afp header code starts here --> afp header code starts here -->

Tag: WCD state of Karnataka job vacancy recruitment

  • WCD ಬೆಂಗಳೂರು ನೇಮಕಾತಿ 2025 || ಒಟ್ಟು 222 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ…ಸಂಪೂರ್ಣ ಮಾಹಿತಿ

    WCD ಬೆಂಗಳೂರು ನೇಮಕಾತಿ 2025 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲೂಕಿನಲ್ಲಿ ಒಟ್ಟು 222 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಮಹಿಳಾ ಆಕಾಂಕ್ಷಿಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಕೆಲಸವನ್ನು ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ.

    ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು WCD ಬೆಂಗಳೂರು ನೇಮಕಾತಿ ವೆಬ್ಸೈಟ್‌ ನಲ್ಲಿ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. WCD ಬೆಂಗಳೂರು ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    WCD ಬೆಂಗಳೂರು ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ WCD
    • ಹುದ್ದೆಯ ಹೆಸರು : ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರು
    • ಒಟ್ಟು ಹುದ್ದೆಗಳು : 222 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಬೆಂಗಳೂರು (ಕರ್ನಾಟಕ)
    WCD ಬೆಂಗಳೂರು ನೇಮಕಾತಿ 2025 : ಹುದ್ದೆಯ ವಿವರಗಳು

    ಅಂಗನವಾಡಿ ಕಾರ್ಯಕರ್ತೆಯರು : 38

    • ದೇವನಹಳ್ಳಿ – 7
    • ದೊಡ್ಡಬಳ್ಳಾಪುರ –10
    • ಹೊಸಕೋಟೆ –10
    • ನೆಲಮಂಗಲ –11

    ಅಂಗನವಾಡಿ ಸಹಾಯಕರು : 184

    • ದೇವನಹಳ್ಳಿ – 33
    • ದೊಡ್ಡಬಳ್ಳಾಪುರ – 47
    • ಹೊಸಕೋಟೆ – 52
    • ನೆಲಮಂಗಲ – 52
    WCD ಬೆಂಗಳೂರು ನೇಮಕಾತಿ 2025 : ಅರ್ಹತಾ ಮಾನದಂಡಗಳು

    ವಿದ್ಯಾರ್ಹತೆ :

    • ಅಂಗನವಾಡಿ ಕಾರ್ಯಕರ್ತೆ –  ಪಿಯುಸಿ ಉತ್ತೀರ್ಣರಾಗಿರಬೇಕು.
    • ಅಂಗನವಾಡಿ ಸಹಾಯಕಿ – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 19 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಅಧಿಸೂಚನೆ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.

    WCD ಬೆಂಗಳೂರು ನೇಮಕಾತಿ 2025 : ಮಾಸಿಕ ವೇತನ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಮಾಸಿಕ ವೇತನವನ್ನು ನೀಡಲಾಗುತ್ತದೆ.

    WCD ಬೆಂಗಳೂರು ನೇಮಕಾತಿ 2025 : ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ

    WCD ಬೆಂಗಳೂರು ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    ಮೆರಿಟ್ ಆಧಾರದ ಮೇಲೆ ಆಯ್ಕೆಮಾಡಲಾಗುತ್ತದೆ.

    WCD ಬೆಂಗಳೂರು ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • WCD ಬೆಂಗಳೂರು ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೊಂದಾಯಿಸಿ.
    • ಅಗತ್ಯವಿರುವ ಶೈಕ್ಷಣಿಕ , ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಛಾಯಾಚಿತ್ರ, ಸಹಿ, ಪ್ರಮಾಣಪತ್ರಗಳು, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್ ಮಾಡಿ‌
    • ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿ ಸಂಖ್ಯೆಯನ್ನು ಸೆರೆಯಿಡಿಯಿರಿ.
    WCD ಬೆಂಗಳೂರು ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25 ಮಾರ್ಚ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಏಪ್ರಿಲ್ 2025
    WCD ಬೆಂಗಳೂರು ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • WCD ಕರ್ನಾಟಕ ನೇಮಕಾತಿ 2025 || ಒಟ್ಟು 2500 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ

    WCD ಕರ್ನಾಟಕ ನೇಮಕಾತಿ 2025 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯದಾದ್ಯಂತ ಚಿಕ್ಕಮಗಳೂರು ಜಿಲ್ಲೆ ಕಲಬುರಗಿ, ಬಾಗಲಕೋಟೆ ಹಾಗೂ ಹಲವಾರು ಜಿಲ್ಲೆಗಳಲ್ಲಿ ಒಟ್ಟು 2500 ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪಾಸಾದ ಮಹಿಳಾ ಆಕಾಂಕ್ಷಿಗಳು ಈ WCD ಕರ್ನಾಟಕ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಉದ್ಯೋಗಾಸಕ್ತ ಮಹಿಳೆಯರು, ಅರ್ಜಿ ಸಲ್ಲಿಸುವಾಗ ತಮ್ಮ ಜಿಲ್ಲೆ, ತಾಲ್ಲೂಕು, ಅಂಗನವಾಡಿ ಹುದ್ದೆ ಆಯ್ಕೆ ಮಾಡಿ, ತಮ್ಮ ವರ್ಗದ ಮಾಹಿತಿ ನೀಡಿ ಅರ್ಜಿ ಸಲ್ಲಿಸಲು ಮುಂದಾದಾಗ, ಹುದ್ದೆಗಳು ಇರುವ ಬಗ್ಗೆ ಖಚಿತ ಮಾಹಿತಿ ಸಿಗಲಿದೆ.

    ಆಕಾಂಕ್ಷಿಗಳು ಅರ್ಜಿ ಸಲ್ಲಿಸುವ ದಿನಾಂಕ ಈಗಾಗಲೇ ಆರಂಭವಾಗಿದ್ದು, ಕೊನೆಯ ದಿನಾಂಕದೊಳಗೆ WCD ಕರ್ನಾಟಕ ನೇಮಕಾತಿಯ ಅಧಿಕೃತ ವೆಬ್ಸೈಟ್‌ ಮೂಲಕ ಅರ್ಜಿ ಸಲ್ಲಿಸಿ. WCD ಕರ್ನಾಟಕ ನೇಮಕಾತಿಯ ಒಟ್ಟು ಹುದ್ದೆಗಳು, ಅರ್ಹತಾ ಮಾನದಂಡಗಳು, ವಯೋಮಿತಿ, ಮಾಸಿಕ ವೇತನ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕ ಹಾಗೂ ಇತರೆ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    WCD ಕರ್ನಾಟಕ ನೇಮಕಾತಿ 2025 : ನೇಮಕಾತಿಯ ವಿವರ
    • ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
    • ಹುದ್ದೆಯ ಹೆಸರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ
    • ಒಟ್ಟು ಹುದ್ದೆಗಳು : 2500 ಹುದ್ದೆಗಳು
    • ಉದ್ಯೋಗ ಸ್ಥಳ : ಕರ್ನಾಟಕ
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    WCD ಕರ್ನಾಟಕ ನೇಮಕಾತಿ 2025 : ಹುದ್ದೆಯ ವಿವರ
    • ಅಂಗನವಾಡಿ ಕಾರ್ಯಕರ್ತೆ : 1500 ಹುದ್ದೆಗಳು
    • ಅಂಗನವಾಡಿ ಸಹಾಯಕಿ : 1000 ಹುದ್ದೆಗಳು
    WCD ಕರ್ನಾಟಕ ನೇಮಕಾತಿ 2025 : ಅರ್ಹತಾ ಮಾನದಂಡಗಳು

    WCD ಕರ್ನಾಟಕ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ ,ಅರ್ಜಿ ಸಲ್ಲಿಸಲು ಆಕಾಂಕ್ಷಿಗಳು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು

    ವಿದ್ಯಾರ್ಹತೆ :

    • ಅಂಗನವಾಡಿ ಕಾರ್ಯಕರ್ತೆ : ಆಕಾಂಕ್ಷಿಗಳು ಕನಿಷ್ಠ ಪಿಯುಸಿ ತೇರ್ಗಡೆ ಹೊಂದಿರಬೇಕು. ಎಸ್.ಎಸ್.ಎಲ್.ಸಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ತತ್ಸಮಾನ ಶಿಕ್ಷಣ ಪಾಸಾಗಿರಬೇಕು
    • ಅಂಗನವಾಡಿ ಸಹಾಯಕಿ : ಎಸ್.ಎಸ್.ಎಲ್.ಸಿ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

    ವಯೋಮಿತಿ :

    WCD ಕರ್ನಾಟಕ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ

    • ಕನಿಷ್ಠ ವಯಸ್ಸು : 18 ವರ್ಷಗಳು
    • ಗರಿಷ್ಠ ವಯಸ್ಸು : 35 ವರ್ಷಗಳು

    WCD ಕರ್ನಾಟಕ ನೇಮಕಾತಿ ಅಧಿಸೂಚನೆಯ ನಿಯಮಗಳ ಪ್ರಕಾರ, ವಯಸ್ಸಿನಲ್ಲಿ ಸಡಿಲಿಕೆ ಇರುತ್ತದೆ.

    WCD ಕರ್ನಾಟಕ ನೇಮಕಾತಿ 2025 : ಮಾಸಿಕ ವೇತನ

    ಅಂಗನವಾಡಿ ಕಾರ್ಯಕರ್ತೆ : ರೂ.10,000/-
    ಅಂಗನವಾಡಿ ಸಹಾಯಕಿ : ರೂ.5,000/-

    WCD ಕರ್ನಾಟಕ ನೇಮಕಾತಿ 2025 : ಅರ್ಜಿ ಶುಲ್ಕ

    WCD ಕರ್ನಾಟಕ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳಿಗೆ ಅರ್ಜಿ ಶುಲ್ಕವನ್ನು ಉಲ್ಲೇಖಿಸಿಲ್ಲ.

    WCD ಕರ್ನಾಟಕ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
    • ಅಂಗನವಾಡಿ ಸಹಾಯಕಿ : ಅದೇ ಗ್ರಾಮದಲ್ಲಿ ವಾಸಿಸುತ್ತಿರುವ ಸಹಾಯಕಿಯರಿಗೆ, ಅವರು ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು, ಕನಿಷ್ಠ 3 ವ‍ರ್ಷ ಸೇವೆ ಸಲ್ಲಿಸಿದ್ದು, ಆ ಅಂಗನವಾಡಿ ಕೇಂದ್ರದಿಂದ 3 ಕಿ.ಮೀ. ವ್ಯಾಪ್ತಿಯೊಳಗೆ ವಾಸಿಸುತ್ತಿರಬೇಕು.
    • ಅಂಗನವಾಡಿ ಕಾರ್ಯಕರ್ತೆ : ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಆ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಹುದ್ದೆಗೆ ಬೇರೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಪ್ರಮೇಯವಿರುವುದಿಲ್ಲ. ಸದರಿ ಸಹಾಯಕಿಯನ್ನೇ ಕಾರ್ಯಕರ್ತೆ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
    WCD ಕರ್ನಾಟಕ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    WCD ಕರ್ನಾಟಕ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • WCD ಕರ್ನಾಟಕ ನೇಮಕಾತಿ 2025 ರ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ‌
    • ಅರ್ಜಿ ಸಲ್ಲಿಸಲು ಆಕಾಂಕ್ಷಿಗಳು ಜಿಲ್ಲೆ, ತಾಲ್ಲೂಕು, ಹುದ್ದೆಯನ್ನು ಆಯ್ಕೆ ಮಾಡಿ
    • ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಬೇಕು. ರಿಜಿಸ್ಟರ್ ಮಾಡಿ ಮತ್ತು ಲಾಗಿನ್‌ ಆಗಿ
    • ಅಗತ್ಯವಿರುವ ವೈಯಕ್ತಿಕ, ಶೈಕ್ಷಣಿಕ ದಾಖಲೆಗಳನ್ನು ಅಪ್‌ ಲೋಡ್‌ ಮಾಡಿ
    • ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
    • ಕೊನೆಯದಾಗಿ ಸಬ್‌ಮಿಟ್ ಬಟನ್‌ ಮೇಲೆ ಕ್ಲಿಕ್‌ ಮಾಡಿ. ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
    WCD ಕರ್ನಾಟಕ ನೇಮಕಾತಿ 2025 : ಅಗತ್ಯವಿರುವ ದಾಖಲೆಗಳು
    • ಜನನ ಪ್ರಮಾಣ ಪತ್ರ
    • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
    • ಪಿಯುಸಿ ಅಂಕಪಟ್ಟಿ.
    • ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ.
    • ವಾಸಸ್ಥಳ ದೃಢೀಕರಣ ಪತ್ರ.
    • ಮೀಸಲಾತಿ ಮತ್ತು ಜಾತಿ ಪ್ರಮಾಣ ಪತ್ರ.
    • ಇತರೆ ಅಗತ್ಯ ದಾಖಲೆಗಳು
    WCD ಕರ್ನಾಟಕ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10 ಮಾರ್ಚ್ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 4 ಏಪ್ರಿಲ್ 2025
    WCD ಕರ್ನಾಟಕ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
    ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ

  • ಅಂಗನವಾಡಿ ನೇಮಕಾತಿ ಅಧಿಸೂಚನೆ-2024|WCD Chitradurga Recruitment-2024 complete details

    ಅಂಗನವಾಡಿ ನೇಮಕಾತಿ ಅಧಿಸೂಚನೆ-2024|WCD Chitradurga Recruitment-2024 complete details

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕರ್ನಾಟಕ ರಾಜ್ಯ ಸರ್ಕಾರದಿಂದ ಚಿತ್ರದುರ್ಗ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯವಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಉದ್ಯೋಗಾಂಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಬೇಕಾಗುವ ದಾಖಲೆಗಳು. ವಯಸ್ಸಿನ ಮಿತಿ ಶೈಕ್ಷಣಿಕ.ವಿಂದ್ಯಾರ್ಹತೆ. ಅರ್ಜಿ ಶುಲ್ಕ. ಹಾಗೂ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ನೇಮಕಾತಿಯ ಮಾಹಿತಿ ಬಗ್ಗೆ ಸಂಕ್ಷಿಪ್ತ ವಿವರವನ್ನು ನಾವು ಕೆಳಗೆ ಲೇಖನದಲ್ಲಿ ನೀಡಲಾಗಿದೆ ಸಂಪೂರ್ಣ ಮಾಹಿತಿ ತಿಳಿದ ನಂತರ ಅರ್ಜಿ ಸಲ್ಲಿಸಿ

    2024 ಹೊಸ ನೇಮಕಾತಿ ಅಧಿಸೂಚನೆ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಚಿತ್ರದುರ್ಗ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯವಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಉದ್ಯೋಗಂಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರಗತಿ ದಾಖಲೆಗಳು ವಿದ್ಯಾರ್ಹತೆ. ವಯೋಮಿತಿ. ಶುಲ್ಕ ಪಾವತಿ ವಿಧಾನ. ವೇತನ ಶ್ರೇಣಿ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ ಓದಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರಗಳು:

    • ಇಲಾಖೆ ಹೆಸರು :ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
    • ಹುದ್ದೆಗಳ ಹೆಸರು – ಅಂಗನವಾಡಿ ಕಾರ್ಯಕರ್ತೆ /ಸಹಾಯಕಿಯರು
    • ಒಟ್ಟು ಹುದ್ದೆಗಳು – 215
    • ಅರ್ಜಿ ಸ್ವರೂಪ:-ಆನ್ಲೈನ್ (Online) ಆಫ್ಲೈನ್ (Offline)
    • ಉದ್ಯೋಗ ಸ್ಥಳ:- ಭಾರತಾದ್ಯಂತ

    ಹುದ್ದೆಗಳ ವಿವರಗಳು:-

    • ಅಂಗನವಾಡಿ ಕಾರ್ಯಕರ್ತೆಯರು 63
    • ಮಿನಿ ಅಂಗನವಾಡಿ ಕಾರ್ಯಕರ್ತೆಯರು 3
    • ಅಂಗನವಾಡಿ ಸಹಾಯಕಿಯರು 149

    ನೇಮಕಾತಿಯ ವಿದ್ಯಾರ್ಹತೆ:

    • ಅಂಗನವಾಡಿ ಕಾರ್ಯಕರ್ತೆ – ಕನಿಷ್ಠ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು . 10ನೇ ತರಗತಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು.
    • ಅಂಗನವಾಡಿ ಸಹಾಯಕಿ – 10ನೇ ತರಗತಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

    ನೇಮಕಾತಿಯ ವಯೋಮಿತಿ ಮತ್ತು ಸಡಿಲಿಕೆ:

    ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಅಂಗನವಾಡಿ ಕಾರ್ಯಕರ್ತ ಮತ್ತು ಸಹಾಯಕಿಯರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಯ ವಯೋಮಿತಿ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ಒಳಗಿರಬೇಕು ನಿಯಮಗಳ ಅನುಸಾರ ಪ್ರಾಧಿಕಾರವು ತಿಳಿಸಿದ ಹಾಗೆ ಹುದ್ದೆಗಳಿಗೆ ಸಿಡಿಲಿಕೆ ನೀಡಲಾಗಿದೆ

    ನೇಮಕಾತಿಯ ಅರ್ಜಿ ಶುಲ್ಕ

    ನೇಮಕಾತಿಯ ಆದಿಸೂಚನೆ ಪ್ರಕಾರ ಯಾವುದೇ ರೀತಿಯ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಹುದ್ದೆ ಇಲಾಖೆಗಳಲ್ಲಿ ಖಾಲಿ ಇರುವ ಹೊಸ ಗ್ರಾಮಗಳಲ್ಲಿ ವಾಸಿಸುತ್ತಿರುವ ಸಹಾಯಕಿಯರಾಗಿದ್ದು ಅವರು 12 ಮತ್ತು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಕನಿಷ್ಠ ಮೂರು ವರ್ಷ ಸೇವೆ ಅನುಭವವಿದ್ದು ಕನಿಷ್ಠ 45 ವರ್ಷ ವಯೋಮಿತಿ ಒಳಗಿದ್ದು ಆ ಉದ್ಯೋಗಂಷಿಯು ಅಂಗನವಾಡಿ ಕೇಂದ್ರದಿಂದ 3 ಕಿ.ಮೀ ವ್ಯಾಪ್ತಿಯುಳ್ಳಗೆ ವಾಸವಾಗಿರಬೇಕು ಈ ಅರ್ಹತೆ ಹೊಂದಿರುವ ಉದ್ಯೋಗಂಷಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ, ಮತ್ತು ಬೇರೆ ಉದ್ಯೋಗಾಂಷಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಈಗಾಗಲೇ ಮೇಲಿನ ನಿಯಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    • ಅರ್ಜಿ ಸಲಿಸಲು ಪ್ರಾರಂಭ ದಿನಾಂಕ –30 ಜುಲೈ 2024.
    • ಅರ್ಜಿ ಸಲಿಸಲು ಕೊನೆಯ ದಿನಾಂಕ –31 ಆಗಸ್ಟ್ 2024

    ನೇಮಕಾತಿಯ ಲಿಂಕ್ ಗಳು: