Home ಬ್ಯಾಂಕ್ ನೇಮಕಾತಿBOI: ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025 || 115 ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್‌ ಅರ್ಜಿ ಆಹ್ವಾನ

BOI: ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025 || 115 ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್‌ ಅರ್ಜಿ ಆಹ್ವಾನ

by admin
20251120 121635

BOI ನೇಮಕಾತಿ 2025 : ಬ್ಯಾಂಕ್ ಆಫ್ ಇಂಡಿಯಾ (BOI) ದಲ್ಲಿ ಒಟ್ಟು 115 ಅಧಿಕಾರಿ (ಮ್ಯಾನೇಜರ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. Vಬ್ಯಾಂಕ್‌ ನಲ್ಲಿ ಕೆಲಸ ಮಾಡಲು ಇಚ್ಚಿಸುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. BOI ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

BOI ನೇಮಕಾತಿ 2025

BOI ನೇಮಕಾತಿಯ ಪ್ರಮುಖ ಅಂಶಗಳು

  • ಸಂಸ್ಥೆಯ ಹೆಸರು : ಬ್ಯಾಂಕ್ ಆಫ್ ಇಂಡಿಯಾ (BOI)
  • ಹುದ್ದೆಯ ಹೆಸರು : ಅಧಿಕಾರಿ (ಮ್ಯಾನೇಜರ್)
  • ಒಟ್ಟು ಹುದ್ದೆಗಳು : 115 ಹುದ್ದೆಗಳು
  • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
  • ಉದ್ಯೋಗ ಸ್ಥಳ : ಅಖಿಲ ಭಾರತ

ಹುದ್ದೆಗಳ ವಿವರಗಳು

  • ಮುಖ್ಯ ವ್ಯವಸ್ಥಾಪಕರು : 15 ಹುದ್ದೆಗಳು
  • ಹಿರಿಯ ವ್ಯವಸ್ಥಾಪಕರು : 54 ಹುದ್ದೆಗಳು
  • ಕಾನೂನು ಅಧಿಕಾರಿ : 2 ಹುದ್ದೆಗಳು
  • ವ್ಯವಸ್ಥಾಪಕ : 44 ಹುದ್ದೆಗಳು

BOI ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು

ಶೈಕ್ಷಣಿಕ ಅರ್ಹತೆ :

BOI ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಬಿ.ಎಸ್ಸಿ, ಬಿಇ/ ಬಿ.ಟೆಕ್, ಎಂಇ/ ಎಂ.ಟೆಕ್, ಎಂಸಿಎ, ಎಂ.ಎಸ್ಸಿ, ಸ್ನಾತಕೋತ್ತರ ಪದವಿ, ಕಾನೂನು ಪದವಿ, ಎಲ್‌ಎಲ್‌ಬಿ, CA, ICWA, B.Sc, BE/ B.Tech, ಪದವಿ, ME/ M.Tech, MCA, M.Sc, ಸ್ನಾತಕೋತ್ತರ ಪದವಿ, MBA ಪೂರ್ಣಗೊಳಿಸಿರಬೇಕು.

ವಯೋಮಿತಿ :

  • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 23 ವರ್ಷಗಳು
  • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 45 ವರ್ಷಗಳು

ವಯೋಮಿತಿ ಸಡಿಲಿಕೆ:

  • ಒಬಿಸಿ ಆಕಾಂಕ್ಷಿಗಳು : 3 ವರ್ಷಗಳು
  • ಎಸ್‌ ಸಿ ,ಎಸ್‌ ಟಿ ಆಕಾಂಕ್ಷಿಗಳು : 5 ವರ್ಷಗಳು
  • ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳು : 10 ವರ್ಷಗಳು

ಮಾಸಿಕ ವೇತನ

BOI ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ ರೂ. 64,820 – 1,20,940/- ಮಾಸಿಕ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ

  • ಎಸ್‌ ಸಿ, ಎಸ್‌ ಟಿ, ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳು : ರೂ. 175/-
  • ಸಾಮಾನ್ಯ ಮತ್ತು ಇತರೆ ಆಕಾಂಕ್ಷಿಗಳು : ರೂ. 850/-

ಪಾವತಿ ವಿಧಾನ : ಅರ್ಜಿ ಶುಲ್ಕವನ್ನು ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಯುಪಿಐ, ನೆಟ್‌ ಬ್ಯಾಂಕಿಂಗ್‌ ಮೂಲಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ

  • ಆನ್ಲೈನ್ ಪರೀಕ್ಷೆ
  • ವೈಯಕ್ತಿಕ ಸಂದರ್ಶನ‌

BOI ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

  • BOI ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
  • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
  • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
  • ನಿಮ್ಮ ಛಾಯಾಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
  • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
  • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ.

BOI ನೇಮಕಾತಿ 2025 : ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 17 ನವೆಂಬರ್‌ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ನವೆಂಬರ್ 2025

ಪ್ರಮುಖ ಲಿಂಕ್‌ ಗಳು

ಅಧಿಸೂಚನೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ

You may also like

Leave a Comment