SSC ನೇಮಕಾತಿ 2025 : ಸಿಬ್ಬಂದಿ ಆಯ್ಕೆ ಆಯೋಗವು (ಸ್ಟಾಫ್ ಸೆಲೆಕ್ಷನ್ ಕಮಿಷನ್ SSC) ಒಟ್ಟು 7565 ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಈಗಲೇ ಅರ್ಜಿ ಸಲ್ಲಿಸಬಹುದಾಗಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. SSC ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.
SSC ನೇಮಕಾತಿ 2025 : ನೇಮಕಾತಿಯ ವಿವರಗಳು
- ಸಂಸ್ಥೆಯ ಹೆಸರು : ಸಿಬ್ಬಂದಿ ಆಯ್ಕೆ ಆಯೋಗ (SSC)
- ಹುದ್ದೆಯ ಹೆಸರು : ದೆಹಲಿ ಪೊಲೀಸ್ ಕಾನ್ಸ್‌ಟೇಬಲ್
- ಒಟ್ಟು ಹುದ್ದೆಗಳು : 7565 ಹುದ್ದೆಗಳು
- ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ : ಅಖಿಲ ಭಾರತ
ಹುದ್ದೆಗಳ ವಿವರಗಳು
- ಕಾನ್‌ಸ್ಟೆಬಲ್ (ಎಕ್ಸಿ.)-ಪುರುಷ : 4408 ಹುದ್ದೆಗಳು
- ಕಾನ್‌ಸ್ಟೆಬಲ್ (ನಿವೃತ್ತ)-ಪುರುಷ [ಮಾಜಿ ಸೈನಿಕರು (ಇತರರು)] : 285 ಹುದ್ದೆಗಳು
- ಕಾನ್‌ಸ್ಟೆಬಲ್ (ನಿವೃತ್ತ)-ಪುರುಷ [ಮಾಜಿ ಸೈನಿಕರು (ಕಮಾಂಡೋ)] : 376 ಹುದ್ದೆಗಳು
- ಕಾನ್‌ಸ್ಟೆಬಲ್ (ಎಕ್ಸಿ.)-ಮಹಿಳೆ : 2496 ಹುದ್ದೆಗಳು
ಅರ್ಹತಾ ಮಾನದಂಡಗಳ ವಿವರಗಳು
ಶೈಕ್ಷಣಿಕ ಅರ್ಹತೆ :
SSC ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ
ಪೂರ್ಣಗೊಳಿಸಿರಬೇಕು .
ವಯೋಮಿತಿ :
- ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
- ಆಕಾಂಕ್ಷಿಗಳ ಗರಿಷ್ಠ ವಯಸ್ಸು : 25 ವರ್ಷಗಳು
ಮಾಸಿಕ ವೇತನ
SSC ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ತಿಂಗಳಿಗೆ ರೂ.21700 – 69100/- ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ
- ಮಹಿಳಾ ಆಕಾಂಕ್ಷಿಗಳು / SC / ST / ಮತ್ತು ಮಾಜಿ ಸೈನಿಕ ಆಕಾಂಕ್ಷಿಗಳಿಗೆ : ಶುಲ್ಕ ವಿನಾಯಿತಿ
- ಇತರ ಉಳಿದ ವರ್ಗಗಳ ಆಕಾಂಕ್ಷಿಗಳಿಗೆ : ರೂ.100/-
ಆಯ್ಕೆ ಪ್ರಕ್ರಿಯೆ
SSC ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ.
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ದೈಹಿಕ ಸಹಿಷ್ಣುತೆ ಮತ್ತು ಅಳತೆ ಪರೀಕ್ಷೆ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
SSC ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
- SSC ನೇಮಕಾತಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಲಿಂಕ್ ಮೇಲೆ ಕ್ಲಿಕ್ ಮಾಡಿ
- ಮಾನ್ಯ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನೋಂದಾಯಿಸಿ
- ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
- ನಿಮ್ಮ ಭಾವಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿ
- ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 22 ಸೆಪ್ಟೆಂಬರ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21 ಅಕ್ಟೋಬರ್ 2025
- ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ: ಡಿಸೆಂಬರ್ 2025/ಜನವರಿ 2026
ಪ್ರಮುಖ ಲಿಂಕ್ ಗಳು
ಅಧಿಸೂಚನೆ ಲಿಂಕ್ : ಮೇಲೆ ಕ್ಲಿಕ್ ಮಾಡಿ
ಅಪ್ಲಿಕೇಶನ್ ಲಿಂಕ್ : ಮೇಲೆ ಕ್ಲಿಕ್ ಮಾಡಿ