SECL ಅಪ್ರೆಂಟಿಸ್ ಬೃಹತ್ ನೇಮಕಾತಿ 2025 || ಡಿಪ್ಲೋಮಾ ಪಾಸಾದ ಆಕಾಂಕ್ಷಿಗಳಿಗೆ ಅರ್ಜಿ ಆಹ್ವಾನ

SECL ಅಪ್ರೆಂಟಿಸ್ ನೇಮಕಾತಿ 2025 : ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ (SECL) ಒಟ್ಟು 1553 ಪದವೀಧರ ಮತ್ತು ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳಿ ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಛತ್ತೀಸ್‌ಗಢ – ಮಧ್ಯಪ್ರದೇಶ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. SECL ಅಪ್ರೆಂಟಿಸ್ ನೇಮಕಾತಿಯ ಹುದ್ದೆಯ ವಿವಗಳು, ಆರ್ಹತಾ ಮಾನದಮಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದಾಗಿದೆ.

SECL ಅಪ್ರೆಂಟಿಸ್ ನೇಮಕಾತಿ 2025 : ಹೈಲೈಟ್ಸ್
  • ಸಂಸ್ಥೆಯ ಹೆಸರು : ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (SECL)
  • ಹುದ್ದೆಯ ಹೆಸರು : ಪದವೀಧರ ಮತ್ತು ತಂತ್ರಜ್ಞ ಅಪ್ರೆಂಟಿಸ್
  • ಒಟ್ಟು ಹುದ್ದೆಗಳು : 1553 ಹುದ್ದೆಗಳು
  • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
  • ಉದ್ಯೋಗ ಸ್ಥಳ : ಛತ್ತೀಸ್‌ಗಢ, ಮಧ್ಯಪ್ರದೇಶ
ಹುದ್ದೆಯ ವಿವರಗಳು
  • ಪದವೀಧರ ಅಪ್ರೆಂಟಿಸ್ (ಗಣಿಗಾರಿಕೆ) : 174
  • ಪದವೀಧರ ಅಪ್ರೆಂಟಿಸ್ (ಸಿವಿಲ್) : 20
  • ಪದವೀಧರ ಅಪ್ರೆಂಟಿಸ್ (ಎಲೆಕ್ಟ್ರಿಕಲ್) : 30
  • ಪದವೀಧರ ಅಪ್ರೆಂಟಿಸ್ (ಮೆಕ್ಯಾನಿಕಲ್) 30
  • ಪದವೀಧರ ಅಪ್ರೆಂಟಿಸ್ (ಚುನಾಯಿತ ಮತ್ತು ದೂರವಾಣಿ) : 10
  • ಪದವೀಧರ ಅಪ್ರೆಂಟಿಸ್ (ಬಿಬಿಎ) : 25
  • ಪದವೀಧರ ಅಪ್ರೆಂಟಿಸ್ (BCA) : 100
  • ಪದವೀಧರ ಅಪ್ರೆಂಟಿಸ್ (ಬಿ. ಕಾಂ) 47
  • ಪದವೀಧರ ಅಪ್ರೆಂಟಿಸ್ (ಬಿ.ಎಸ್ಸಿ.) : 29
  • ತಂತ್ರಜ್ಞ ಅಪ್ರೆಂಟಿಸ್ (ಗಣಿ ಎಂಜಿನಿಯರ್) : 892
  • ತಂತ್ರಜ್ಞ ಅಪ್ರೆಂಟಿಸ್ (ಗಣಿ ಸರ್ವೇಕ್ಷಣೆ) : 39
  • ತಂತ್ರಜ್ಞ ಅಪ್ರೆಂಟಿಸ್ (ಸಿವಿಲ್ ಎಂಜಿನಿಯರ್) : 40
  • ತಂತ್ರಜ್ಞ ಅಪ್ರೆಂಟಿಸ್ (ಎಲೆಕ್ಟ್ರಿಕಲ್ ಎಂಜಿನಿಯರ್) : 57
  • ತಂತ್ರಜ್ಞ ಅಪ್ರೆಂಟಿಸ್ (ಮೆಕ್ಯಾನಿಕಲ್ ಎಂಜಿನಿಯರ್) : 60
ಅರ್ಹತಾ ಮಾನದಂಡಗಳ ವಿವರಗಳು

ವಿದ್ಯಾರ್ಹತೆ :

ಅಧಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಟೆಕ್/ಬಿಇ, ಡಿಪ್ಲೊಮಾ ಹೊಂದಿರಬೇಕು

ವಯೋಮಿತಿ :

  • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
  • ಅಧಿಸೂಚನೆಯ ನಿಯಮಗಳ ಪ್ರಕಾರ, ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ವೇತನ ಶ್ರೇಣಿ

ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನ ರೂ.8000/- ದಿಂದ ಆರಂಭವಾಗುತ್ತದೆ

ಅರ್ಜಿ ಶುಲ್ಕ

ಯಾವುದೇ ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ
  • ಮೆರಿಟ್ ಪಟ್ಟಿ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ
SECL ಅಪ್ರೆಂಟಿಸ್ ನೇಮಕಾತಿ 2025 :ಅರ್ಜಿ ಸಲ್ಲಿಸುವ ವಿಧಾನ
  • SECL ಅಪ್ರೆಂಟಿಸ್ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕಿಕ್‌ ಮಾಡಿ
  • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
  • ಅಗತ್ಯವಿರುವ ಎಲ್ಲಾ ಶೈಕ್ಷಣಿಕ ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ. ( ನಿಮ್ಮ ಭಾವಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ)
  • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ
  • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :  14-07-2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-07-2025
ಪ್ರಮುಖ ಲಿಂಕ್‌ ಗಳು

ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

Author: admin

Leave a Reply

Your email address will not be published. Required fields are marked *