afp header code starts here --> afp header code starts here -->

NPCIL ವೈಜ್ಞಾನಿಕ ಸಹಾಯಕ, ಹಾಗೂ ವಿವಿಧ ಹುದ್ದೆಗಳ ನೇಮಕಾತಿ 2025 || ಒಟ್ಟು 391 ಹುದ್ದೆಗಳಿಗೆ ಅರ್ಜಿ ಆಹ್ವಾನ

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) 2025 : ಭಾರತೀಯ ಪರಮಾಣು ವಿದ್ಯುತ್ ನಿಗಮ (NPCIL) ನೇಮಕಾತಿಯೂ, ವೈಜ್ಞಾನಿಕ ಸಹಾಯಕ, ತಂತ್ರಜ್ಞ, ಸ್ಟೈಪೆಂಡಿಯರಿ ಟ್ರೈನಿ, ಪ್ಯಾರಾಮೆಡಿಕಲ್ ಮತ್ತು ಇತರ 391 ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯಲ್ಲಿ ಆಯ್ಕೆಯಾದ ಆಕಾಂಕ್ಷಿಗಳನ್ನು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಸ್ಥಳದಲ್ಲಿ ನೇಮಿಸಲಾಗುವುದು. ಉದ್ಯೋಗ ಹುಡುಕುತ್ತಿರುವ, ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಆಕಾಂಕ್ಷಿಗಳಿಗೆ ಇದು ಒಂದು ದೊಡ್ಡ ಅವಕಾಶ.

ಸುಸ್ಥಾಪಿತ ಮತ್ತು ಪ್ರಸಿದ್ಧ ಸಂಸ್ಥೆಯಾಗಿ, NPCIL ನೊಂದಿಗೆ ಕೆಲಸ ಮಾಡುವುದರಿಂದ ಪರಮಾಣು ವಿದ್ಯುತ್ ವಲಯದಲ್ಲಿ ಹಲವಾರು ವೃತ್ತಿ ಪ್ರಗತಿ ಅವಕಾಶಗಳಿಗೆ ಬಾಗಿಲು ತೆರೆಯಬಹುದು. ಉನ್ನತ ಶಿಕ್ಷಣ ಪಡೆದಿರುವ ಆಕಾಂಕ್ಷಿಗಳು ಭಾರತೀಯ ಪರಮಾಣು ವಿದ್ಯುತ್ ನಿಗಮ (NPCIL) ನೇಮಕಾತಿಗೆ ಈಗಲೇ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಇಂದಿನಿಂದಲೇ ಆರಂಭವಾಗುವುದರಿಂದ ಕೊನೆಯ ದಿನಾಂಕದೊಳಗೆ ಅಕಾಂಕ್ಷಿಗಳು NPCIL ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ರಾಜ್ಯದಲ್ಲಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಂಶಗಳಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ ಕೇಂದ್ರ ಸರ್ಕಾರದಡಿ ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡಲು ಕನಸು ಕಾಣುತ್ತಿರುವ ಆಕಾಂಕ್ಷೆಗಳಿಗೆ ಕನಸನ್ನು ನನಸು ಮಾಡಿಕೊಳ್ಳಲು ಇಲ್ಲಿದೆ ಒಂದು ಸುವರ್ಣ ಅವಕಾಶ ನಾನು ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಸೇರಬೇಕು, ಸುಲಭ ಪರೀಕ್ಷೆ ವಿಧಾನ ಇರಬೇಕು, ಆಕರ್ಷಕ ಸಂಬಳದ ಉದ್ಯೋಗಗಳು ಪಡೆಯ ಬೇಕು ಎಂದು ಕೊಂಡವರಿಗೆ ಇದೇ ನೋಡಿ ಭರ್ಜರಿ ಜಾಬ್‌ ಆಫರ್‌. ಈ ಹುದ್ದೆಗಳಿಗೆ ಅರ್ಜಿ ಸ್ವೀಕಾರವನ್ನು ಸಹ 2025 ರ ಮಾರ್ಚ್ ತಿಂಗಳಲ್ಲಿ ಆರಂಭಿಸಲಿದ್ದು, ಆಸಕ್ತರು ಈಗಿನಿಂದಲೇ ಅರ್ಜಿ ಸಲ್ಲಿಸಲು ಹಾಗೂ ಪರೀಕ್ಷೆ ವಿಧಾನಕ್ಕೆ ಸಿದ್ಧರಾಗಿರಿ. ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ನೇಮಕಾತಿ 2025 ರ ಒಟ್ಟು ಹುದ್ದೆಗಳು, ಪ್ರಮುಖ ದಿನಾಂಕಗಳು, ಅರ್ಜಿ ಶುಲ್ಕಗಳು, ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ವೇತನ ಶ್ರೇಣಿ, ಹಾಗೂ ಇನ್ನಿತರ ವಿಷಯಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

NPCIL ನೇಮಕಾತಿ 2025 : ನೇಮಕಾತಿಯ ವಿವರ
  • ಸಂಸ್ಥೆಯ ಹೆಸರು : ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL)
  • ಹುದ್ದೆಯ ಹೆಸರು : ಸ್ಟೈಪೆಂಡಿಯರಿ ಟ್ರೈನಿ, ವೈಜ್ಞಾನಿಕ ಸಹಾಯಕ, ಸಹಾಯಕ ಮತ್ತು ಇತರರು
  • ಒಟ್ಟು ಹುದ್ದೆಗಳು : 391 ಹುದ್ದೆಗಳು
  • ಅರ್ಜಿ ಸ್ವರೂಪ : ಆನ್‌ ಲೈನ್‌ ಮೂಲಕ
  • ಉದ್ಯೋಗ ಸ್ಥಳ : ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಸ್ಥಳ
NPCIL ನೇಮಕಾತಿ 2025 : ಹುದ್ದೆಯ ವಿವರ
  • ವೈಜ್ಞಾನಿಕ ಸಹಾಯಕ – ಬಿ : 45
  • ಸ್ಟೈಪೆಂಡಿಯರಿ ಟ್ರೈನಿ/ವೈಜ್ಞಾನಿಕ ಸಹಾಯಕ (ST/SA) : 82
  • ಸಹಾಯಕ ದರ್ಜೆ – 1 (ಮಾನವ ಸಂಪನ್ಮೂಲ) : 22
  • ಸ್ಟೈಪೆಂಡಿಯರಿ ಟ್ರೈನಿ/ತಂತ್ರಜ್ಞ (ಎಸ್‌ಟಿ/ತಂತ್ರಜ್ಞ) : 226 (226)
  • ಸಹಾಯಕ ದರ್ಜೆ – 1 (ಹಣಕಾಸು ಮತ್ತು ಲೆಕ್ಕಪತ್ರಗಳು) : 4
  • ಸಹಾಯಕ ದರ್ಜೆ – 1 (ಒಪ್ಪಂದಗಳು ಮತ್ತು ಸಾಮಾಗ್ರಿ ನಿರ್ವಹಣೆ) : 10
  • ನರ್ಸ್ – ಎ : 1
  • ತಂತ್ರಜ್ಞ/ಸಿ (ಎಕ್ಸ್-ರೇ ತಂತ್ರಜ್ಞ) : 1
NPCIL ನೇಮಕಾತಿ 2025 : ಅರ್ಹತಾ ಮಾನದಂಡಗಳು

ವಿದ್ಯಾರ್ಹತೆ :

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) 2025 ಕ್ಕೆ ಹುದ್ದೆಗಳ ಆಧಾರದ ಮೇಲೆ ವಿದ್ಯಾರ್ಹತೆಯನ್ನು ಸೂಚಿಸಲಾಗುತ್ತದೆ.

  • ವೈಜ್ಞಾನಿಕ ಸಹಾಯಕ – ಬಿ :  ಶೇಕಡಾ 60 ಅಂಕಗಳೊಂದಿಗೆ ಸಂಬಂಧಿತ ವಿಭಾಗದಲ್ಲಿ ಎಂಜಿನಿಯರಿಂಗ್ ಡಿಪ್ಲೊಮಾ (ಸಿವಿಲ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್/ಎಲೆಕ್ಟ್ರಾನಿಕ್ಸ್/ಇನ್ಸ್ಟ್ರುಮೆಂಟೇಶನ್) ಅಥವಾ ಶೇಕಡಾ 60 ಅಂಕಗಳೊಂದಿಗೆ ಬಿಎಸ್ಸಿ (ಕಂಪ್ಯೂಟರ್ ಸೈನ್ಸ್)
  • ಸ್ಟೈಪೆಂಡಿಯರಿ ಟ್ರೈನಿ/ಸೈಂಟಿಫಿಕ್ ಅಸಿಸ್ಟೆಂಟ್ (ಎಸ್‌ಟಿ/ಎಸ್‌ಎ) : ಕನಿಷ್ಠ ಶೇಕಡಾ 60 ಅಂಕಗಳೊಂದಿಗೆ ಎಂಜಿನಿಯರಿಂಗ್ ಡಿಪ್ಲೊಮಾ (ಎಲೆಕ್ಟ್ರಿಕಲ್/ಮೆಕ್ಯಾನಿಕಲ್/ಇನ್ಸ್ಟ್ರುಮೆಂಟೇಶನ್/ಎಲೆಕ್ಟ್ರಾನಿಕ್ಸ್) ಅಥವಾ ಶೇಕಡಾ 60 ಅಂಕಗಳೊಂದಿಗೆ ಬಿಎಸ್ಸಿ (ಭೌತಶಾಸ್ತ್ರ/ರಸಾಯನಶಾಸ್ತ್ರ).
  • ಸ್ಟೈಪೆಂಡಿಯರಿ ಟ್ರೈನಿ/ಟೆಕ್ನೀಷಿಯನ್ (ಎಸ್‌ಟಿ/ಟೆಕ್ನೀಷಿಯನ್) :  ವಿಜ್ಞಾನ ಮತ್ತು ಗಣಿತದಲ್ಲಿ 50% ಅಂಕಗಳೊಂದಿಗೆ ಎಸ್‌ಎಸ್‌ಸಿ + ಸಂಬಂಧಿತ ವ್ಯಾಪಾರದಲ್ಲಿ 2 ವರ್ಷಗಳ ಐಟಿಐ ಪ್ರಮಾಣಪತ್ರ ಹೊಂದಿರಬೇಕು.
  • ಸಹಾಯಕ ದರ್ಜೆ – 1 ( ಹಣಕಾಸು , ಲೆಕ್ಕಪತ್ರಗಳು , ಒಪ್ಪಂದಗಳು ಮತ್ತು ಸಾಮಾಗ್ರಿ ನಿರ್ವಹಣೆ ):  50% ಅಂಕಗಳೊಂದಿಗೆ ಪದವಿಯಲ್ಲಿ ಉತ್ತಿರ್ಣ.
  • ನರ್ಸ್ – ಎ:  ಎಚ್‌ಎಸ್‌ಸಿ + ನರ್ಸಿಂಗ್ ಮತ್ತು ಮಿಡ್‌ವೈಫರಿಯಲ್ಲಿ ಡಿಪ್ಲೊಮಾ ಅಥವಾ ಬಿಎಸ್ಸಿ ನರ್ಸಿಂಗ್.‌
  • ತಂತ್ರಜ್ಞ/ಸಿ (ಎಕ್ಸ್-ರೇ ತಂತ್ರಜ್ಞ) :  ವಿಜ್ಞಾನದಲ್ಲಿ ಎಚ್‌ಎಸ್‌ಸಿ , 1 ವರ್ಷದ ವೈದ್ಯಕೀಯ ರೇಡಿಯಾಗ್ರಫಿ ಪ್ರಮಾಣಪತ್ರ ಹಾಗೂ 2 ವರ್ಷಗಳ ಅನುಭವ.

ವಯೋಮಿತಿ :

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) 2025 ಕ್ಕೆ ಹುದ್ದೆಗಳಿಗೆ ಅನುಗಣವಾಗಿ ವಯೋಮಿತಿ (01.04.2025 ರಂತೆ) ಈ ಕೆಳಕಂಡಂತೆ ಇರುತ್ತದೆ.

  • ಕನಿಷ್ಠ ವಯಸ್ಸ : 18 ವರ್ಷಗಳು
  • ಗರಿಷ್ಠ ವಯಸ್ಸ : 30 ವರ್ಷಗಳು

ವಯಸ್ಸಿನ ಸಡಿಲಿಕೆ :

ವರ್ಗಗಳ ಆಧಾರದ ಮೇಲೆ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇರುತ್ತದೆ.

  • ಎಸ್‌ಸಿ/ಎಸ್‌ಟಿ : 5 ವರ್ಷಗಳು
  • ಒಬಿಸಿ : 3 ವರ್ಷಗಳು
  • ಪಿಡಬ್ಲ್ಯೂಬಿಡಿ : 10-15 ವರ್ಷಗಳು
  • ಮಾಜಿ ಸೈನಿಕರು : 5 ವರ್ಷಗಳು
NPCIL ನೇಮಕಾತಿ 2025 : ಮಾಸಿಕ ವೇತನ

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) 2025 ಕ್ಕೆ ಹುದ್ದೆಗಳಿಗೆ ಅನುಗಣವಾಗಿ ಮಾಸಿಕ ವೇತನವನ್ನು ನೀಡಲಾಗುತ್ತದೆ.

  • ವೈಜ್ಞಾನಿಕ ಸಹಾಯಕ – ₹54,162
  • ಸ್ಟೈಪೆಂಡಿಯರಿ ಟ್ರೈನಿ/ವೈಜ್ಞಾನಿಕ ಸಹಾಯಕ (ST/SA) :  ₹54,162
  • ಸಹಾಯಕ ದರ್ಜೆ – 1 (ಮಾನವ ಸಂಪನ್ಮೂಲ) : ₹39,015
  • ಸ್ಟೈಪೆಂಡಿಯರಿ ಟ್ರೈನಿ/ತಂತ್ರಜ್ಞ (ಎಸ್‌ಟಿ/ತಂತ್ರಜ್ಞ) : ₹33,201
  • ಸಹಾಯಕ ದರ್ಜೆ – 1 (ಹಣಕಾಸು ಮತ್ತು ಲೆಕ್ಕಪತ್ರಗಳು) : ₹39,015
  • ಸಹಾಯಕ ದರ್ಜೆ – 1 (ಒಪ್ಪಂದಗಳು ಮತ್ತು ಸಾಮಾಗ್ರಿ ನಿರ್ವಹಣೆ) : ₹39,015
  • ನರ್ಸ್ – ಎ : ₹68,697
  • ತಂತ್ರಜ್ಞ/ಸಿ (ಎಕ್ಸ್-ರೇ ತಂತ್ರಜ್ಞ) : ₹39,015

NPCIL ನೇಮಕಾತಿ 2025 : ಅರ್ಜಿ ಶುಲ್ಕ
  • ವೈಜ್ಞಾನಿಕ ಸಹಾಯಕ – ಎಸ್‌ಟಿ/ಎಸ್‌ಎ, ನರ್ಸ್‌ಗೆ ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ – ಎ : 
    ರೂ 150/-
  • ಎಸ್‌ ಸಿ /ಎಸ್‌ ಟಿ /ಪಿಡಬ್ಲ್ಯೂಡಿ /ಮಹಿಳೆಯರು/ಮಾಜಿ ಸೈನಿಕರು : ವಿನಾಯಿತಿ
NPCIL ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) 2025 ರ ಹುದ್ದೆಗಳಿಗೆ ಅನುಗಣವಾಗಿ ಕೆಳಗಿನ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತದೆ.

  • ಆನ್‌ಲೈನ್ ಪರೀಕ್ಷೆ
  • ವೈಯಕ್ತಿಕ ಸಂದರ್ಶನ/ಕೌಶಲ್ಯ ಪರೀಕ್ಷೆ
  • ದಾಖಲೆ ಪರಿಶೀಲನೆ
NPCIL ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
  • NPCIL ನೇಮಕಾತಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:  www.npcil.nic.in . ಲಿಂಕ್‌ ಮೇಲೆ ಕ್ಲಿಕ್ ಮಾಡಿ .
  • ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿ. (ಅರ್ಜಿದಾರರ ಇ-ಮೇಲ್ ಐಡಿಯನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ಹಾಕಬೇಕು )
  • ಅಗತ್ಯವಿರುವ ವೈಯಕ್ತಿಕ, ಶೈಕ್ಷಣಿಕ ದಾಖಲೆಗಳು, ಛಾಯಾಚಿತ್ರ, ಸಹಿ, ಪ್ರಮಾಣಪತ್ರಗಳು, ಇತ್ಯಾದಿಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಆನ್‌ಲೈನ್ ಪಾವತಿ ಗೇಟ್‌ವೇ ಮೂಲಕ ಪಾವತಿಸಿ (ಅನ್ವಯಿಸಿದರೆ).
  • ಅರ್ಜಿದಾರು ಆನ್‌ಲೈನ್ ನೋಂದಣಿ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
  • ಭವಿಷ್ಯದ ಉಲ್ಲೇಖಕ್ಕಾಗಿ ಫಾರ್ಮ್ ಅನ್ನು ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
NPCIL ನೇಮಕಾತಿ 2025 : ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 12 ಮಾರ್ಚ್‌ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01 ಏಪ್ರಿಲ್‌ 2025
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ : 01 ಏಪ್ರಿಲ್‌ 2025
  • ಪರೀಕ್ಷಾ ದಿನಾಂಕ : ಮುಂದಿನ ದಿನಗಳಲ್ಲಿ ಘೋಷಿಸಲಾಗುವುದು.
NPCIL ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ

Comments

Leave a Reply

Your email address will not be published. Required fields are marked *