BHU ಜೂನಿಯರ್ ಕ್ಲರ್ಕ್ ನೇಮಕಾತಿ 2025 || ಒಟ್ಟು 199 ಗ್ರೂಪ್ ‘ಸಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ

BHU ಜೂನಿಯರ್‌ ಕ್ಲರ್ಕ್‌ ನೇಮಕಾತಿ 2025 : ಬನಾರಸ್ ಹಿಂದೂ ವಿಶ್ವವಿದ್ಯಾಲಯ ( BHU ) ಗ್ರೂಪ್ ‘ಸಿ’ ಬೋಧಕೇತರ ಹುದ್ದೆಗಳ ಅಡಿಯಲ್ಲಿ ಜೂನಿಯರ್ ಕ್ಲರ್ಕ್ ನೇಮಕಾತಿಗಾಗಿ ಹುದ್ದೆಗಳನ್ನು ಭರ್ತಿ ಮಾಡಲು ಅಡ್ವೊಟ್. ಸಂಖ್ಯೆ 07/2024-25 ರಲ್ಲಿ ಒಟ್ಟು 199 ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಯಾವುದೇ ಪದವಿ ಪಡೆದ ಆಕಾಂಕ್ಷಿಗಳು ಬಿಎಚ್‌ಯು ನೇಮಕಾತಿಗೆ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಬಿಎಚ್‌ಯು ನೇಮಕಾತಿಗೆ ಅರ್ಜಿ ಸಲ್ಲಿಸಲು ದಿನಾಂಕ ಈಗಾಗಲೇ ಆರಂಭವಾಗಿದ್ದು, ಕೊನೆಯ ದಿನಾಂಕದೊಳಗೆ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಆಕಾಂಕ್ಷಿಗಳು BHU ಜೂನಿಯರ್‌ ಕ್ಲರ್ಕ್‌ ನೇಮಕಾತಿ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. BHU ನೇಮಕಾತಿಯ ಹುದ್ದೆಗಳ ವಿವರ, ಅರ್ಹತಾ ಮಾನದಂಡಗಳು, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

BHU ಜೂನಿಯರ್ ಕ್ಲರ್ಕ್ ನೇಮಕಾತಿ 2025 : ನೇಮಕಾತಿಯ ವಿವರ
  • ಸಂಸ್ಥೆಯ ಹೆಸರು : ಬನಾರಸ್ ಹಿಂದೂ ವಿಶ್ವವಿದ್ಯಾಲಯ ( BHU )
  • ಹುದ್ದೆಯ ಹೆಸರು : ಜೂನಿಯರ್ ಕ್ಲರ್ಕ್ ಹುದ್ದೆಗಳು
  • ಒಟ್ಟು ಹುದ್ದೆಗಳು : 199 ಹುದ್ದೆಗಳು
  • ಅರ್ಜಿಯ ಸ್ವರೂಪ : ಆನ್ಲೈನ್‌ / ಆಫ್‌ಲೈನ್ ಮೂಲಕ
  • ಅಧಿಸೂಚನೆ ಬಿಡುಗಡೆ ದಿನಾಂಕ : ಮಾರ್ಚ್ 18, 2025
BHU ಜೂನಿಯರ್ ಕ್ಲರ್ಕ್ ನೇಮಕಾತಿ 2025 : ಹುದ್ದೆಗ ವಿವರ
  • ಸಾಮಾನ್ಯ(UR) : 80 ಹುದ್ದೆಗಳು
  • ಆರ್ಥಿಕವಾಗಿ ದುರ್ಬಲ ವಿಭಾಗ (EWS) : 20 ಹುದ್ದೆಗಳು
  • ಪರಿಶಿಷ್ಟ ಜಾತಿ (SC) : 28 ಹುದ್ದೆಗಳು
  • ಪರಿಶಿಷ್ಟ ಪಂಗಡ : 13 ಹುದ್ದೆಗಳು
  • ಒಬಿಸಿ (OBC): 50 ಹುದ್ದೆಗಳು
  •  ಪಿಡಬ್ಲ್ಯೂಬಿಡಿ(PwBD) : 8 ಹುದ್ದೆಗಳು
BHU ಜೂನಿಯರ್ ಕ್ಲರ್ಕ್ ನೇಮಕಾತಿ 2025 : ಅರ್ಹತಾ ಮಾನದಂಡಗಳು

BHU ಜೂನಿಯರ್ ಕ್ಲರ್ಕ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು.

ವಿದ್ಯಾರ್ಹತೆ :

  • ಆಕಾಂಕ್ಷಿಗಳು ಯಾವುದೇ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು
  • ಕನಿಷ್ಠ ಆರು ತಿಂಗಳ ಕಂಪ್ಯೂಟರ್ ತರಬೇತಿಯೊಂದಿಗೆ ಎರಡನೇ ದರ್ಜೆಯ ಪದವಿ,  ಟೈಪಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇಂಗ್ಲಿಷ್-ನಿಮಿಷಕ್ಕೆ 30 ಪದಗಳು / ಹಿಂದಿ-ನಿಮಿಷಕ್ಕೆ 25 ಪದಗಳ ಟೈಪಿಂಗ್ ವೇಗ ಹೊಂದಿರಬೇಕಾಗುತ್ತದೆ

ವಯೋಮಿತಿ :

  • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
  • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 30 ವರ್ಷಗಳು
  • ನೇಮಕಾತಿಯ ಅಧಿಸೂಚನೆಯ ನಿಯಮಗಳ ಪ್ರಕಾರ ವಯಸ್ಸಿನಲ್ಲಿ ಸಡಿಲಿಕೆ ಇರುತ್ತದೆ.
BHU ಜೂನಿಯರ್ ಕ್ಲರ್ಕ್ ನೇಮಕಾತಿ 2025 : ಮಾಸಿಕ ವೇತನ

BHU ಜೂನಿಯರ್ ಕ್ಲರ್ಕ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಕಾಂಕ್ಷಿಗಳ ಮಾಸಿಕ ವೇತನವು  ₹19,900 – ₹63,200 / – ಇರುತ್ತದೆ.

BHU ಜೂನಿಯರ್ ಕ್ಲರ್ಕ್ ನೇಮಕಾತಿ 2025 : ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
  • ಸಾಮಾನ್ಯ (UR), ಇಡಬ್ಲ್ಯೂಎಸ್, ಒಬಿಸಿ : ರೂ. 500/-
  • ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಬಿಡಿ, ಮಹಿಳಾ ಆಕಾಂಕ್ಷಿಗಳು : ಶುಲ್ಕ ವಿನಾಯಿತಿ

ಪಾವತಿ ವಿಧಾನ : ಅರ್ಜಿ ಸಲ್ಲಿಸಲು ಆಕಾಂಕ್ಷಿಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿ‌ ಪಾವತಿಸಬಹುದು.

BHU ಜೂನಿಯರ್ ಕ್ಲರ್ಕ್ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

BHU ಜೂನಿಯರ್ ಕ್ಲರ್ಕ್ ನೇಮಕಾತಿಯ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

  • ಲಿಖಿತ ಪರೀಕ್ಷೆ
  • ಸಿಪಿಟಿ ಮತ್ತು ಟೈಪಿಂಗ್ ಪರೀಕ್ಷೆ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ 
BHU ಜೂನಿಯರ್ ಕ್ಲರ್ಕ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

BHU ಜೂನಿಯರ್ ಕ್ಲರ್ಕ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

  • BHU ಜೂನಿಯರ್ ಕ್ಲರ್ಕ್ ನೇಮಕಾತಿ 2025 ರ ಅಧಿಕೃತ ವೆಬ್‌ಸೈಟ್ www.bhu.ac.in/rac ಗೆ ಭೇಟಿ ನೀಡಿ .
  • ಮಾನ್ಯವಾದ ವಿವರಗಳನ್ನು ಒದಗಿಸಿ ಮತ್ತು ಖಾತೆಯನ್ನು ರಚಿಸಿ
  • ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್‌ ಮಾಡಿ ( ಛಾಯಚಿತ್ರ, ಸಹಿ, ಗುರುತಿನ ಪುರಾವೆ, ಅಂಕಪಟ್ಟಿ, ವಿಳಾಸ ವಿವರಗಳು ಮತ್ತು ಇತರ ಎಲ್ಲಾ ದಾಖಲೆಗಳನ್ನು ನಿರ್ದಿಷ್ಟಪಡಿಸಿದ ಸ್ವರೂಪದಲ್ಲಿ ಸ್ಕ್ಯಾನ್ ಮಾಡಿ)
  • ಒದಗಿಸಲಾದ ಎಲ್ಲಾ ವಿವರಗಳು ಪೂರ್ಣವಾಗಿದೆಯೋ ಎಂದು ಪರಿಶೀಲಿಸಿ
  • ಅರ್ಜಿ ಶುಲ್ಕವನ್ನು ಆನ್‌ಲೈನ್ / ಆಫ್‌ಲೈನ್ ಮೂಲಕ ಪಾವತಿ ಮಾಡಬಹುದು.
  • ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
  • ಡೌನ್‌ಲೋಡ್ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ: ರಿಜಿಸ್ಟ್ರಾರ್ ಕಚೇರಿ (ನೇಮಕಾತಿ ಮತ್ತು ಮೌಲ್ಯಮಾಪನ ಕೋಶ), ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ – 221005 ಗೆ ಕೊನೆಯ ದಿನಾಂಕದೊಳಗೆ ಕಳಿಹಿಸಿ.
BHU ಜೂನಿಯರ್ ಕ್ಲರ್ಕ್ ನೇಮಕಾತಿ 2025 : ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಮಾರ್ಚ್ 18, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 17, 2025
BHU ಜೂನಿಯರ್ ಕ್ಲರ್ಕ್ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ

Author: admin

Leave a Reply

Your email address will not be published. Required fields are marked *