ಅಬಕಾರಿ ಇಲಾಖೆ ನೇಮಕಾತಿ 2025-1207 ಹುದ್ದೆಗಳಿಗೆ ಅರ್ಜಿ ಆಹ್ವಾನ- ಸಂಪೂರ್ಣ ಮಾಹಿತಿ

Excise Department Recruitment 2025: ರಾಜ್ಯ ಸರ್ಕಾರವು ಆಗಾಗಾ ಉದ್ಯೋಗಾಕಾಂಶಿಗಳಿಗೆ ಗುಡ್‌ ನ್ಯೂಸ್‌ ನೀಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 1,207 ಹುದ್ದೆಗಳ ನೇಮಕಾತಿಗೆ ಒಪ್ಪಿಗೆ ಸೂಚಿಸಿದೆ. ಹಾಗಾದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಏನೆಲ್ಲ ಅರ್ಹತೆ ಹೊಂದಿರಬೇಕು ಹಾಗೂ ಆಯ್ಕೆಯಾದ ಉದ್ಯೋಗಾಕ್ಷಿಗಳಿಗೆ ಮಾಸಿಕ ವೇತನ ಎಷ್ಟು ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಇಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ

ಕರ್ನಾಟಕ ಸರ್ಕಾರವು 2024ನೇ ಸಾಲಿನಲ್ಲಿ ವಿವಿಧ ಇಲಾಖೆಗಳ ಸಾವಿರಾರು ಹುದ್ದೆಗಳ ಭರ್ತಿಗೆ ಅನುಮತಿ ನೀಡಿದೆ. ಈಗಾಗಲೇ ಹಲವು ಇಲಾಖೆಗಳ ಹುದ್ದೆಗಳಿಗೆ ಕೆಪಿಎಸ್‌ಸಿ ನೇಮಕಾತಿ ಅಧಿಸೂಚನೆ ಪ್ರಕಟಿಸಿ, ಅರ್ಜಿ ಸ್ವೀಕಾರ ಮಾಡಿ, ಪರೀಕ್ಷೆಗಳನ್ನು ಕೈಗೊಂಡಿದೆ. ಇನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ 7 ಇಲಾಖೆ/ ಮಂಡಳಿ/ ಸಂಸ್ಥೆಗಳ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಸಿದ್ಧಪಡಿಸಿಕೊಂಡು ಸರ್ಕಾರದ ಆದೇಶಕ್ಕೆ ಕಾಯುತ್ತಿದೆ. ಈಗ ಲೇಟೆಸ್ಟ್‌ ಅಪ್‌ಡೇಟ್‌ ಏನೆಂದರೆ ರಾಜ್ಯ ಸರ್ಕಾರವು ಅಬಕಾರಿ ಇಲಾಖೆಯಲ್ಲಿನ ಹುದ್ದೆಗಳ ಭರ್ತಿಗೆ ಅನುಮತಿ ನೀಡಿರುವುದು. ಅಷ್ಟೇ ಅಲ್ಲದೇ ಅತಿ ಹೆಚ್ಚಿನ ಹುದ್ದೆಗಳ ಭರ್ತಿಗೆ ಸರ್ಕಾರ ಸಹಮತಿ ನೀಡಿರುವುದು ಒಂದು ರೀತಿಯಲ್ಲಿ ರಾಜ್ಯದ ಸರ್ಕಾರಿ ಹುದ್ದೆ ಆಕಾಂಕ್ಷಿತ ಪ್ರಜೆಗಳಿಗೆ ಖುಷಿ ತಂತಿದೆ.

ಅಬಕಾರಿ ಇಲಾಖೆಯಲ್ಲಿನ ಅಬಕಾರಿ ಉಪ ನಿರೀಕ್ಷಕರು ಹಾಗೂ ಅಬಕಾರಿ ಪೇದೆ ವೃಂದದಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಆರ್ಥಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಅಬಕಾರಿ ಆಯುಕ್ತರಿಗೆ ಆದೇಶದ ಪ್ರತಿ ರವಾನೆ ಮಾಡಿದ್ದಾರೆ.ಅಬಕಾರಿ ಇಲಾಖೆಯಲ್ಲಿ ಮಂಜೂರಾಗಿ ಖಾಲಿ ಇರುವ ಅಬಕಾರಿ ಉಪ ನಿರೀಕ್ಷಕ ಮತ್ತು ಅಬಕಾರಿ ಪೇದೆಗಳ ಹುದ್ದೆಗಳ ಪೈಕಿ ಕಲ್ಯಾಣ ಕರ್ನಾಟಕ ವೃಂದ ಸೇರಿದಂತೆ 265- ಅಬಕಾರಿ ಉಪ ನಿರೀಕ್ಷಕರ ಹುದ್ದೆಗಳನ್ನು ಮತ್ತು 942- ಅಬಕಾರಿ ಪೇದೆಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಈ ಕೆಳಕಂಡಂತೆ ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.

ಅಬಕಾರಿ ನೇಮಕಾತಿ 2025: ನೇಮಕಾತಿಯ ವಿವರಗಳು

  • ಇಲಾಖೆ ಹೆಸರು : ಅಬಕಾರಿ ಇಲಾಖೆ ಕರ್ನಾಟಕ
  • ಹುದ್ದೆಯ ಹೆಸರು : ಅಬಕಾರಿ ಉಪ ನಿರೀಕ್ಷಕ & ಅಬಕಾರಿ ಪೇದೆ
  • ಒಟ್ಟು ಹುದ್ದೆಗಳು :1207
  • ಅರ್ಜಿ ಸ್ವರೂಪ : ಆನ್ಲೈನ್
  • ಉದ್ಯೋಗ ಸ್ಥಳ : ಕರ್ನಾಟಕ

ಅಬಕಾರಿ ನೇಮಕಾತಿ 2025 : ಹುದ್ದೆಗಳ ವಿವರ

ಹುದ್ದೆಯ ಹೆಸರುಒಟ್ಟು ಹುದ್ದೆಗಳು
ಅಬಕಾರಿ ಉಪ ನಿರೀಕ್ಷಕ265
ಅಬಕಾರಿ ಪೇದೆ942

ಅಬಕಾರಿ ನೇಮಕಾತಿ 2025 : ಅರ್ಹತಾ ಮಾನದಂಡಗಳು

ವಿದ್ಯಾರ್ಹತೆ: ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಹತ್ತನೇ ದ್ವಿತೀಯ ಪಿಯುಸಿ ಅಥವಾ ಪದವಿಯಲ್ಲಿ ವ್ಯಾಸಂಗ ಮಾಡಿರಬೇಕು

  • ಅಬಕಾರಿ ಉಪ ನಿರೀಕ್ಷಕರು ಹುದ್ದೆಗೆ : ಪದವಿ ಪಾಸ್
  • ಅಬಕಾರಿ ಪೇದೆ ಹುದ್ದೆಗೆ : 10ನೇ ಅಥವಾ ದ್ವಿತೀಯ ಪಿಯುಸಿ ಪಾಸ್

ವಯೋಮಿತಿ : ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಕ್ಷಿಗಳು

  • ಕನಿಷ್ಠ ವಯಸ್ಸು : 18 ವರ್ಷಗಳು
  • ಗರಿಷ್ಠ ವಯಸ್ಸು : 35 ವರ್ಷಗಳು
    • ವಯೋಮಿತಿ ಸಡಿಲಿಕೆ:
    • 2A 2B 3A 3B ಉದ್ಯೋಗಾಕಾಂಕ್ಷಿಗಳಿಗೆ: 03 ವರ್ಷಗಳು
    • SC/ST ಉದ್ಯೋಗಾಕಾಂಕ್ಷಿಗಳಿಗೆ: 05 ವರ್ಷಗಳು

ವೇತನ ಶ್ರೇಣಿ : ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಮಾಸಿಕ ವೇತನವೂ ಕೆಳಗಿನಂತಿವೆ

  • ಅಬಕಾರಿ ಉಪ ನಿರೀಕ್ಷಕರು ಹುದ್ದೆಗಳಿಗೆ ₹30,350/- ರಿಂದ ₹58,250/-
  • ಅಬಕಾರಿ ಪೇದೆ ಹುದ್ದೆಗಳಿಗೆ :₹21,400/-ರಿಂದ ₹42,00/-

ಆಯ್ಕೆ ಪ್ರಕ್ರಿಯೆ : ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಮೂರು ಹಂತಗಳಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ

  • ಲಿಖಿತ ಪರೀಕ್ಷೆ
  • PET,PST ವೈದ್ಯಕೀಯ ಪರೀಕ್ಷೆ
  • ದಾಖಲೆಗಳ ಪರಿಶೀಲನೆ/ನೇರ ಸಂದರ್ಶನ

ಅಬಕಾರಿ ನೇಮಕಾತಿ 2025: ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕಶೀಘ್ರದಲ್ಲೇ ಪ್ರಕಟಿಸಲಾಗುವುದು
ಅರ್ಜಿ ಸಲ್ಲಿಸಲು ಕೊನೆ ದಿನಾಂಕಶೀಘ್ರದಲ್ಲೇ ಪ್ರಕಟಿಸಲಾಗುವುದು

ಅಬಕಾರಿ ನೇಮಕಾತಿ 2025: ಪ್ರಮುಖ ಲಿಂಕ್ ಗಳು

ಅಧಿಸೂಚನೆಯ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಪ್ಲಿಕೇಶನ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಗಮನಿಸಲೇಬೇಕಾದ ವಿಷಯಗಳು:

ನೇಮಕ ಅಧಿಸೂಚನೆ ಯಾವಾಗ? ಈ ಹುದ್ದೆಗಳ ನೇಮಕಾತಿಗೆ ಇತ್ತೀಚೆಗಷ್ಟೆ ಸರ್ಕಾರ ಸಹಮತಿ ನೀಡಿದ್ದು, ಷರತ್ತು, ನಿಯಮಗಳು, ಹುದ್ದೆ ವರ್ಗೀಕರಣ ಪ್ರಕ್ರಿಯೆಗಳನ್ನು ಸಿದ್ಧಪಡಿಸಿಕೊಂಡು ಅಧಿಸೂಚನೆ ಬಿಡುಗಡೆ ಮಾಡಬೇಕಿದೆ. ಅಲ್ಲದೇ ಈ ಹುದ್ದೆಗಳನ್ನು ಪೊಲೀಸ್‌ ಇಲಾಖೆ ಮೂಲಕ ನೇಮಕ ಪ್ರಕ್ರಿಯೆ ನಡೆಸಲಾಗುತ್ತದಾ ಅಥವಾ ಕೆಪಿಎಸ್‌ಸಿ / ಕೆಇಎ ಮೂಲಕ ನೇಮಕ ನಡೆಸಲಾಗುತ್ತದಾ ಎಂಬುದನ್ನು ಸಹ ಕಾದು ನೋಡಬೇಕಿದೆ. ಇಲಾಖೆ ವತಿಯಿಂದ ಅಧಿಸೂಚನೆ ದಿನದ ಕುರಿತು ಯಾವುದೇ ಅಪ್‌ಡೇಟ್‌ ಸಿಕ್ಕಿಲ್ಲ. ಆದರೆ ಮುಂದಿನ ಎರಡು ತಿಂಗಳ ಒಳಗಾಗಿ ಅಧಿಕೃತ ಮಾಹಿತಿ ನಿರೀಕ್ಷಿಸಬಹುದಾಗಿದೆ.

ಗೃಹ ರಕ್ಷಕರ ಸೇವೆ ರದ್ದಿಗೆ ಆದೇಶ!! ಆದೇಶ ಪ್ರತಿಯಲ್ಲಿ ಮುಂದುವರೆದು ತಿಳಿಸಿದ ಮಾಹಿತಿ ಎಂದರೆ, ‘ಅಬಕಾರಿ ಪೇದೆ ಹುದ್ದೆ ನೇರ ನೇಮಕಾತಿ ಮೂಲಕ ಭರ್ತಿಯಾದ ನಂತರ ಸದರಿ ಹುದ್ದೆ ಎದುರಾಗಿ ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಅನುಮತಿ ನೀಡಿರುವ 1000 ಗೃಹ ರಕ್ಷಕ ಸಿಬ್ಬಂದಿಗಳ ಸೇವೆಯನ್ನು ರದ್ದುಗೊಳಿಸಬೇಕು.’ ಎಂದು ಅಬಕಾರಿ ಇಲಾಖೆ ಆಯುಕ್ತರವರಿಗೆ ತಿಳಿಸಲಾಗಿದೆ.

Author: admin

Leave a Reply

Your email address will not be published. Required fields are marked *