BCC ಬ್ಯಾಂಕ್ ನೇಮಕಾತಿ 2025 : ಬೆಂಗಳೂರಿನಲ್ಲಿ 1990 ರಲ್ಲಿ ಸ್ಥಾಪನೆಯಾದ ಒಟ್ಟು 22 ಶಾಖೆಗಳನ್ನು ಹೊಂದಿರುವ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (BCC BANK) ಒಟ್ಟು 74 ಜೂನಿಯರ್ ಅಸಿಸ್ಟೆಂಟ್‌ಗಳು ಮತ್ತು ಅಟೆಂಡರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅದಿಕೃತ ವೆಬ್ಸೈಟ್ ಮೂಲಕ ಆನಲ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ
BCC ಬ್ಯಾಂಕ್ ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು
- ಸಂಸ್ಥೆಯ ಹೆಸರು : ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (BCC BANK)
- ಹುದ್ದೆಯ ಹೆಸರು : ಜೂನಿಯರ್ ಅಸಿಸ್ಟೆಂಟ್‌ಗಳು ಮತ್ತು ಅಟೆಂಡರ್ ಹುದ್ದೆಗಳು
- ಒಟ್ಟು ಹುದ್ದೆಗಳು : 74 ಹುದ್ದೆಗಳು
- ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ : ಬೆಂಗಳೂರು – ಕರ್ನಾಟಕ
ಹುದ್ದೆಯ ವಿವರಗಳು
- ಜೂನಿಯರ್ ಅಸಿಸ್ಟೆಂಟ್ : 62 ಹುದ್ದೆಗಳು
- ಅಟೆಂಡರ್ : 12 ಹುದ್ದೆಗಳು
ಅರ್ಹತಾ ಮಾನದಂಡಗಳ ವಿವರಗಳು
ವಿದ್ಯಾರ್ಹತೆ :
- ಆಕಾಂಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು.
- ಮೂಲಭೂತ ಕಂಪ್ಯೂಟರ್ ಜ್ಞಾನ ವಿರಬೇಕು
- ಕನ್ನಡ ಭಾಷೆಯನ್ನು ಓದಲು, ಬರೆಯಲು ಬರಬೇಕು.
- ಆಕಾಂಕ್ಷಿಗಳು ಕರ್ನಾಟಕದ ನಿವಾಸಿಯಾಗಿರಬೇಕು
ವಯೋಮಿತಿ :
- ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
- ಆಕಾಂಕ್ಷಿಗಳ ಗರಿಷ್ಠ ವಯಸ್ಸು : ವರ್ಗಗಳ ಆಧಾರದ ಮೇಲೆ ಗರಿಷ್ಠ ವಯಸ್ಸಿನ ಮಿತಿಯನ್ನು ಪರಿಗಣಿಸಲಾಗುತ್ತದೆ.
- ಅಧಿಕೃತ ಅಧಿಸೂಚನೆಯ ಪ್ರಕಾರ, ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಮಾಸಿಕ ವೇತನ
ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
- ಜೂನಿಯರ್ ಅಸಿಸ್ಟೆಂಟ್ : ರೂ. 61,300 – 1,12,900/-
- ಅಟೆಂಡರ್ : ರೂ. 44,425 – 83,700/-
ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
- SC / ST / ಪ್ರವರ್ಗ-1 / ಪಿಡಬ್ಲ್ಯೂಡಿ / ಮಾಜಿ ಸೈನಿಕರು : ₹600
- ಇತರ ವರ್ಗಗಳು : ₹800
ಪಾವತಿ ವಿಧಾನ : ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಮೂಲಕ ಆನ್ಲೈನ್ ನಲ್ಲಿ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ
- ಸಂದರ್ಶನ
- ದಾಖಲೆ ಪರಿಶೀಲನೆ
ಅರ್ಜಿ ಸಲ್ಲಿಸುವ ವಿಧಾನ
- BCC ಬ್ಯಾಂಕ್ ನೇಮಕಾತಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ವೃತ್ತಿಜೀವನದ ಮೇಲೆ ಕ್ಲಿಕ್ ಮಾಡಿ
- ಮಾನ್ಯ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನೋಂದಾಯಿಸಿ
- ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
- ನಿಮ್ಮ ಛಾಯಾಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಿಮ ಅಪ್ಲೋಡ್ ಮಾಡು
- ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20 ಆಗಸ್ಟ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಸೆಪ್ಟೆಂಬರ್ 2025
ಪ್ರಮುಖ ಲಿಂಕ್ ಗಳು
ಅಧಿಸೂಚನೆ ಲಿಂಕ್ : ಮೇಲೆ ಕ್ಲಿಕ್ ಮಾಡಿ
ಅಪ್ಲಿಕೇಶನ್ ಲಿಂಕ್ : ಮೇಲೆ ಕ್ಲಿಕ್ ಮಾಡಿ