧ್ಯಮ, ಪತ್ರಿಕೋದ್ಯಮ ವಿಷಯದಲ್ಲಿ ಯುಜಿ, ಪಿಜಿ ಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ :
ಯಾವುದೇ ನಿರ್ದಿಷ್ಟ ವಯಸ್ಸಿನ ಮಿತಿಯನ್ನು ಉಲ್ಲೇಖಿಸಲಾಗಿಲ್ಲ
ಪ್ರಸಾರ ಭಾರತಿ ನೇಮಕಾತಿ 2025 : ಮಾಸಿಕ ವೇತನ
ಪ್ರಸಾರ ಭಾರತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ವರ್ಷಕ್ಕೆ ರೂ.4,00,000 – 5,00,000/- ವರೆಗೆ ವೇತನವನ್ನು ನೀಡಲಾಗುತ್ತದೆ.
ಪ್ರಸಾರ ಭಾರತಿ ನೇಮಕಾತಿ 2025 : ಅರ್ಜಿ ಶುಲ್ಕ
ಎಲ್ಲಾ ವರ್ಗದ ಆಕಾಂಕ್ಷಿಗಳಿಗೆ : 1,180/-
ಪ್ರಸಾರ ಭಾರತಿ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
ಪ್ರಸಾರ ಭಾರತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.
- ಶಾರ್ಟ್‌ಲಿಸ್ಟಿಂಗ್
- ದಾಖಲೆ ಪರಿಶೀಲನೆ
- ಸಂದರ್ಶನ
ಪ್ರಸಾರ ಭಾರತಿ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
- ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು
- ಅಧಿಕೃತ ವೆಬ್‌ಸೈಟ್‌ನಿಂದ ಅಥವಾ ಅಧಿಸೂಚನೆಯಲ್ಲಿ ಒದಗಿಸಲಾದ ಲಿಂಕ್‌ನಿಂದ ಡೌನ್‌ಲೋಡ್ ಮಾಡಿ.
- ಅಗತ್ಯವಿರುವ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ.
- ಐಡಿ ಪುರಾವೆ, ವಯಸ್ಸಿನ ಪುರಾವೆ, ಶೈಕ್ಷಣಿಕ ಪ್ರಮಾಣಪತ್ರಗಳು, ಫೋಟೋ, ರೆಸ್ಯೂಮ್ ಮತ್ತು ಅನುಭವ ಪತ್ರಗಳು ಯಾವುದಾದರೂ ಇದ್ದರೆ, ಅವುಗಳ ಸ್ವಯಂ-ದೃಢೀಕೃತ ಪ್ರತಿಗಳನ್ನು ಸೇರಿಸಿ
- ‘PRASAR BHARATI (IPSB) DOORDARSHAN BENGALUURU’ ಇವರ ಹೆಸರಿನಲ್ಲಿ ರೂ.1180 ಡಿಡಿ ತೆಗೆದು, ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ. ‘Mpanelment of Stringers for RNU, DDK, Bengaluru for (Distric Name)’ ಎಂದು ಅರ್ಜಿ ಲಕೋಟೆ ಮೇಲೆ ಬರೆದಿರಬೇಕು.
- ನಿಗದಿತ ರೀತಿಯಲ್ಲಿ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇತರ ಅಂಚೆ ಸೇವೆಯ ಮೂಲಕ ಕಳುಹಿಸಿ.
ಅರ್ಜಿ ಕಳುಹಿಸುವ ವಿಳಾಸ :
ನಿರ್ದೇಶಕರು ಸುದ್ದಿ, ಪ್ರಾದೇಶಿಕ ಸುದ್ದಿ ಘಟಕ, ದೂರದರ್ಶನ ಕೇಂದ್ರ, ಜೆ.ಸಿ. ನಗರ, ಬೆಂಗಳೂರು – 560006
ಪ್ರಸಾರ ಭಾರತಿ ನೇಮಕಾತಿ 2025 : ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 17 ಏಪ್ರಿಲ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16 ಮೇ 2025
ಪ್ರಸಾರ ಭಾರತಿ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
ಅಧಿಸೂಚನೆ ಲಿಂಕ್ : ಮೇಲೆ ಕ್ಲಿಕ್ ಮಾಡಿ
ಅಪ್ಲಿಕೇಶನ್ ಲಿಂಕ್ : ಮೇಲೆ ಕ್ಲಿಕ್ ಮಾಡಿ