3000 KPTCL ನೇಮಕಾತಿ 2025: ರಾಜ್ಯದಲ್ಲಿ ಒಂದೇ ದಿನ ಪಿಎಸ್‌ಟಿ ಪರೀಕ್ಷೆ – ಸಂಪೂರ್ಣ ಮಾಹಿತಿ

ಅಕ್ಟೋಬರ್ 24 ರಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದ ಲೈನ್ ಮೆನ್ ಹುದ್ದೆಗಳ ನೇಮಕ ಸಂಬಂಧ ಇಂಧನ ಇಲಾಖೆ ಸಚಿವರು ಒಂದು ಮಹತ್ವದ ಸುದ್ದಿ ಒಂದನ್ನು ಪತ್ರಿಕಾ ಪ್ರಕಟಣೆ ನೀಡಿದ್ದಾರೆ ಈ ಸದರಿ ಹುದ್ದೆಗಳನ್ನು ಮುಂದಿನ ಏಪ್ರಿಲ್ ಒಳಗೆ ಭರ್ತಿ ಮಾಡುವುದಾಗಿ ಮಾಹಿತಿಯನ್ನು ನೀಡಿದ್ದಾರೆ ಕರ್ನಾಟಕ ಇಂಧನ ಇಲಾಖೆಯಲ್ಲಿ ಖಾಲಿ ಇರುವ ಒಟ್ಟಾರೆ ಹುದ್ದೆಗಳ ಪೈಕಿ 3000 ಅಗತ್ಯ ಹುದ್ದೆಗಳನ್ನು ಏಪ್ರಿಲ್ ಅಂತ್ಯದ ಒಳಗೆ ನೇಮಕ ಮಾಡುವುದು ಎಂದು ಇಂಧನ ಸಚಿವ ಕೆ ಜಾರ್ಜ್ ಅವರು ಮಾಹಿತಿಯನ್ನು ತಿಳಿಸಿದ್ದಾರೆ ಹಾಗಾದರೆ ಇದು ಹೊಸ ನೇಮಕಾತಿ ಅಧಿಸೂಚನೆ ಅಲ್ಲ, ಅಕ್ಟೋಬರ್ 2024 ಹಾಗೂ ತಿಂಗಳಲ್ಲಿ ಅಧಿಸೂಚನೆಗೆ ಅರ್ಜಿ ಆಹ್ವಾನಿಸಿರುವ ಒಟ್ಟು 2975 ಲೈನ್ ಮೆನ್ ಹುದ್ದೆಗಳಾಗಿವೆ

ಈ ನೇಮಕಾತಿ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಈ ಹೆಬ್ಬುಲಿ ಅಂತ್ಯದೊಳಗೆ ನೇಮಕ ಮಾಡಲಾಗುವುದು ಎಂದು ಮಾಹಿತಿಯನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಇತ್ತೀಚೆಗೆ ಈ ಕುರಿತು ಮಾತನಾಡಿರುವ ಇಂಧನ ಸಚಿವರು ಖಾಲಿ ಇರುವ 3000 ಲೈನ್ ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ ಬರುವ ಏಪ್ರಿಲ್ ಒಳಗೆ ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ ಮೊದಲಬಾರಿ ಇಡೀ ರಾಜ್ಯದಲ್ಲಿ ಒಂದೇ ದಿನ ದೈಹಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಬಳಿಕ AEE,JE ಹುದ್ದೆಗಳು ಸೇರಿದಂತೆ ಹಂತ ಹಂತವಾಗಿ ನೇಮಕಾತಿಯನ್ನು ಭರ್ತಿ ಮಾಡಿಕೊಳ್ಳುವುದು ಎಂದು ಮಾಧ್ಯಮ ಪ್ರಕಟಣೆಗಳನ್ನು ನೀಡಿದ್ದಾರೆ

ಇಂಧನ ಇಲಾಖೆಯಡಿಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಸೆಸ್ಕಾಂ, ಹೆಸ್ಕಾಂ ಗಳಲ್ಲಿ ಈ ಕೆಳಗಿನ ಹುದ್ದೆಗಳನ್ನು ಏಪ್ರಿಲ್‌ ಅಂತ್ಯದೊಳಗೆ ತುಂಬಲಾಗುವುದು.

  • ಕಿರಿಯ ಸ್ಟೇಷನ್‌ ಪರಿಚಾರಕ : 433 ಹುದ್ದೆಗಳು (411 NKK+22KK)
  • ಕಿರಿಯ ಪವರ್ ಮ್ಯಾನ್ : 2542 ಹುದ್ದೆಗಳು (2349NKK +193KK)

AEE JE ಹುದ್ದೆಗಳ ಭರ್ತಿಗೆ ಕ್ರಮ

2975 ಲೈನ್ ಮೆನ್ ಹುದ್ದೆಗಳ ಭರ್ತಿ ಪೂರ್ಣಗೊಳ್ಳುತ್ತಿದ್ದಂತೆ ಮುಂದಿನ ದಿನಗಳಲ್ಲಿ ಎಇಇ ಜೆಇ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವರು ತಿಳಿಸಿದ್ದಾರೆ ಈ ಹುದ್ದೆಗಳಿಗೆ ಹೊಸ ಅಧಿಸೂಚನೆ ಬಿಡುಗಡೆಯನ್ನು ನಿರೀಕ್ಷಿಸಬಹುದಾಗಿದೆ ಕರ್ನಾಟಕ ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅದರಲ್ಲೂ ಇಂಜಿನಿಯರಿಂಗ್ ಪದವಿ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಮುಗಿಸಿರುವ ಇಂಧನ ಇಲಾಖೆ ಎಇಇ, ಜೆಇ ಹುದ್ದೆಗಳಿಗೆ ಸೇರಲು ಕನಸು ಕಾಣುತ್ತಿರುವ ಆಕಾಂಕ್ಷಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ

  • ಎಇಇ ಹುದ್ದೆಗೆ ವಿದ್ಯಾರ್ಹತೆ: ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಇಂಜಿನಿಯರಿಂಗ್ ಪದವಿ ಪಾಸ್ ಮಾಡಿರಬೇಕು.
  • ಜೆಇ ಹುದ್ದೆಗೆ ವಿದ್ಯಾರ್ಹತೆ : ಡಿಪ್ಲೊಮ ಇನ್ ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು
  • ಲೈನ್‌ಮೆನ್‌ ಹುದ್ದೆಗಳಿಗೆ ವೇತನ ಶ್ರೇಣಿ: ರೂ.28,550-63000

ಕಿರಿಯ ಸ್ಟೇಷನ್‌ ಪರಿಚಾರಕ, ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿಗೆ ವೇತನ ಶ್ರೇಣಿ ವಿವರ

ಕ್ರೋಡೀಕೃತ ಸಂಭಾವನೆ (ಮೊದಲ 3 ವರ್ಷಗಳು / ಪ್ರತಿ ತಿಂಗಳ ಮಾಸಿಕ) ಎರಡು ಹುದ್ದೆಗಳಿಗೂ ಸಹ ಕೆಳಗಿನಂತಿರುತ್ತದೆ

  • ಮೊದಲನೇ ವರ್ಷ : Rs.17,000.
  • ಎರಡನೇ ವರ್ಷ: Rs.19,000.
  • ಮೂರನೇ ವರ್ಷ: Rs.21,000.

Author: admin

Leave a Reply

Your email address will not be published. Required fields are marked *