afp header code starts here --> afp header code starts here -->

BMRCL ನೇಮಕಾತಿ 2025 || ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಆನ್ಲೈನ್‌ / ಆಫ್ಲೈನ್ ಮೂಲಕ ಅರ್ಜಿ ಆಹಾನಿಸಲಾಗಿದೆ

BMRCL ನೇಮಕಾತಿ 2025: ನಮ್ಮ ಮೆಟ್ರೋ ಎಂದು ಕರೆಯಲ್ಪಡುವ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನಲ್ಲಿ ಗುತ್ತಿಗೆಯ ಆಧಾರದ ಮೇಲೆ 1 ಸಹಾಯಕ ವ್ಯವಸ್ಥಾಪಕ ಹುದ್ದೆಯ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಥವಾ ಬೆಂಗಳೂರು ಮೆಟ್ರೋ ದಲ್ಲಿ ಕೆಲಸವನ್ನು ಮಾಡಲು ಬಯಸುವ ಅಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ಮತ್ತು ಆಫ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರದಲ್ಲಿ ಬೆಂಗಳೂರಿನಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. BMRCL ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

BMRCL ನೇಮಕಾತಿ 2025

BMRCL ನೇಮಕಾತಿಯ ಪ್ರಮುಖ ವಿವರಗಳು

  • ಸಂಸ್ಥೆಯ ಹೆಸರು : ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL)
  • ಹುದ್ದೆಯ ಹೆಸರು : ಸಹಾಯಕ ವ್ಯವಸ್ಥಾಪಕ
  • ಒಟ್ಟು ಹುದ್ದೆಗಳು : 1 ಹುದ್ದೆ
  • ಅರ್ಜಿ ಸ್ವರೂಪ : ಆನ್ಲೈನ್‌ / ಆಫ್ಲೈನ್‌ ಮೂಲಕ
  • ಉದ್ಯೋಗ ಸ್ಥಳ : ಕರ್ನಾಟಕ – ಬೆಂಗಳೂರು

 ಹುದ್ದೆಗಳ ವಿವರಗಳು

  • ಸಹಾಯಕ ವ್ಯವಸ್ಥಾಪಕ : 1 ಹುದ್ದೆ

BMRCL ನೇಮಕಾತಿ 2025‌ : ಅರ್ಹತಾ ಮಾನದಂಡಗಳ ವಿವರಗಳು

ಶೈಕ್ಷಣಿಕ ಅರ್ಹತೆ :

BMRCL ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಗುರುತಿಸಲಾಗಿದ್ದು, ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು. ಕನಿಷ್ಠ 6 ವರ್ಷಗಳ ಅನುಭವ ಹೊಂದಿರಬೇಕು.

ಕರ್ನಾಟಕ ರಾಜ್ಯ ಸಾರಿಗೆ ನೇಮಕಾತಿ ಈ ನೇಮಕಾತಿಯನ್ನು ಓದಲು ಲಿಂಕ್ ಮೇಲೆ ಕ್ಲಿಕ್ ಮಾಡಿ

ವಯೋಮಿತಿ :

BMRCL ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಆಕಾಂಕ್ಷಿಗಳ ವಯೋಮಿತಿಯನ್ನು ತಿಳಿಸಲಾಗುವುದು.

  • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
  • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 60 ವರ್ಷಗಳು
  • ಅಧಿಸೂಚನೆ ನಿಯಮಗಳ ಪ್ರಕಾರ, ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
BMRCL Recruitment notification 2025

ಮಾಸಿಕ ವೇತನ

BMRCL ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ ರೂ. 50,000 – 62,500/- ಮಾಸಿಕ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ

ಯಾವುದೇ ಅರ್ಜಿ ಶುಲ್ಕವಿಲ್ಲ, ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ

ಆಯ್ಕೆ ಪ್ರಕ್ರಿಯೆ

  • ಶಾರ್ಟ್‌ ಲಿಸ್ಟ್
  • ಸಂದರ್ಶನ‌

BMRCL ನೇಮಕಾತಿ 2025‌ : ಅರ್ಜಿ ಸಲ್ಲಿಸುವ ವಿಧಾನ

ಆಕಾಂಕ್ಷಿಗಳು BMRCL ನೇಮಕಾತಿಗೆ ಅರ್ಜಿಯನ್ನು ಆನ್ಲೈನ್‌ ಮತ್ತು ಆಫ್ಲೈನ್‌ ಎರಡು ವಿಧಾನಗಳ ಮೂಲಕ ಸಲ್ಲಿಸಬಹುದು

  • BMRCL ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಬೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
  • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
  • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನ ಭರ್ತಿ ಮಾಡಿ. (ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಟ್‌ ಮಾಡಿ)
  • ಅರ್ಜಿ ಶುಲ್ಲವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ). ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ.
  • ಸಲ್ಲಿಸಿರುವ ಅರ್ಜಿಯ ಜೊತೆಗೆ ಸ್ವಯಂ ದೃಢೀಕರಣ ಪ್ರತಿಗಳ ದಾಖಲೆಗಳನ್ನು ಕೊನೆಯ ದಿನಾಂಕದೊಳಗಾಗಿ ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಕೆಳಗಿರುವ ವಿಳಾಸಕ್ಕೆ ಕಳುಹಿಸಿ

ಅರ್ಜಿ ಕಳುಹಿಸುವ ವಿಳಾಸ :

ಜನರಲ್ ಮ್ಯಾನೇಜರ್ (ಎಚ್‌ಆರ್) ಐ/ಸಿ, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, III ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆಎಚ್ ರಸ್ತೆ, ಶಾಂತಿನಗರ, ಬೆಂಗಳೂರು – 560027

BMRCL ನೇಮಕಾತಿ 2025‌ : ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 18 ನವೆಂಬರ್‌ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08 ಡಿಸೆಂಬರ್ 2025
  • ಸಹಿ ಮಾಡಿದ ಅರ್ಜಿಯ ಮುದ್ರಣವನ್ನು ಸ್ವೀಕರಿಸಲು ಕೊನೆಯ ದಿನಾಂಕ : 12 ಡಿಸೆಂಬರ್ 2025

ಪ್ರಮುಖ ಲಿಂಕ್‌ ಗಳು

ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
ಅಪ್ಲಿಕೇಶನ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ

Comments

Leave a Reply

Your email address will not be published. Required fields are marked *