BOI ಅಪ್ರೆಂಟಿಸ್ ನೇಮಕಾತಿ 2025 : ಬ್ಯಾಂಕ್ ಆಫ್ ಇಂಡಿಯಾ (BOI) 2024-2025 ರ ಆರ್ಥಿಕ ವರ್ಷಕ್ಕೆ 1961 ರ ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ ದೇಶಾದ್ಯಂತ 400 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಸೇರಿದಂತೆ ಕೆಲವು ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ಆಕಾಂಕ್ಷಿಗಳು ಈ ಪ್ರಮುಖ ನೇಮಕಾತಿಗೆ ಅರ್ಜಿ ಸಲ್ಲಿಸಲು ಸುವರ್ಣಾವಕಾಶವನ್ನು ಹೊಂದಿದ್ದಾರೆ. ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯನ್ನು ಆನ್‌ಲೈನ್ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಮಾಡಲಾಗುತ್ತದೆ ಮತ್ತು ನಂತರ ಸ್ಥಳೀಯ ಭಾಷೆಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
BOI ಅಪ್ರೆಂಟಿಸ್ ನೇಮಕಾತಿ 2025 ಅಧಿಸೂಚನೆಯನ್ನು ಜನವರಿ 1, 2025 ರಂದು ಬಿಡುಗಡೆ ಮಾಡಲಾಗಿದ್ದು ,
ಆನ್‌ಲೈನ್ ಅರ್ಜಿ ಪ್ರಕ್ರಿಯೆಯು 01-03-2025 ರಿಂದ ಪ್ರಾರಂಭವಾಗಿ 15-03-2025 ರವರೆಗೆ ಕೊನೆಗೊಳ್ಳುತ್ತದೆ.
ಅಪ್ರೆಂಟಿಸ್ ತರಬೇತಿ ಅವಧಿ 1 ವರ್ಷ ಮುಗಿದ ನಂತರ, ಹುದ್ದೆಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಇದೊಂದು ತಾತ್ಕಾಲಿಕ ಹುದ್ದೆ .
ಅಭ್ಯರ್ಥಿಗಳು ಅರ್ಜಿ ಶುಲ್ಕ, ಅರ್ಹತಾ ಮಾನದಂಡಗಳು, ವಯೋಮಿತಿ, ಮಾಸಿಕ ವೇತನ, ಪರೀಕ್ಷಾ ಮಾದರಿ, ಪಠ್ಯಕ್ರಮ , ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಅಗತ್ಯ ಮಾಹಿತಿಯನ್ನು ಒಳಗೊಂಡಂತೆ ಪ್ರಮುಖ ವಿವರಗಳನ್ನು ಈ ಲೇಖನದಲ್ಲಿ ಪರಿಶೀಲಿಸಬಹುದು.
ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿ 2025 : ನೇಮಕಾತಿಯ ಅವಲೋಕನ
| ಸಂಸ್ಥೆ | ಬ್ಯಾಂಕ್ ಆಫ್ ಇಂಡಿಯಾ (BOI) |
| ಹುದ್ದೆಯ ಹೆಸರು | ಅಪ್ರೆಂಟಿಸ್ |
| ಒಟ್ಟು ಹುದ್ದೆಗಳು | 400 ( ಕರ್ನಾಟಕದಲ್ಲಿ ಒಟ್ಟು 12 ಹುದ್ದೆಗಳು) |
| ನೋಂದಣಿ ಆರಂಭ ದಿನಾಂಕ | 01-03-2025 |
| ನೋಂದಣಿ ಕೊನೆಯ ದಿನಾಂಕ | 15-03-2025 |
| ಅರ್ಜಿಯ ಸ್ವರೂಪ | ಆನ್ ಲೈನ್ ಮೂಲಕ |
| ಉದ್ಯೋಗ ಸ್ಥಳ | ಭಾರತದಾದ್ಯಂತ |
ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿ 2025 : ಹುದ್ದೆಗಳ ವಿವರ
- ಸಾಮಾನ್ಯ : 195 ಹುದ್ದೆಗಳು
- ಇಡಬ್ಲ್ಯೂಎಸ್ : 32 ಹುದ್ದೆಗಳು
- ಒಬಿಸಿ : 81 ಹುದ್ದೆಗಳು
- SC : 52 ಹುದ್ದೆಗಳು
- ST: 40 ಹುದ್ದೆಗಳು
ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿ 2025 ||ಅರ್ಹತಾ ಮಾನದಂಡಗಳು
ವಿದ್ಯಾರ್ಹತೆ :
ಆಕಾಂಕ್ಷಿಯೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ (ತಾಂತ್ರಿಕ ಶಿಕ್ಷಣ) ಹೊಂದಿರಬೆಕು .ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಸಮಾನ ಅರ್ಹತೆಯನ್ನು ಹೊಂದಿರಬೇಕು.ಅಭ್ಯರ್ಥಿಯು ಏಪ್ರಿಲ್ 1, 2021 ಮತ್ತು ಜನವರಿ 1, 2025 ರ ನಡುವೆ ತಮ್ಮ ಪದವಿಯನ್ನು ಗಳಿಸಿರಬೇಕು.
ವಯೋಮಿತಿ :
BOI ನೇಮಕಾತಿ 2025 ಕ್ಕೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಉಲ್ಲೇಖಿಸಲಾದ ವಯಸ್ಸಿನ ಅವಶ್ಯಕತೆಗಳನ್ನು ಪೂರೈಸಬೇಕು
- ಕನಿಷ್ಠ: 20 ವರ್ಷಗಳು
- ಗರಿಷ್ಠ: 28 ವರ್ಷಗಳು
- (ಜನವರಿ 2, 1997 ಮತ್ತು ಜನವರಿ 1, 2005 ರ ನಡುವೆ ಜನಿಸಿದವರು)
ವಯೋಮಿತಿ ಸಡಿಲಿಕೆ :
- ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 5 ವರ್ಷ
- ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10 ವರ್ಷ
ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಹುದ್ದೆಗಳ ಮಾಸಿಕ ಸ್ಟೈಫಂಡ್ ವಿವರ
- ಮೆಟ್ರೋ ಸಿಟಿಗಳಲ್ಲಿ ನೇಮಕವಾಗುವವರಿಗೆ ಸ್ಟೈಫಂಡ್ ರೂ.15,000.
- ನಗರ ಪ್ರದೇಶಗಳಲ್ಲಿ ನೇಮಕವಾಗುವವರಿಗೆ ಸ್ಟೈಫಂಡ್ ರೂ.12,000.
- ಸೆಮಿ ಅರ್ಬನ್ / ಗ್ರಾಮೀಣ ಪ್ರದೇಶಗಳಲ್ಲಿ ನೇಮಕವಾಗುವವರಿಗೆ ಸ್ಟೈಫಂಡ್ ರೂ.10,000.
ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿ 2025 : ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
- ಸಾಮಾನ್ಯ / ಇಡಬ್ಲ್ಯೂಎಸ್ / ಒಬಿಸಿ ಅಭ್ಯರ್ಥಿಗಳಿಗೆ : ರೂ. 800/-,
- ಎಸ್‌ಸಿ / ಎಸ್‌ಟಿ / ಮಹಿಳಾ ಅಭ್ಯರ್ಥಿಗಳಿಗೆ ರೂ : 600/- ಮತ್ತು
- ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ರೂ : 400/-
- .ಪಾವತಿ ವಿಧಾನ : ಶುಲ್ಕವನ್ನು ಡೆಬಿಟ್ ಕಾರ್ಡ್ / ಕ್ರೆಡಿಟ್ರ್ಡ / ನೆಟ್ ಬ್ಯಾಂಕಿಂಗ್ / ಯುಪಿಐ ಮೂಲಕ ಆನ್‌ಲೈನ್ ಮೂಲಕ ಪಾವತಿಸಬೇಕು.
BOI ಅಪ್ರೆಂಟಿಸ್ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ:
ಬ್ಯಾಂಕ್ ಆಫ್ ಇಂಡಿಯಾ BOI ಅಪ್ರೆಂಟಿಸ್ ನೇಮಕಾತಿ 2025 , ಅಧಿಕೃತ ಅಧಿಸೂಚನೆಯ ಪ್ರಕಾರ ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ
1. ಆನ್‌ಲೈನ್ ಲಿಖಿತ ಪರೀಕ್ಷೆ (100 ಅಂಕಗಳು)
- ಸಾಮಾನ್ಯ/ಆರ್ಥಿಕ ಅರಿವು: 25 ಅಂಕಗಳು
- ಇಂಗ್ಲಿಷ್ ಭಾಷೆ: 25 ಅಂಕಗಳು
- ಪರಿಮಾಣಾತ್ಮಕ ಮತ್ತು ತಾರ್ಕಿಕ ಸಾಮರ್ಥ್ಯ: 25 ಅಂಕಗಳು
- ಕಂಪ್ಯೂಟರ್ ಜ್ಞಾನ: 25 ಅಂಕಗಳು
- ಅವಧಿ: 90 ನಿಮಿಷಗಳು
2. ಸ್ಥಳೀಯ ಭಾಷಾ ಪರೀಕ್ಷೆ (10 ಅಥವಾ 12 ನೇ ತರಗತಿಯಲ್ಲಿ ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡದ ಅಭ್ಯರ್ಥಿಗಳಿಗೆ)
3. ದಾಖಲೆ ಪರಿಶೀಲನೆ
4. ವೈದ್ಯಕೀಯ ಪರೀಕ್ಷೆ
ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗೆ ಅರ್ಜಿ ಹಾಕಲು ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :- ಮಾರ್ಚ್ 01, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ಮಾರ್ಚ್ 15, 2025
ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿ 2025 : ಕ್ಕೆ ಅರ್ಜಿ ಸಲ್ಲಿಸುವ ಹಂತಗಳು
ಬ್ಯಾಂಕ್ ಆಫ್ ಇಂಡಿಯಾ (BOI) ಅಪ್ರೆಂಟಿಸ್ 2025 ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಮಾರ್ಚ್ 01, 2025 ರಿಂದ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಪ್ರಾರಂಭಿಸಿದೆ. ಬ್ಯಾಂಕ್ ಆಫ್ ಇಂಡಿಯಾ BOI ಅಪ್ರೆಂಟಿಸ್ ನೇಮಕಾತಿ 2025 ಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
- ಅಧಿಕೃತ ವೆಬ್‌ಸೈಟ್ bankofindia.co.in ಗೆ ಹೋಗಿ ಅಥವಾ ಒದಗಿಸಲಾದ “ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ” ಲಿಂಕ್ ಬಳಸಿ.
- ಬ್ಯಾಂಕ್ ಆಫ್ ಇಂಡಿಯಾ BOI ಅಪ್ರೆಂಟಿಸ್ ಆನ್‌ಲೈನ್ ನೋಂದಣಿ ಫಾರ್ಮ್ 2025 ಅನ್ನು ನಿಖರವಾಗಿ ಭರ್ತಿ ಮಾಡಿ.
- ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದಂತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ.
- ಲಭ್ಯವಿರುವ ಪಾವತಿ ಆಯ್ಕೆಗಳ ಮೂಲಕ ಅರ್ಜಿ ಶುಲ್ಕವನ್ನು ಸಲ್ಲಿಸಿ.
- ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ಪ್ರತಿಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.