afp header code starts here --> afp header code starts here -->

NWKRTC ಸಾರಿಗೆ ಇಲಾಖೆ ನೇಮಕಾತಿ 2025 || 33 ಸಹಾಯಕ ಸಂಚಾರ ವ್ಯವಸ್ಥಾಪಕ, ಮೆಕ್ಯಾನಿಕಲ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ

NWKRTC ಸಾರಿಗೆ ಇಲಾಖೆ ನೇಮಕಾತಿ 2025 : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು (NWKRTC), ರಾಜ್ಯದ ವಾಯುವ್ಯ ಭಾಗಗಳಿಗೆ ಬಸ್ ಸೇವೆಯನ್ನು ಒದಗಿಸುವ ಸಂಸ್ಥೆಯಾಗಿದ್ದು, ಒಟ್ಟು 33 ಸಹಾಯಕ ಸಂಚಾರ ವ್ಯವಸ್ಥಾಪಕ, ಮೆಕ್ಯಾನಿಕಲ್ ಎಂಜಿನಿಯರ್ ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಥವಾ ಸಾರಿಗೆ ಇಲಾಖೆಯಲ್ಲಿ ಉದ್ಯೋಗವನ್ನು ಬಯಸುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. NWKRTC ಸಾರಿಗೆ ಇಲಾಖೆ ನೇಮಕಾತಿಯ ಹುದ್ದೆಯ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಅರ್ಹತಾ ಮಾನದಂಡಗಳ ವಿವರಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

NWKRTC ಸಾರಿಗೆ ಇಲಾಖೆ ನೇಮಕಾತಿ 2025

NWKRTC ಸಾರಿಗೆ ಇಲಾಖೆ ನೇಮಕಾತಿಯ ಹೈಲೈಟ್ಸ್

  • ಸಂಸ್ಥೆಯ ಹೆಸರು : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು (NWKRTC)
  • ಹುದ್ದೆಯ ಹೆಸರು : ಸಹಾಯಕ ಸಂಚಾರ ವ್ಯವಸ್ಥಾಪಕ, ಮೆಕ್ಯಾನಿಕಲ್ ಎಂಜಿನಿಯರ್
  • ಒಟ್ಟು ಹುದ್ದೆಗಳು : 33 ಹುದ್ದೆಗಳು
  • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
  • ಉದ್ಯೋಗ ಸ್ಥಳ : ಕರ್ನಾಟಕ

ಹುದ್ದೆಗಳ ವಿವರಗಳು

ಹುದ್ದೆಯ ಹೆಸರುಒಟ್ಟು ಹುದ್ದೆಗಳು
ಸಹಾಯಕ ಆಡಳಿತ ಅಧಿಕಾರಿ2
ಸಹಾಯಕ ಲೆಕ್ಕಪತ್ರ ಅಧಿಕಾರಿ2
ಸಹಾಯಕ ಕಾನೂನು ಅಧಿಕಾರಿ6
ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿ5
ಸಹಾಯಕ ಮೆಕ್ಯಾನಿಕಲ್ ಎಂಜಿನಿಯರ್8
ಸಹಾಯಕ ಸಂಚಾರ ವ್ಯವಸ್ಥಾಪಕರು10

NWKRTC ಸಾರಿಗೆ ಇಲಾಖೆ ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು

ಶೈಕ್ಷಣಿಕ ಅರ್ಹತೆ :

NWKRTC ಸಾರಿಗೆ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗುತ್ತದೆ.

  • ಸಹಾಯಕ ಆಡಳಿತ ಅಧಿಕಾರಿ : ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
  • ಸಹಾಯಕ ಲೆಕ್ಕಪತ್ರ ಅಧಿಕಾರಿ : ಬಿ.ಕಾಂ, ಸ್ನಾತಕೋತ್ತರ ಪದವಿ, ಎಂಬಿಎ
  • ಸಹಾಯಕ ಕಾನೂನು ಅಧಿಕಾರಿ : ಕಾನೂನು ಪದವಿ, ಎಲ್‌ಎಲ್‌ಬಿ
  • ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿ : ಪದವಿ, ಸ್ನಾತಕೋತ್ತರ ಪದವಿ, ಎಂಎಸ್‌ಡಬ್ಲ್ಯೂ
  • ಸಹಾಯಕ ಮೆಕ್ಯಾನಿಕಲ್ ಎಂಜಿನಿಯರ್ : ಪದವಿ, ಬಿಇ/ ಬಿ.ಟೆಕ್
  • ಸಹಾಯಕ ಸಂಚಾರ ವ್ಯವಸ್ಥಾಪಕರು : ಪದವಿ, ಸ್ನಾತಕೋತ್ತರ ಪದವಿ, ಎಂಎಸ್‌ಡಬ್ಲ್ಯೂ, ಎಂಬಿಎ ಪೂರ್ಣಗೊಳಿಸಿರಬೇಕು.

ವಯೋಮಿತಿ :

  • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
  • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 38 ವರ್ಷಗಳು

ವಯೋಮಿತಿ ಸಡಿಲಿಕೆ :

  • ಒಬಿಸಿ, ಇಡಬ್ಲ್ಯೂಎಸ್‌ ಆಕಾಂಕ್ಷಿಗಳಿಗೆ : 3 ವರ್ಷಗಳು
  • ಎಸ್‌ ಸಿ, ಎಸ್‌ ಟಿ ಆಕಾಂಕ್ಷಿಗಳಿಗೆ : 5 ವರ್ಷಗಳು

ಮಾಸಿಕ ವೇತನ

NWKRTC ಸಾರಿಗೆ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಆಕಾಂಕ್ಷಿಗಳಿಗೆ ತಿಂಗಳಿಗೆ ರೂ. 42,600 – 75,010/- ಮಾಸಿಕ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ

  • ಒಬಿಸಿ, ಇಡಬ್ಲ್ಯೂಎಸ್‌ ಆಕಾಂಕ್ಷಿಗಳಿಗೆ : ರೂ. 750/-
  • ಎಸ್‌ ಸಿ, ಎಸ್‌ ಟಿ, ಪ್ರವರ್ಗ-1 ಆಕಾಂಕ್ಷಿಗಳಿಗೆ : ರೂ. 500/-
  • ಪಿಡಬ್ಲ್ಯೂಡಿ ಆಕಾಂಕ್ಷಿಗಳಿಗೆ : ರೂ. 250/-

ಪಾವತಿ ವಿಧಾನ : ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ಯುಪಿಐ ಮತ್ತು ನೆಟ್‌ ಬ್ಯಾಂಕಿಂಗ್‌ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ

  • ಲಿಖಿತ ಪರೀಕ್ಷೆ
  • ಸಂದರ್ಶನ

NWKRTC ಸಾರಿಗೆ ಇಲಾಖೆ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

  • NWKRTC ಸಾರಿಗೆ ಇಲಾಖೆ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ.
  • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೊಂದಾಯಿಸಿ
  • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
  • ನಿಮ್ಮ ಇತ್ತೀಚಿನ ಫೋಟೋ, ಸಹಿ,ಪ್ರಮಾಣಪತ್ರಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
  • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
  • ಅರ್ಜಿಯನ್ನು ಪೂರ್ಣಗೊಳಿಸಿದ ನಂತರ ಸಲ್ಲಿಸು ಬಟನ್ ಕ್ಲಿಕ್ ಮಾಡಿ, ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ.

NWKRTC ಸಾರಿಗೆ ಇಲಾಖೆ ನೇಮಕಾತಿ 2025 : ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 21 ನವೆಂಬರ್‌ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಡಿಸೆಂಬರ್ 2025

ಪ್ರಮುಖ ಲಿಂಕ್‌ ಗಳು

ಅಧಿಸೂಚನೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ

Comments

Leave a Reply

Your email address will not be published. Required fields are marked *