IPPB ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಎಕ್ಸಿಕ್ಯೂಟಿವ್ ನೇಮಕಾತಿ 2025 : ಗುತ್ತಿಗೆ ಆಧಾರದ ಮೇಲೆ ಒಟ್ಟು 51 ಎಕ್ಸಿಕ್ಯೂಟಿವ್ ಹುದ್ದೆಯನ್ನು ವಿವಿಧ ಶಾಖೆಗಳಲ್ಲಿ ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಆಕಾಂಕ್ಷಿಗಳು ಯಾವುದೇ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು .IPPB ನೇಮಕಾತಿ 2025 ಕ್ಕೆ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳು ಪದವಿಯಲ್ಲಿ ಪಡೆದ ಅಂಕಗಳ ಶೇಕಡಾವಾರು ಮತ್ತು ಪರೀಕ್ಷೆ/ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ . ಮತ್ತು ಶಾರ್ಟ್ಲಿಸ್ಟ್ ಮಾಡಿದ ಆಕಾಂಕ್ಷಿಗಳನ್ನು ಭಾರತದಲ್ಲಿ ಎಲ್ಲಿಯಾದರೂ ನೇಮಿಸಲಾಗುತ್ತದೆ. ಅರ್ಜಿ ಸಲ್ಲಿಸುವ ರಾಜ್ಯದ ವಾಸಸ್ಥಳ ಹೊಂದಿರುವ ಆಕಾಂಕ್ಷಿಗಳಿಗೆ ಆದ್ಯತೆ ನೀಡಲಾಗುವುದು.
IPPB ಎಕ್ಸಿಕ್ಯೂಟಿವ್ ನೇಮಕಾತಿ 2025 ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ರಿಂದ 35 ವರ್ಷ ವಯಸ್ಸಿನವರಾಗಿರಬೇಕು . IPPB ನೇಮಕಾತಿಯೂ ವಿವಿಧ ರಾಜ್ಯಗಳಲ್ಲಿ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿದಾರರು ಆರಂಭದಲ್ಲಿ 01 ವರ್ಷದ ಅವಧಿಗೆ ನೇಮಕಗೊಳ್ಳುತ್ತಾರೆ ಮತ್ತು ಇದನ್ನು ವರ್ಷದಿಂದ ವರ್ಷಕ್ಕೆ 02 ವರ್ಷಗಳವರೆಗೆ ವಿಸ್ತರಿಸಲು ಪರಿಶೀಲಿಸಬಹುದು, ಆಕಾಂಕ್ಷಿಗಳು ವರ್ಗಗಳ ಮೀಸಲಾತಿಯ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆಸಕ್ತಿ ಇರುವ ಆಕಾಂಕ್ಷಿಗಳು IPPB ಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21.03.2025.
IPPB ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಎಕ್ಸಿಕ್ಯೂಟಿವ್ ನೇಮಕಾತಿಗೆ ಅಗತ್ಯವಿರುವ ಅರ್ಹತಾ ಮಾನದಂಡಗಳು, ಮಾಸಿಕ ವೇತನ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿಗಳನ್ನು ಒಳಗೊಂಡಂತೆ ಪ್ರಮುಖ ವಿವರಗಳನ್ನು ಈ ಲೇಖನದಲ್ಲಿ ಪರಿಶೀಲಿಸಬಹುದು.
IPPB ಎಕ್ಸಿಕ್ಯೂಟಿವ್ ನೇಮಕಾತಿ 2025 : ನೇಮಕಾತಿಯ ವಿವರ
- ಸಂಸ್ಥೆಯ ಹೆಸರು : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ( IPPB )
- ಹುದ್ದೆಯ ಹೆಸರು : ಎಕ್ಸಿಕ್ಯೂಟಿವ್ ( ಕಾರ್ಯನಿರ್ವಹಕ )
- ಒಟ್ಟು ಹುದ್ದೆಗಳು : 51 ಹುದ್ದೆಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01-ಮಾರ್ಚ್-2025
- ಉದ್ಯೋಗ ಸ್ಥಳ : ಭಾರತದಾದ್ಯಂತ
- ಅರ್ಜಿಯ ಸ್ವರೂಪ : ಆನ್ಲೈನ್
IPPB ಎಕ್ಸಿಕ್ಯೂಟಿವ್ ನೇಮಕಾತಿ 2025 : ಹುದ್ದೆಯ ವಿವರ
ಅಂಡಮಾನ್ ನಿಕೋಬಾರ್ ದ್ವೀಪಗಳು, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛಂಡೀಗಢ, ಛತ್ತೀಸ್ಘಡ, ದಾದ್ರ ಮತ್ತು ನಾಗರಹಾವೇಲಿ, ದೆಹಲಿ, ಗೋವಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕೇರಳ, ಪಂಜಾಬ್, ತಮಿಳುನಾಡು, ಹರಿಯಾಣ, ಇತರೆ ಕೆಲವು ರಾಜ್ಯಗಳಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಎಕ್ಸಿಕ್ಯೂಟಿವ್ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ವರ್ಗಗಳ ಆಧಾರದ ಮೇಲೆ IPPB ಎಕ್ಸಿಕ್ಯೂಟಿವ್ ಹುದ್ದೆಗಳನ್ನು ವಿಂಗಡಿಸಲಾಗಿದೆ.
- ಜನರಲ್ : 13
- ಇಡಬ್ಲ್ಯೂಎಸ್ : 03
- ಒಬಿಸಿ : 19
- ಎಸ್ಸಿ : 12
- ಎಸ್ಟಿ : 04
IPPB ಎಕ್ಸಿಕ್ಯೂಟಿವ್ ನೇಮಕಾತಿ 2025 : ಅರ್ಹತೆಯ ಮಾನದಂಡಗಳು
ವಿದ್ಯಾರ್ಹತೆ :
IPPB ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಎಕ್ಸಿಕ್ಯೂಟಿವ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಮತ್ತು ಸ್ಥಳೀಯ ಭಾಷೆಯ ಜ್ಞಾನವನ್ನು ಹೊಂದಿರಬೇಕು.
ವಯೋಮಿತಿ :
ಅರ್ಜಿ ಸಲ್ಲಿಸುವ ಆಕಾಂಕ್ಷಿಗಳ ಕನಿಷ್ಠ 21 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಿನವರಾಗಿರಬೇಕು.
ವಯೋಮಿತಿ ಸಡಿಲಿಕೆ :
- ಒಬಿಸಿ ಆಕಾಂಕ್ಷಿಗಳು : 3 ವರ್ಷ
- ಎಸ್ಸಿ/ಎಸ್ಟಿ ಆಕಾಂಕ್ಷಿಗಳು : 5 ವರ್ಷ
- ಅಂಗವಿಕಲ ಆಕಾಂಕ್ಷಿಗಳು : 10 ವರ್ಷ
ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುವುದು
IPPB ಎಕ್ಸಿಕ್ಯೂಟಿವ್ ನೇಮಕಾತಿ 2025 : ಮಾಸಿಕ ವೇತನ
IPPB ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಬ್ಯಾಂಕ್ ತಿಂಗಳಿಗೆ ರೂ. 30,000 /- ಒಟ್ಟು ಮೊತ್ತವನ್ನು ಪಾವತಿಸುತ್ತದೆ .ಕಾರ್ಯಕ್ಷಮತೆಯ ಆಧಾರದ ಮೇಲೆ ವಾರ್ಷಿಕ ಹೆಚ್ಚಳ ಮತ್ತು ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.
IPPB ಎಕ್ಸಿಕ್ಯೂಟಿವ್ ನೇಮಕಾತಿ 2025 : ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
IPPB ನೇಮಕಾತಿ 2025 ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳು ವರ್ಗದ ಮೀಸಲಾತಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ :
- ಎಸ್ ಸಿ / ಎಸ್ ಟಿ / ಪಿಡಬ್ಲ್ಯೂಡಿ ಆಕಾಂಕ್ಷಿಗಳಿಗೆ : ₹150/-
- ಇತರೆ ಎಲ್ಲಾ ಆಕಾಂಕ್ಷಿಗಳಿಗೆ : ₹750/-
ಪಾವತಿ ವಿಧಾನ : ಪರೀಕ್ಷಾ ಶುಲ್ಕವನ್ನು ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮೋಡ್ನಲ್ಲಿ ಪಾವತಿಸಬಹುದು.
IPPB ಎಕ್ಸಿಕ್ಯೂಟಿವ್ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
IPPB ನೇಮಕಾತಿ 2025 ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳನ್ನು ಕೆಳಗಿನ ಹಂತಗಳ ಮುಖಾಂತರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಒಂದೇ ಅಂಕಗಳನ್ನು ಪಡೆದಿದ್ದರೆ, ಅಭ್ಯರ್ಥಿಗಳ ಜನ್ಮ ದಿನಾಂಕದ ಪ್ರಕಾರ ಮೆರಿಟ್ ಕ್ರಮವನ್ನು ನಿರ್ಧರಿಸಲಾಗುತ್ತದೆ.
- ಮೆರಿಟ್ ಲಿಸ್ಟ್ : ಪದವಿಯಲ್ಲಿ ಪಡೆದಿರುವ ಅಂಕಗಳ ಪ್ರಕಾರ ಮೆರಿಟ್ ಪಟ್ಟಿಯನ್ನು ಬಿಡುಗಡೆಮಾಡಲಾಗುತ್ತದೆ.
- ಲಿಖಿತ ಪರೀಕ್ಷೆ
- ಸಂದರ್ಶನ
- ದಾಖಲಾತಿ ಪರಿಶೀಲನೆ
IPPB ಎಕ್ಸಿಕ್ಯೂಟಿವ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
IPPB ನೇಮಕಾತಿ 2025 ಕ್ಕೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಬಹುದು.
- ಅಧಿಕೃತ ವೆಬ್ಸೈಟ್ ippbonline.com ಗೆ ಭೇಟಿ ನೀಡಿ
- IPPB Recruitment 2025 ಅಧಿಸೂಚನೆ ಮತ್ತು ಆನ್ಲೈನ್ ಅರ್ಜಿ ಲಿಂಕ್ ಅನ್ನು ಕ್ಲಿಕ್ ಮಾಡಿ
- ಅರ್ಜಿ ನಮೂನೆಯನ್ನು ಪೂರ್ಣವಾಗಿ ಭರ್ತಿ ಮಾಡಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು( ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಅಪ್ಲೋಡ್ ಮಾಡಿ
- ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ)
- ಲಭ್ಯವಿರುವ ಪಾವತಿ ಆಯ್ಕೆಗಳ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ
- ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ಪ್ರತಿಯನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳಿ .
IPPB ಎಕ್ಸಿಕ್ಯೂಟಿವ್ ನೇಮಕಾತಿ 2025 : ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01-ಮಾರ್ಚ್-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-ಮಾರ್ಚ್-2025
IPPB ಎಕ್ಸಿಕ್ಯೂಟಿವ್ ನೇಮಕಾತಿ 2025 : ಪ್ರಮುಖ ಲಿಂಕ್ಗಳು
| ಅಧಿಸೂಚನೆ ಲಿಂಕ್ | ಮೇಲೆ ಕ್ಲಿಕ್ ಮಾಡಿ |
| ಅಪ್ಲಿಕೇಶನ್ ಲಿಂಕ್ | ಮೇಲೆ ಕ್ಲಿಕ್ ಮಾಡಿ |
| ವಾಟ್ಸಾಪ್ ಲಿಂಕ್ | ಮೇಲೆ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಲಿಂಕ್ | ಮೇಲೆ ಕ್ಲಿಕ್ ಮಾಡಿ |
Leave a Reply