ಬ್ಯಾಂಕ್ ಆಫ್ ಬರೋಡಾ (LBO) ನೇಮಕಾತಿ 2025 : ಬ್ಯಾಂಕ್ ಆಫ್ ಬರೋಡಾ ಭಾರತದಾದ್ಯಂತ ಒಟ್ಟು 2500 ಸ್ಥಳೀಯ ಬ್ಯಾಂಕ್ ಅಧಿಕಾರಿ (LBO) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಪದವಿ ಮತ್ತು 1 ವರ್ಷದ ಬ್ಯಾಂಕಿಂಗ್ ಅನುಭವ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಸಬಹುದು. ಬ್ಯಾಂಕಿಂಗ್ ವಲಯದಲ್ಲಿ ಸ್ಥಿರ, ಲಾಭದಾಯಕ ಮತ್ತು ಬೆಳವಣಿಗೆ-ಆಧಾರಿತ ವೃತ್ತಿಜೀವನವನ್ನು ಬಯಸುವವರಿಗೆ ಇದು ಒಂದು ಸುವರ್ಣಾವಕಾಶ. ಬ್ಯಾಂಕ್ ಆಫ್ ಬರೋಡಾ (LBO) ನೇಮಕಾತಿಯ ಹುದ್ದೆಯ ವಿವರಗಳು,ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.
ಬ್ಯಾಂಕ್ ಆಫ್ ಬರೋಡಾ (LBO) ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು
- ಸಂಸ್ಥೆಯ ಹೆಸರು : ಬ್ಯಾಂಕ್ ಆಫ್ ಬರೋಡಾ
- ಹುದ್ದೆಯ ಹೆಸರು : ಸ್ಥಳೀಯ ಬ್ಯಾಂಕ್ ಅಧಿಕಾರಿ (LBO), ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್
- ಒಟ್ಟು ಹುದ್ದೆಗಳು : 2500 ಹುದ್ದೆಗಳು
- ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ : ಭಾರತದಾದ್ಯಂತ
ಹುದ್ದೆಗಳ ವಿವರಗಳು
ಸ್ಥಳೀಯ ಬ್ಯಾಂಕ್ ಅಧಿಕಾರಿ (LBO) : 2500 ಹುದ್ದೆಗಳು
ಅರ್ಹತಾ ಮಾನದಂಡಗಳ ವಿವರಗಳು
ಶೈಕ್ಷಣಿಕ ಅರ್ಹತೆ :
ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿಯನ್ನು ಪಡೆದಿರಬೇಕು.
ಪರಿಶಿಷ್ಟ ವಾಣಿಜ್ಯ ಬ್ಯಾಂಕ್ ಅಥವಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕನಿಷ್ಠ 1 ವರ್ಷದ ಅನುಭವ
ವಯೋಮಿತಿ :
- ಆಕಾಂಕ್ಷಿಗಳ ಕನಿಷ್ಠ ವಯಸ್ಸು : 21 ವರ್ಷಗಳು
- ಆಕಾಂಕ್ಷಿಗಳ ಗರಿಷ್ಢ ವಯಸ್ಸು : 30 ವರ್ಷಗಳು
- ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ
ವೇತನ ಶ್ರೇಣಿ
ಅಧಿಸೂಚನೆಯ ನಿಯಮಗಳ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ರೂ 48480 ರಿಂದ 85920/- ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
- ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಆಕಾಂಕ್ಷಿಗಳಿಗೆ : ರೂ.850/- (ಜಿಎಸ್‌ಟಿ ಸೇರಿದಂತೆ) + ಪಾವತಿ ಗೇಟ್‌ವೇ ಶುಲ್ಕಗಳು
- SC, ST, PWD,ಮಾಜಿ ಸೈನಿಕರು ಮತ್ತು ಮಹಿಳೆಯರಿಗೆ : ರೂ.175/- (GST ಸೇರಿದಂತೆ) + ಪಾವತಿ ಗೇಟ್‌ವೇ ಶುಲ್ಕಗಳು
ಪಾವತಿ ವಿಧಾನ : ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ಇಂಟರ್ನೆಟ್ ಬ್ಯಾಂಕಿಂಗ್ / ಯುಪಿಐ ಮೂಲಕ ಆನ್ಲೈನ್ ನಲ್ಲಿ ಪಾವತಿಸಬಹುದು
ಆಯ್ಕೆ ಪ್ರಕ್ರಿಯೆ
- ಆನ್‌ಲೈನ್ ಪರೀಕ್ಷೆ
- ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT)
- ಮನೋಮಾಪನ ಪರೀಕ್ಷೆ
- ಗುಂಪು ಚರ್ಚೆ
- ಸಂದರ್ಶನ
ಬ್ಯಾಂಕ್ ಆಫ್ ಬರೋಡಾ (LBO) ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
- ಬ್ಯಾಂಕ್ ಆಫ್ ಬರೋಡಾ (LBO) ನೇಮಕಾತಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಲಿಂಕ್ ಮೇಲೆ ಕ್ಲಿಕ್ ಮಾಡಿ
- ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನೊಂದಾಯಿಸಿ
- ಅಗತ್ಯವಿರುವ ಎಲ್ಲಾ ಶೈಕ್ಷಣಿಕ /ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
- ನಿಮ್ಮ ಛಾಯಾಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿ
- ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 04 ಜುಲೈ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24 ಜುಲೈ 2025
ಪ್ರಮುಖ ಲಿಂಕ್ ಗಳು
ಅಧಿಸೂಚನೆ ಲಿಂಕ್ : ಮೇಲೆ ಕ್ಲಿಕ್ ಮಾಡಿ
ಅಪ್ಲಿಕೇಶನ್ ಲಿಂಕ್ : ಮೇಲೆ ಕ್ಲಿಕ್ ಮಾಡಿ