afp header code starts here --> afp header code starts here -->

Tag: WCD Recruitment 2025

  • WCD ಮೈಸೂರು ನೇಮಕಾತಿ 2025 || ಒಟ್ಟು 319 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಆನ್ಲೈನ್‌ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ

    WCD ಮೈಸೂರು ನೇಮಕಾತಿ 2025 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮೈಸೂರು (WCD ಮೈಸೂರು) ಒಟ್ಟು 319 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಮೈಸೂರು ಜಿಲ್ಲೆ – ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. WCD ಮೈಸೂರು ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    WCD ಮೈಸೂರು ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮೈಸೂರು (WCD)
    • ಹುದ್ದೆಯ ಹೆಸರು : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯ ಹುದ್ದೆಗಳು
    • ಒಟ್ಟು ಹುದ್ದೆಗಳು : 319 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಮೈಸೂರು ಜಿಲ್ಲೆ
    ಹುದ್ದೆಯ ವಿವರಗಳು

    ಅಂಗನವಾಡಿ ಕಾರ್ಯಕರ್ತೆ : 68, ಅಂಗನವಾಡಿ ಸಹಾಯಕಿ : 251

    • ಬಿಳಿಗೆರೆ : ಅಂಗನವಾಡಿ ಕಾರ್ಯಕರ್ತೆ – 06, ಅಂಗನವಾಡಿ ಸಹಾಯಕಿ – 32
    • ಎಚ್.ಡಿ. ಕೋಟೆ : ಅಂಗನವಾಡಿ ಕಾರ್ಯಕರ್ತೆ – 22, ಅಂಗನವಾಡಿ ಸಹಾಯಕಿ -29
    • ಹುಣಸೂರು : ಅಂಗನವಾಡಿ ಕಾರ್ಯಕರ್ತೆ – 05, ಅಂಗನವಾಡಿ ಸಹಾಯಕಿ – 26
    • ಕೃಷ್ಣರಾಜನಗರ : ಅಂಗನವಾಡಿ ಕಾರ್ಯಕರ್ತೆ – 04, ಅಂಗನವಾಡಿ ಸಹಾಯಕಿ -22
    • ಮೈಸೂರು ಗ್ರಾಮೀಣ : ಅಂಗನವಾಡಿ ಕಾರ್ಯಕರ್ತೆ – 06, ಅಂಗನವಾಡಿ ಸಹಾಯಕಿ -12
    • ಮೈಸೂರು ನಗರ : ಅಂಗನವಾಡಿ ಕಾರ್ಯಕರ್ತೆ – 01, ಅಂಗನವಾಡಿ ಸಹಾಯಕಿ – 14
    • ನಂಜನಗೂಡು : ಅಂಗನವಾಡಿ ಕಾರ್ಯಕರ್ತೆ – 10, ಅಂಗನವಾಡಿ ಸಹಾಯಕಿ – 31
    • ಪಿರಿಯಾಪಟ್ಟಣ : ಅಂಗನವಾಡಿ ಕಾರ್ಯಕರ್ತೆ – 11, ಅಂಗನವಾಡಿ ಸಹಾಯಕಿ – 57
    • ಟಿ. ನರಸೀಪುರ : ಅಂಗನವಾಡಿ ಕಾರ್ಯಕರ್ತೆ – 03, ಅಂಗನವಾಡಿ ಸಹಾಯಕಿ – 28
    ಅರ್ಹತಾ ಮಾನದಂಡಗಳ ವಿವರ

    ವಿದ್ಯಾರ್ಹತೆ :

    ಅಧಿಸೂಚನೆಯ ನಿಯಮಗಳ ಪ್ರಕಾರ ಆಕಾಂಕ್ಷಿಗಳು 10ನೇ, 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 19 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು
    • ಅಧಿಸೂಚನೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
    WCD ಮೈಸೂರು ನೇಮಕಾತಿ 2025 : ವೇತನ ಶ್ರೇಣಿ

    ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ

    ಅರ್ಜಿ ಶುಲ್ಕ

    ಅರ್ಜಿ ಶುಲ್ಕವನ್ನು ಉಲ್ಲೇಖಿಸಿಲ್ಲ

    ಆಯ್ಕೆ ಪ್ರಕ್ರಿಯೆ

    WCD ಮೈಸೂರು ನೇಮಕಾತಿ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳನ್ನು ಮೆರಿಟ್‌ ಪಟ್ಟಿ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

    WCD ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಿನ ಹಂತಗಳನ್ನು ಅನುಸರಿಸಬೇಕು

    • WCD ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
    • ನೀವು ಈ ಹಿಂದೆ ನೋಂದಾಯಿಸಿಕೊಂಡಿದ್ದರೆ, ಬಳಕೆದಾರಹೆಸರು ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ. ನಿಮಗೆ ಬಳಕೆದಾರ ಐಡಿ (ಹೊಸ ಬಳಕೆದಾರ) ಇಲ್ಲದಿದ್ದರೆ ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್ ಮೂಲಕ ನೋಂದಾಯಿಸಿ.
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ ದಾಖಲೆ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ. (ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಲಗತ್ತಿಸಿ)
    • ನಿಮ್ಮ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕ
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 16 ಮೇ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ಜೂನ್‌ 2025
    ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • WCD ಬೆಂಗಳೂರು ನೇಮಕಾತಿ 2025 || ಒಟ್ಟು 222 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ…ಸಂಪೂರ್ಣ ಮಾಹಿತಿ

    WCD ಬೆಂಗಳೂರು ನೇಮಕಾತಿ 2025 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲೂಕಿನಲ್ಲಿ ಒಟ್ಟು 222 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಮಹಿಳಾ ಆಕಾಂಕ್ಷಿಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಕೆಲಸವನ್ನು ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ.

    ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು WCD ಬೆಂಗಳೂರು ನೇಮಕಾತಿ ವೆಬ್ಸೈಟ್‌ ನಲ್ಲಿ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. WCD ಬೆಂಗಳೂರು ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    WCD ಬೆಂಗಳೂರು ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ WCD
    • ಹುದ್ದೆಯ ಹೆಸರು : ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರು
    • ಒಟ್ಟು ಹುದ್ದೆಗಳು : 222 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಬೆಂಗಳೂರು (ಕರ್ನಾಟಕ)
    WCD ಬೆಂಗಳೂರು ನೇಮಕಾತಿ 2025 : ಹುದ್ದೆಯ ವಿವರಗಳು

    ಅಂಗನವಾಡಿ ಕಾರ್ಯಕರ್ತೆಯರು : 38

    • ದೇವನಹಳ್ಳಿ – 7
    • ದೊಡ್ಡಬಳ್ಳಾಪುರ –10
    • ಹೊಸಕೋಟೆ –10
    • ನೆಲಮಂಗಲ –11

    ಅಂಗನವಾಡಿ ಸಹಾಯಕರು : 184

    • ದೇವನಹಳ್ಳಿ – 33
    • ದೊಡ್ಡಬಳ್ಳಾಪುರ – 47
    • ಹೊಸಕೋಟೆ – 52
    • ನೆಲಮಂಗಲ – 52
    WCD ಬೆಂಗಳೂರು ನೇಮಕಾತಿ 2025 : ಅರ್ಹತಾ ಮಾನದಂಡಗಳು

    ವಿದ್ಯಾರ್ಹತೆ :

    • ಅಂಗನವಾಡಿ ಕಾರ್ಯಕರ್ತೆ –  ಪಿಯುಸಿ ಉತ್ತೀರ್ಣರಾಗಿರಬೇಕು.
    • ಅಂಗನವಾಡಿ ಸಹಾಯಕಿ – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 19 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಅಧಿಸೂಚನೆ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.

    WCD ಬೆಂಗಳೂರು ನೇಮಕಾತಿ 2025 : ಮಾಸಿಕ ವೇತನ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಮಾಸಿಕ ವೇತನವನ್ನು ನೀಡಲಾಗುತ್ತದೆ.

    WCD ಬೆಂಗಳೂರು ನೇಮಕಾತಿ 2025 : ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ

    WCD ಬೆಂಗಳೂರು ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    ಮೆರಿಟ್ ಆಧಾರದ ಮೇಲೆ ಆಯ್ಕೆಮಾಡಲಾಗುತ್ತದೆ.

    WCD ಬೆಂಗಳೂರು ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • WCD ಬೆಂಗಳೂರು ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೊಂದಾಯಿಸಿ.
    • ಅಗತ್ಯವಿರುವ ಶೈಕ್ಷಣಿಕ , ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಛಾಯಾಚಿತ್ರ, ಸಹಿ, ಪ್ರಮಾಣಪತ್ರಗಳು, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್ ಮಾಡಿ‌
    • ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿ ಸಂಖ್ಯೆಯನ್ನು ಸೆರೆಯಿಡಿಯಿರಿ.
    WCD ಬೆಂಗಳೂರು ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25 ಮಾರ್ಚ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಏಪ್ರಿಲ್ 2025
    WCD ಬೆಂಗಳೂರು ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ