BPNL ನೇಮಕಾತಿ 2025 : ಭಾರತೀಯ ಪಶುಪಾಲನ ನಿಗಮ ನಿಯಮಿತ (BPNL) ಭಾರತದ ವಿವಿಧ ರಾಜ್ಯಗಳಲ್ಲಿ ಒಟ್ಟು 12981 ಮುಖ್ಯ ಯೋಜನಾ ಅಧಿಕಾರಿ, ಜಿಲ್ಲಾ ವಿಸ್ತಾರ ಅಧಿಕಾರಿ, ತಾಲೂಕು ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಪಶು ಸೇವಕ ಹುದ್ದೆಗಳನ್ನು ಗ್ರಾಮೀಣ ಮಟ್ಟದಲ್ಲಿ ಪಶುಸೇವಾ ಕೇಂದ್ರಗಳ ಸ್ಥಾಪನೆಯ ಮೂಲಕ ಪಶುಪಾಲಕರಿಗೆ ಉನ್ನತ ಮಟ್ಟದ ಸೇವೆಗಳನ್ನು ನೀಡುವ ಉದ್ದೇಶದಿಂದ BPNL ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಜಾನುವಾರು ಸೇವೆಗಳು ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಸರ್ಕಾರಿ ಸಂಬಂಧಿತ ಉದ್ಯೋಗಗಳನ್ನು ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇದು ಸುವರ್ಣಾವಕಾಶ.
ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು BPNL ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
BPNL ನೇಮಕಾತಿ 2025 : ನೇಮಕಾತಿಯ ವಿವರಗಳು
- ಸಂಸ್ಥೆಯ ಹೆಸರು : ಭಾರತೀಯ ಪಶುಪಾಲನ ನಿಗಮ ನಿಯಮಿತ (BPNL)
- ಹುದ್ದೆಯ ಹೆಸರು : ಮುಖ್ಯ ಯೋಜನಾ ಅಧಿಕಾರಿ, ಜಿಲ್ಲಾ ವಿಸ್ತಾರಣಾ ಅಧಿಕಾರಿ, ತಾಲೂಕು ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಪಶು ಸೇವಕ
- ಒಟ್ಟು ಹುದ್ದೆಗಳು : 12981 ಹುದ್ದೆಗಳು (ಕರ್ನಾಟಕದಲ್ಲಿ 690 ಹುದ್ದೆಗಳು)
- ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ : ಭಾರತದ ವಿವಿಧ ರಾಜ್ಯಗಳು
BPNL ನೇಮಕಾತಿ 2025 : ಹುದ್ದೆಯ ವಿವರಗಳು
- ಮುಖ್ಯ ಯೋಜನಾ ಅಧಿಕಾರಿ : 44 ಹುದ್ದೆಗಳು
- ಜಿಲ್ಲಾ ವಿಸ್ತಾರಣಾ ಅಧಿಕಾರಿ : 440 ಹುದ್ದೆಗಳು
- ತಾಲೂಕು ಅಭಿವೃದ್ಧಿ ಅಧಿಕಾರಿ : 2,121 ಹುದ್ದೆಗಳು
- ಪಂಚಾಯತ್ ಪಶು ಸೇವಕ : 10,376 ಹುದ್ದೆಗಳು
BPNL ನೇಮಕಾತಿ 2025 : ಅರ್ಹತೆಗಳು
ಶೈಕ್ಷಣಿಕ ಅರ್ಹತೆ :
- ಮುಖ್ಯ ಯೋಜನಾ ಅಧಿಕಾರಿ : ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ. (CA / CS / MBA / ME / M.Tech)
- ಜಿಲ್ಲಾ ವಿಸ್ತಾರಣಾ ಅಧಿಕಾರಿ : ಯಾವುದೇ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು
- ತಾಲೂಕು ಅಭಿವೃದ್ಧಿ ಅಧಿಕಾರಿ : 12 ನೇ ತರಗತಿ ಉತ್ತೀರ್ಣರಾಗಿರಬೇಕು
- ಪಂಚಾಯತ್ ಪಶು ಸೇವಕ :10 ನೇ ತರಗತಿ ಉತ್ತೀರ್ಣ
ವಯೋಮಿತಿ :
- ಮುಖ್ಯ ಯೋಜನಾ ಅಧಿಕಾರಿ : 40 – 65 ವರ್ಷ
- ಜಿಲ್ಲಾ ವಿಸ್ತಾರಣಾ ಅಧಿಕಾರಿ : 25 – 40 ವರ್ಷ
- ತಾಲೂಕು ಅಭಿವೃದ್ಧಿ ಅಧಿಕಾರಿ : 21 – 40 ವರ್ಷ
- ಪಂಚಾಯತ್ ಪಶು ಸೇವಕ : 18 – 40 ವರ್ಷ
ಆಕಾಂಕ್ಷಿಗಳ ಮಾಸಿಕ ವೇತನ :
BPNL ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
- ಮುಖ್ಯ ಯೋಜನಾ ಅಧಿಕಾರಿ : 75,000/-
- ಜಿಲ್ಲಾ ವಿಸ್ತರಣಾ ಅಧಿಕಾರಿ : 50,000/-
- ತಾಲೂಕು ಅಭಿವೃದ್ಧಿ ಅಧಿಕಾರಿ : 40,000/-
- ಪಂಚಾಯತ್ ಪಶು ಸೇವಕ : 28,500/-
ಅರ್ಜಿ ಶುಲ್ಕ
- ಮುಖ್ಯ ಯೋಜನಾ ಅಧಿಕಾರಿ ಹುದ್ದೆಗೆ – ರೂ.1534
- ಜಿಲ್ಲಾ ವಿಸ್ತಾರಣಾ ಅಧಿಕಾರಿ ಹುದ್ದೆಗೆ – ರೂ.1180
- ತಾಲೂಕು ಅಭಿವೃದ್ಧಿ ಅಧಿಕಾರಿ ಹುದ್ದೆಗೆ – ರೂ.944
- ಪಂಚಾಯತ್ ಪಶು ಸೇವಕ ಹುದ್ದೆಗೆ – ರೂ.708
BPNL ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
- ಆನ್‌ಲೈನ್ ಪರೀಕ್ಷೆ (ಅರ್ಹತೆಗಾಗಿ 50% ಅಂಕಗಳು)
- ಸಂದರ್ಶನ
BPNL ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
BPNL ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಆಕಾಂಕ್ಷಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು
- BPNL ನೇಮಕಾತಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಲಿಂಕ್ ಮೇಲೆ ಕ್ಲಿಕ್ ಮಾಡಿ
- ಮಾನ್ಯ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನೋಂದಾಯಿಸಿ.
- ಅಗತ್ಯವಿರುವ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ (ನಿಮ್ಮ ಛಾಯಾಚಿತ್ರ, ಸಹಿ, ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ)
- ಅರ್ಜಿ ಶುಲ್ಕವನ್ನು ಪಾವತಿಸಿ. ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25 ಏಪ್ರಿಲ್ 2025
- ಅರ್ಜಿ ಸಲ್ಲಿಸಲು ಕೆನಯ ದಿನಾಂಕ : 11 ಮೇ 2025
- ಪರೀಕ್ಷೆ ದಿನಾಂಕ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
BPNL ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
ಅಧಿಸೂಚನೆ ಲಿಂಕ್ : ಮೇಲೆ ಕ್ಲಿಕ್ ಮಾಡಿ
ಅಪ್ಲಿಕೇಶನ್ ಲಿಂಕ್ : ಮೇಲೆ ಕ್ಲಿಕ್ ಮಾಡಿ