UIIC Recruitment 2025: ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ (UIIC), 1973 ರ ಅಪ್ರೆಂಟಿಸ್‌ಶಿಪ್ (ತಿದ್ದುಪಡಿ) ಕಾಯ್ದೆಯಡಿಯಲ್ಲಿ 1 ವರ್ಷದ ಅಪ್ರೆಂಟಿಸ್ ಹುದ್ದೆಗಳಿಗೆ 105 ಹುದ್ದೆಗಳನ್ನು ಭರ್ತಿ ಮಾಡಲು ಪದವಿ ಪಡೆದ ಅಭ್ಯರ್ಥಿಗಳಿಂದ (2021 ರಿಂದ 2024 ರವರೆಗೆ ಉತ್ತೀರ್ಣರಾದ) ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಕರ್ನಾಟಕಕ್ಕೆ ಈ ಹುದ್ದೆಗಳನ್ನು ಬಿಡುಗಡೆ ಮಾಡಲಾಗಿದೆ
UIIC Recruitment 2025 – Apply Online for 105 Apprentices Posts – ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (UIIC) ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ, ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification) ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
UIIC ಅಪ್ರೆಂಟಿಸ್ ನೇಮಕಾತಿ 2025- ನೇಮಕಾತಿಯ ವಿವರ.
- ಇಲಾಖೆ ಹೆಸರು : ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (UIIC)
- ಹುದ್ದೆಗಳ ಹೆಸರು: ಅಪ್ರೆಂಟಿಸ್
- ಒಟ್ಟು ಹುದ್ದೆಗಳು: 105 (ಕರ್ನಾಟಕ 30).
- ಅರ್ಜಿಯ ಸ್ವರೂಪ: ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.
- ಉದ್ಯೋಗ ಸ್ಥಳ : ತಮಿಳುನಾಡು – ಕರ್ನಾಟಕ – ಕೇರಳ – ಆಂಧ್ರ ಪ್ರದೇಶ
UIIC Recruitment 2025: ಅರ್ಹತಾ ಮಾನದಂಡಗಳು.
ವಯೋಮಿತಿ.
- ಅರ್ಜಿ ಸಲ್ಲಿಸಲು ಬಯಸುವ ಆಕಾಂಕ್ಷಿಗಳ ಕನಿಷ್ಠ ವರ್ಷವೂ: 21 ವರ್ಷಗಳನ್ನು ಪೂರೈಸಿರಬೇಕು.
- ಅರ್ಜಿ ಸಲ್ಲಿಸಲು ಬಯಸುವ ಆಕಾಂಕ್ಷಿಗಳ ಗರಿಷ್ಠ ವರ್ಷವೂ: 28 ವರ್ಷಗಳನ್ನು ಪೂರೈಸಿರಬೇಕು.
- (ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.)
ವಿದ್ಯಾರ್ಹತೆ
- UIIC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರಬೇಕು.
ಅರ್ಜಿ ಸಲ್ಲಿಸಲು ಇರುವ ಮಾರ್ಗಗಳು:
- ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
- UIIC ಅಪ್ರೆಂಟಿಸ್ ನೇಮಕಾತಿಗಾಗಿ ಅರ್ಜಿ ನಮೂನೆಗಳನ್ನು ಸ್ವೀಕರಿಸಲು ಆನ್‌ಲೈನ್ ಅರ್ಜಿ ಪೋರ್ಟಲ್ ಅನ್ನು https://nats.education.gov.in/ ನಲ್ಲಿ ಸಕ್ರಿಯಗೊಳಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಪ್ರೆಂಟಿಸ್ ಹುದ್ದೆಗಳಿಗೆ ತಮ್ಮ ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಮಾರ್ಚ್ 10, 2025 ರವರೆಗೆ ಸಲ್ಲಿಸಬಹುದು. ಕೊನೆಯ ಕ್ಷಣದ ತಾಂತ್ರಿಕ ದೋಷಗಳನ್ನು ತಪ್ಪಿಸಲು ಕೆಳಗೆ ಹಂಚಿಕೊಳ್ಳಲಾದ ನೇರ ಅರ್ಜಿ ಆನ್‌ಲೈನ್ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಕೊನೆಯ ದಿನಾಂಕದ ಮೊದಲು ತಮ್ಮ ಅರ್ಜಿ ನಮೂನೆಗಳನ್ನು ಸಲ್ಲಿಸಿ.
UIIC ಅಪ್ರೆಂಟಿಸ್ ನೇಮಕಾತಿ 2025 ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ.
- ಅರ್ಹತಾ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಪ್ರಕ್ರಿಯೆಯ ಪ್ರಕಾರ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡುವುದು
- ಅಪ್ರೆಂಟಿಸ್‌ಶಿಪ್ ತರಬೇತಿ (ದಕ್ಷಿಣ ಪ್ರದೇಶ) ಕ್ಕೆ ಅಭ್ಯರ್ಥಿಗಳ ಆಯ್ಕೆಯು ಅರ್ಹತಾ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ ನಡೆಯಲಿದೆ ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು
- ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ನ ವಿವಿಧ ಕಚೇರಿಗಳಲ್ಲಿ ದಾಖಲೆ ಪರಿಶೀಲನೆ ಪ್ರಕ್ರಿಯೆಗೆ ಹಾಜರಾಗಲು ಕರೆಯಲಾಗುವುದು. ಅಭ್ಯರ್ಥಿಗಳು NATS ಪೋರ್ಟಲ್‌ನಲ್ಲಿ ಮೂಲ ದಾಖಲೆಗಳ ವಿರುದ್ಧ ನಮೂದಿಸಿದ ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ
- ಅರ್ಹತಾ ಪರೀಕ್ಷೆಯ ಪ್ರಕಾರ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡುವುದ.
- ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
ಆಯ್ಕೆಯಾದ ಅಭ್ಯರ್ಥಿಗಳ ಸ್ಟೇ ಫಂಡ್.
- ಆಯ್ಕೆಯಾದ ಆಕಾಂಕ್ಷಿಗಳಿಗೆ : 9000/- ದೊರಕಿಸಿಕೊಡುತ್ತದೆ.
ಒಟ್ಟು ಕಾಲಿ ಇರುವ ಹುದ್ದೆಗಳು:
| ರಾಜ್ಯ/ ಕೇಂದ್ರಾಡಳಿತ ಪ್ರದೇಶ | ಖಾಲಿ ಹುದ್ದೆ. |
|---|---|
| ತಮಿಳುನಾಡು | 35 |
| ಪುದುಚೇರಿ | 05 |
| ಕರ್ನಾಟಕ | 30 |
| ಕೇರಳ | 25 |
| ಆಂಧ್ರ ಪ್ರದೇಶ | 05 |
| ತೆಲಂಗಾಣ | 05 |
| ಒಟ್ಟು | 105 |
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 17 ಫೆಬ್ರವರಿ 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಮಾರ್ಚ್ 2025.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು.
| ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
| ಉದ್ಯೋಗ ವಾರ್ತೆ ವಾಟ್ಸಾಪ್ ಗ್ರೂಪ್ ಗೆ ಸೇರಿಕೊಳ್ಳಲು | ಇಲ್ಲಿ ಕ್ಲಿಕ್ ಮಾಡಿ |
| ಉದ್ಯೋಗ ವಾರ್ತೆ ಟೆಲಿಗ್ರಾಂ ಗ್ರೂಪ್ಗೆ ಸೇರಿಕೊಳ್ಳಲು | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆಯ Pdf ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |