DRDO GTRE ಅಪ್ರೆಂಟಿಸ್ ನೇಮಕಾತಿ 2025 : ಬೆಂಗಳೂರಿನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಭಾಗವಾಗಿರುವ ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್ (GTRE), ಒಟ್ಟು 150 ಡಿಪ್ಲೊಮಾ ಮತ್ತು ಐಟಿಐ ವಿಭಾಗಗಳಲ್ಲಿ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡಿಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ, ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಆಕಾಂಕ್ಷಿಗಳು DRDO GTRE ಅಪ್ರೆಂಟಿಸ್ ನೇಮಕಾತಿ 2025 ರ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್/ ಆಫ್ಲ್ಯನ್ ನಲ್ಲಿ ಅರ್ಜಿ ಸಲ್ಲಿಸಬಹುದು.
DRDO GTRE ಅಪ್ರೆಂಟಿಸ್ ನೇಮಕಾತಿ ಹುದ್ದೆಯ ವಿವರಗಳು, ಹಾಗೂ ಇದಕ್ಕೆ ಅನುಗುಣವಾಗಿರುವ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.
DRDO GTRE ಅಪ್ರೆಂಟಿಸ್ ನೇಮಕಾತಿ 2025 : ನೇಮಕಾತಿಯ ವಿವರಗಳು
- ಸಂಸ್ಥೆಯ ಹೆಸರು : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)
- ಹುದ್ದೆಯ ಹೆಸರು : ಅಪ್ರೆಂಟಿಸ್ ಟ್ರೈನಿ
- ಒಟ್ಟು ಹುದ್ದೆಗಳು : 150 ಹುದ್ದೆಗಳು
- ಅರ್ಜಿ ಸ್ವರೂಪ : ಆನ್ಲೈನ್/ ಆಫ್ಲೈನ್ ಮೂಲಕ
- ಉದ್ಯೋಗ ಸ್ಥಳ : ಬೆಂಗಳೂರು
ಹುದ್ದೆಯ ವಿವರಗಳು
- ಪದವೀಧರ ಅಪ್ರೆಂಟಿಸ್ (ಎಂಜಿನಿಯರಿಂಗ್) : 75 ಹುದ್ದೆಗಳು
- ಪದವೀಧರ ಅಪ್ರೆಂಟಿಸ್ (ಎಂಜಿನಿಯರಿಂಗ್ ಅಲ್ಲದ) : 30 ಹುದ್ದೆಗಳು
- ಡಿಪ್ಲೊಮಾ ಅಪ್ರೆಂಟಿಸ್ ತರಬೇತಿದಾರರು : 20 ಹುದ್ದೆಗಳು
- ಐಟಿಐ ಅಪ್ರೆಂಟಿಸ್ ತರಬೇತಿದಾರರು : 25 ಹುದ್ದೆಗಳು
DRDO GTRE ಅಪ್ರೆಂಟಿಸ್ ನೇಮಕಾತಿ 2025 : ಅರ್ಹತಾ ಮಾನದಂಡಗಳು
ವಿದ್ಯಾರ್ಹತೆ :
- ಪದವೀಧರ ಅಪ್ರೆಂಟಿಸ್ (ಎಂಜಿನಿಯರಿಂಗ್): ಮೆಕ್ಯಾನಿಕಲ್ / ಏರೋ / ಎಲೆಕ್ಟ್ರಿಕಲ್ / ಸಿಎಸ್ / ಮೆಟಲರ್ಜಿ / ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿಯನ್ನು ಪಡೆದಿರಬೇಕು.
- ಪದವೀಧರ ಅಪ್ರೆಂಟಿಸ್ (ಎಂಜಿನಿಯರಿಂಗ್ ಅಲ್ಲದ): ಬಿ.ಕಾಂ / ಬಿ.ಎಸ್ಸಿ / ಬಿಎ / ಬಿಸಿಎ / ಬಿಬಿಎ ಪದವಿ.
- ಡಿಪ್ಲೊಮಾ ಅಪ್ರೆಂಟಿಸ್ಗಾಗಿ: ಮೆಕ್ಯಾನಿಕಲ್ / ಪ್ರೊಡಕ್ಷನ್ / ಟೂಲ್ & ಡೈ ಡಿಸೈನ್ / ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ / ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಕಂಪ್ಯೂಟರ್ ಸೈನ್ಸ್ / ಎಂಜಿನಿಯರಿಂಗ್ / ಕಂಪ್ಯೂಟರ್ ನೆಟ್ವರ್ಕಿಂಗ್ನಲ್ಲಿ ಡಿಪ್ಲೊಮಾ.
- ಐಟಿಐ ಅಪ್ರೆಂಟಿಸ್ಗಾಗಿ: ಮೆಷಿನಿಸ್ಟ್ / ಫಿಟ್ಟರ್ / ಟರ್ನರ್ / ಎಲೆಕ್ಟ್ರಿಷಿಯನ್ / ವೆಲ್ಡರ್ / ಶೀಟ್ ಮೆಟಲ್ ವರ್ಕರ್ / ಸಿಒಪಿಎಯಲ್ಲಿ ಐಟಿಐನಿಂದ ಪ್ರಮಾಣಪತ್ರ.
ವಯೋಮಿತಿ :
- ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
- ಆಕಾಂಕ್ಷಿಗಳ ಗರಿಷ್ಠ ವಯಸ್ಸು : 27 ವರ್ಷಗಳು
DRDO GTRE ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆಯ ಸರ್ಕಾರಿ ನಿಯಮಗಳ ಪ್ರಕಾರ, ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
DRDO GTRE ಅಪ್ರೆಂಟಿಸ್ ನೇಮಕಾತಿ 2025 : ಮಾಸಿಕ ವೇತನ
DRDO GTRE ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆಯ ಸರ್ಕಾರಿ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನನ್ನು ನೀಡಲಾಗುತ್ತದೆ.
- ಪದವೀಧರ (ಎಂಜಿನಿಯರಿಂಗ್ / ಎಂಜಿನಿಯರಿಂಗ್ ಅಲ್ಲದ) : ₹9,000/-
- ಡಿಪ್ಲೊಮಾ ಅಪ್ರೆಂಟಿಸ್ : ₹8,000/-
- ITI ಅಪ್ರೆಂಟಿಸ್ : ₹7,000/-
DRDO GTRE ಅಪ್ರೆಂಟಿಸ್ ನೇಮಕಾತಿ 2025 : ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕವಿಲ್ಲ.
DRDO GTRE ಅಪ್ರೆಂಟಿಸ್ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
DRDO GTRE ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.
- ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ.
- ದಾಖಲೆ ಪರಿಶೀಲನೆ
DRDO GTRE ಅಪ್ರೆಂಟಿಸ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
DRDO GTRE ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.
- ಅರ್ಜಿದಾರರು NATS ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆಯ್ಕೆ ಮಾಡಿಕೊಳ್ಳಬಹುದು. ಅದರ ಬದಲಾಗಿ, ಆಕಾಂಕ್ಷಿಗಳು ಅಧಿಕೃತ ಅಧಿಸೂಚನೆಯಲ್ಲಿ ಒದಗಿಸಲಾದ ಸ್ವರೂಪವನ್ನು ಬಳಸಿಕೊಂಡು ಆಫ್ಲೈನ್ ಅರ್ಜಿಯನ್ನು ಸಲ್ಲಿಸಬಹುದು.
- ಸಲ್ಲಿಸಿರುವ ಅರ್ಜಿಯ ಜೊತೆಗೆ, ಶೈಕ್ಷಣಿಕ, ವೈಯಕ್ತಿಕ ಪುರಾವೆಗಳನ್ನು ಸೇರಿಸಬೇಕು. ಆಫ್ಲೈನ್ ಅರ್ಜಿ ಅಥವಾ ಅದರ ಸ್ಕ್ಯಾನ್ ಮಾಡಿದ ಪ್ರತಿಯನ್ನು hrd.gtre@gov.in ಇಮೇಲ್ ಮೂಲಕ ಹಾಗೂ ಅಂಚೆ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.
ಆಫ್ಲೈನ್ ವಿಳಾಸ :
ನಿರ್ದೇಶಕರು
ಅನಿಲ ಟರ್ಬೈನ್ ಸಂಶೋಧನಾ ಸ್ಥಾಪನೆ, DRDO
ಪೋಸ್ಟ್ ಬಾಕ್ಸ್ ಸಂಖ್ಯೆ 9302, ಸಿ.ವಿ. ರಾಮನ್ ನಗರ
ಬೆಂಗಳೂರು – 560 093
DRDO GTRE ಅಪ್ರೆಂಟಿಸ್ ನೇಮಕಾತಿ 2025 : ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 09ಏಪ್ರಿಲ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08 ಮೇ 2025
DRDO GTRE ಅಪ್ರೆಂಟಿಸ್ ನೇಮಕಾತಿ 2025 : ಪ್ರಮುಖ ಲಿಂಕ್ಗಳು
ಅಧಿಸೂಚನೆ ಲಿಂಕ್ : ಮೇಲೆ ಕ್ಲಿಕ್ ಮಾಡಿ
ಅಪ್ಲಿಕೇಶನ್ ಲಿಂಕ್ : ಮೇಲೆ ಕ್ಲಿಕ್ ಮಾಡಿ