afp header code starts here --> afp header code starts here -->

GSECL ಜೂನಿಯರ್ ಎಂಜಿನಿಯರ್ ನೇಮಕಾತಿ 2025 || 135 ಹುದ್ದೆಗಳಿಗೆ ಆನ್ಲೈನ್‌ ನಲ್ಲಿ ಈಗಲೇ ಅರ್ಜಿ ಸಲ್ಲಿಸಿ

GSECL ಜೂನಿಯರ್ ಎಂಜಿನಿಯರ್ ನೇಮಕಾತಿ 2025 : ಗುಜರಾತ್ ರಾಜ್ಯ ವಿದ್ಯುತ್ ನಿಗಮ (GSECL) ಒಟ್ಟು 135 ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉನ್ನತ ಶಿಕ್ಷಣವನ್ನು ಪಡೆದಿರುವ ಆಕಾಂಕ್ಷಿಗಳು / ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಇಂತಹ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿದೆ. GSECL ಜೂನಿಯರ್ ಎಂಜಿನಿಯರ್ ನೇಮಕಾತಿ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

GSECL ಜೂನಿಯರ್ ಎಂಜಿನಿಯರ್ ನೇಮಕಾತಿ 2025 : ನೇಮಕಾತಿಯ ಹೈಲೈಟ್ಸ್
  • ಸಂಸ್ಥೆಯ ಹೆಸರು : ರಾಜ್ಯ ವಿದ್ಯುತ್ ನಿಗಮ (GSECL)
  • ಹುದ್ದೆಯ ಹೆಸರು : ಜೂನಿಯರ್ ಎಂಜಿನಿಯರ್
  • ಒಟ್ಟು ಹುದ್ದೆಗಳು : 135 ಹುದ್ದೆಗಳು
  • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
  • ಉದ್ಯೋಗ ಸ್ಥಳ : ಗುಜರಾತ್
ಹುದ್ದೆಗಳ ವಿವರಗಳು
  • ಜೂನಿಯರ್ ಎಂಜಿನಿಯರ್ – ಎಲೆಕ್ಟ್ರಿಕಲ್ : 55 ಹುದ್ದೆಗಳು
  • ಜೂನಿಯರ್ ಎಂಜಿನಿಯರ್ – ಮೆಕ್ಯಾನಿಕಲ್ : 55 ಹುದ್ದೆಗಳು
  • ಜೂನಿಯರ್ ಎಂಜಿನಿಯರ್ – ಉಪಕರಣ ಮತ್ತು ನಿಯಂತ್ರಣ : 20 ಹುದ್ದೆಗಳು
  • ಜೂನಿಯರ್ ಎಂಜಿನಿಯರ್ – ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ : 05 ಹುದ್ದೆಗೆಳು

ಅರ್ಹತಾ ಮಾನದಂಡಗಳ ವಿವರಗಳು

ಶೈಕ್ಷಣಿಕ ಅರ್ಹತೆ :

ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಸಂಬಂಧಿತ ವಿಭಾಗದಲ್ಲಿ ಬಿ.ಟೆಕ್ / ಬಿಇ ಪೂರ್ಣಗೊಳಿಸಿರಬೇಕು.

ವಯೋಮಿತಿ :

  • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು
  • ಅಧಿಸೂಚನೆಯ ನಿಯಮಗಳ ಪ್ರಕಾರ, ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಮಾಸಿಕ ವೇತನ

ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳಿಗೆ ಈ ಕೆಳಕಂಡಂತೆ ಮಾಸಿಕ ವೇತನವನ್ನು ನೀಡಲಾಗುತ್ತದೆ

  • ಮೊದಲ ವರ್ಷ : ರೂ. 48100/-
  • ಎರಡನೇ ವರ್ಷ : ರೂ.50700/-
ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
  • ಎಸ್‌ ಸಿ / ಎಸ್‌ ಟಿ / ಪಿಡಬ್ಲ್ಯೂಡಿ ಆಕಾಂಕ್ಷಿಗಳಿಗೆ : ರೂ.250.00 (ಜಿಎಸ್‌ಟಿ ಸೇರಿದಂತೆ)
  • ಸಾಮಾನ್ಯ ವರ್ಗ / ಇಡಬ್ಲ್ಯೂಎಸ್‌ ಆಕಾಂಕ್ಷಿಗಳಿಗೆ : ರೂ. 500.00 (ಜಿಎಸ್‌ಟಿ ಸೇರಿದಂತೆ)

ಪಾವತಿ ವಿಧಾನ : ಆಕಾಂಕ್ಷಿಗಳು ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ
  • ಶ್ರೇಣಿ ಪರೀಕ್ಷೆ ೧
  • ಶ್ರೇನೀ ಪರೀಕ್ಷೆ ೨
  • ದಾಖಲೆ ಪರಿಶೀಲನೆ
GSECL ಜೂನಿಯರ್ ಎಂಜಿನಿಯರ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
  • GSECL ಜೂನಿಯರ್ ಎಂಜಿನಿಯರ್ ನೇಮಕಾತಿ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
  • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
  • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
  • ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
  • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ
  • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್ಔಟ್‌ ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 04 ಜುಲೈ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24 ಜುಲೈ 2025
ಪ್ರಮುಖ ಲಿಂಕ್‌ಗಳು

ಅಧಿಸೂಚನೆ ಲಿಂಕ್‌ / ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

Comments

Leave a Reply

Your email address will not be published. Required fields are marked *