RRB NTPC ನೇಮಕಾತಿ 2025 : ರೈಲ್ವೆ ನೇಮಕಾತಿ ಮಂಡಳಿ (RRB) ಭಾರತದಾದ್ಯಂತ ಒಟ್ಟು 8850 NTPC (ಪದವಿ ಮತ್ತು ಪದವಿಪೂರ್ವ) ಸ್ಟೇಷನ್ ಮಾಸ್ಟರ್, ಕ್ಲರ್ಕ್, ಟೈಪಿಸ್ಟ್ ಮತ್ತು ಟಿಕೆಟ್ ಕ್ಲರ್ಕ್ ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕರತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಹಾಗೂ ರೈಲ್ವೆಇಲಾಖೆಯಲ್ಲಿ ಉದ್ಯೋಗವನ್ನು ಬಯಸುವ ಆಕಾಂಕ್ಷಿಗಳು RRB NTPC ನೇಮಕಾತಿ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.
RRB NTPC ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು
- ಸಂಸ್ಥೆಯ ಹೆಸರು : ರೈಲ್ವೆ ನೇಮಕಾತಿ ಮಂಡಳಿ (RRB)
- ಹುದ್ದೆಯ ಹೆಸರು : ಸ್ಟೇಷನ್ ಮಾಸ್ಟರ್, ಕ್ಲರ್ಕ್, ಟೈಪಿಸ್ಟ್ ಮತ್ತು ಟಿಕೆಟ್ ಕ್ಲರ್ಕ್ ಹಾಗೂ ಇತರ ಹುದ್ದೆಗಳು
- ಒಟ್ಟು ಹುದ್ದೆಗಳು : 8850 ಹುದ್ದೆಗಳು
- ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ : ಅಖಿಲ ಭಾರತ
ಹುದ್ದೆಗಳ ವಿವರಗಳು
ಪದವಿ ಹಂತ
- ಸ್ಟೇಷನ್ ಮಾಸ್ಟರ್ : 615 ಹುದ್ದೆಗಳು
- ಸರಕು ರೈಲು ವ್ಯವಸ್ಥಾಪಕ : 3,423 ಹುದ್ದೆಗಳು
- ಸಂಚಾರ ಸಹಾಯಕ (ಮೆಟ್ರೋ ರೈಲ್ವೆ) : 59 ಹುದ್ದೆಗಳು
- ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕರು (CCTS) : 161 ಹುದ್ದೆಗಳು
- ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ (ಜೆಎಎ) : 921 ಹುದ್ದೆಗಳು
- ಹಿರಿಯ ಗುಮಾಸ್ತ ಕಮ್ ಟೈಪಿಸ್ಟ್ : 638 ಹುದ್ದೆಗಳು
- ಒಟ್ಟು : 5,817 ಹುದ್ದೆಗಳು
ಪದವಿಪೂರ್ವ ಹಂತ
- ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ : 163 ಹುದ್ದೆಗಳು
- ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ : 394 ಹುದ್ದೆಗಳು
- ರೈಲು ಗುಮಾಸ್ತ : 77 ಹುದ್ದೆಗಳು
- ವಾಣಿಜ್ಯ ಕಮ್ ಟಿಕೆಟ್ ಕ್ಲರ್ಕ್ : 2,424 ಹುದ್ದೆಗಳು
- ಒಟ್ಟು : 3,058 ಹುದ್ದೆಗಳು
ಅರ್ಹತಾ ಮಾನದಂಡಗಳ ವಿವರಗಳು
ವಿದ್ಯಾರ್ಹತೆ :
RRB NTPC ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಮಾನ್ಯತೆ ಪಡೆದ ಮಂಡಳಿ ಹಾಗೂ ವಿಶ್ವವಿದ್ಯಾಲಯದಿಂದ 12 ನೇ ತರಗತಿ ಅಥವಾ ತತ್ಸಮಾನ ಪದವಿಯನ್ನು ಪಡೆದಿರಬೇಕು.
ವಯೋಮಿತಿ :
NTPC ಪದವಿ ಹಂತ
- ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
- ಆಕಾಂಕ್ಷಿಗಳ ಗರಿಷ್ಠ ವಯಸ್ಸು : 36 ವರ್ಷಗಳು
NTPC ಪದವಿಪೂರ್ವ (12ನೇ ತರಗತಿ ಪಾಸ್)
- ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
- ಆಕಾಂಕ್ಷಿಗಳ ಗರಿಷ್ಠ ವಯಸ್ಸು : 33 ವರ್ಷಗಳು
ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಮಾಸಿಕ ವೇತನ
RRB NTPC ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳಿಗೆ ತಿಂಗಳಿಗೆ ರೂ.19900 -35400/- ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ
- ಸಾಮಾನ್ಯ /ಒಬಿಸಿ /ಇಡಬ್ಲ್ಯೂಎಸ್ ಆಕಾಂಕ್ಷಿಗಳಿಗೆ : 500 ರೂ.
- SC /ST /PwBD /ಮಹಿಳಾ /ಮಾಜಿ ಸೈನಿಕ ಆಕಾಂಕ್ಷಿಗಳಿಗೆ : ರೂ 250/-
ಆಯ್ಕೆ ಪ್ರಕ್ರಿಯೆ
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ಕಂಪ್ಯೂಟರ್ ಆಧಾರಿತ ಸಾಮರ್ಥ್ಯ ಪರೀಕ್ಷೆ
- ಕಂಪ್ಯೂಟರ್ ಆಧಾರಿತ ಟೈಪಿಂಗ್ ಕೌಶಲ್ಯ ಪರೀಕ್ಷೆ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
- ಸಂದರ್ಶನ
RRB NTPC ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
- RRB NTPC ನೇಮಕಾತಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್ ಮಾಡಿ
- ಮಾನ್ಯ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನೋಂದಾಯಿಸಿ
- ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
- ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿ
- ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 21 ಅಕ್ಟೋಬರ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27 ನವೆಂಬರ್ 2025
- CBT 1 ಪರೀಕ್ಷಾ ದಿನಾಂಕ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು
- CBT 2 ಪರೀಕ್ಷಾ ದಿನಾಂಕ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು
ಪ್ರಮುಖ ಲಿಂಕ್ ಗಳು
ಅಧಿಸೂಚನೆ ಲಿಂಕ್ : ಮೇಲೆ ಕ್ಲಿಕ್ ಮಾಡಿ
ಅಪ್ಲಿಕೇಶನ್ ಲಿಂಕ್ : ಮೇಲೆ ಕ್ಲಿಕ್ ಮಾಡಿ
RRB NTPC Recruitment 2025 || Official notification released for the recruitment of a total of 8850 Station Master, Clerk and other posts