SBI PO ನೇಮಕಾತಿ 2025 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಂಸ್ಥೆಯೂ ಒಟ್ಟು 541 ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಬ್ಯಾಂಕಿಂಗ್ ವಲಯದಲ್ಲಿ ಅತ್ಯಂತ ಬೇಡಿಕೆಯ ಪಾತ್ರಗಳಲ್ಲಿ ಒಂದಾಗಿರುವ ಈ ಅವಕಾಶವು ದೇಶಾದ್ಯಂತ ಲಕ್ಷಾಂತರ ಆಕಾಂಕ್ಷಿಗಳನ್ನು ಆಕರ್ಷಿಸುತ್ತದೆ. 2025 ರಲ್ಲಿ ಸ್ಪರ್ಧಾತ್ಮಕ ಬ್ಯಾಂಕ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಇದು ಒಂದು ಸುವರ್ಣಾವಕಾಶವಾಗಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
SBI PO ನೇಮಕಾತಿ 2025 : ನೇಮಕಾತಿಯ ಹೈಲೈಟ್ಸ್
- ಸಂಸ್ಥೆಯ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
- ಹುದ್ದೆಯ ಹೆಸರು : ಪ್ರೊಬೇಷನರಿ ಆಫೀಸರ್ (PO)
- ಒಟ್ಟು ಹುದ್ದೆಗಳು : 541 ಹುದ್ದೆಗಳು
- ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ : ಭಾರತದಾದ್ಯಂತ
ಹುದ್ದೆಯ ವಿವರಗಳು
- ನಿಯಮಿತ ಹುದ್ದೆಗಳು : 500 ಹುದ್ದೆಗಳು
- ಬ್ಯಾಕ್‌ಲಾಗ್ ಹುದ್ದೆಗಳು : 41 ಹುದ್ದೆಗಳು
ಅರ್ಹತಾ ಮಾನದಂಡಗಳು
ವಿದ್ಯಾರ್ಹತೆ :
- ಆಕಾಂಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆಯನ್ನು ಪಡೆದಿರಬೇಕು.
- ವೈದ್ಯಕೀಯ, ಎಂಜಿನಿಯರಿಂಗ್, ಚಾರ್ಟರ್ಡ್ ಅಕೌಂಟೆಂಟ್, ಕಾಸ್ಟ್ ಅಕೌಂಟೆಂಟ್ ಮುಂತಾದ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಸಹ ಅರ್ಹರಾಗಿರುತ್ತಾರೆ
ವಯೋಮಿತಿ :
- ಆಕಾಂಕ್ಷಿಗಳ ಕನಿಷ್ಠ ವಯಸ್ಸು : 21 ವರ್ಷಗಳು
- ಆಕಾಂಕ್ಷಿಗಳ ಗರಿಷ್ಠ ವಯಸ್ಸು : 30 ವರ್ಷಗಳು
- ಅಧಿಸೂಚನೆಯ ನಿಯಮಗಳ ಪ್ರಕಾರ, ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಮಾಸಿಕ ವೇತನ
ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ರೂ. 48,480/- ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
- ಇಡಬ್ಲ್ಯೂಎಸ್ / ಒಬಿಸಿ ಆಕಾಂಕ್ಷಿಗಳಿಗೆ : ರೂ. 750/-
- ಎಸ್ ಸಿ / ಎಸ್ ಟಿ / ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳಿಗೆ : ಶುಲ್ಕ ವಿನಾಯಿತಿ
ಪಾವತಿ ವಿಧಾನ : ಆಕಾಂಕ್ಷಿಗಳು ಅರ್ಜಿ ಶುಲ್ಕವನ್ನು ಯುಪಿಐ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ , ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
ಆಯ್ಕೆ ಪ್ರಕ್ರಿಯೆ
- ಪೂರ್ವಭಾವಿ ಪರೀಕ್ಷೆ
- ಮುಖ್ಯ ಪರೀಕ್ಷೆ
- ಸಂದರ್ಶನ
SBI PO ನೇಮಕಾತಿ 2025 : ಅರ್ಜಿಸಲ್ಲಿಸುವ ವಿಧಾನ
- SBI PO ನೇಮಕಾತಿ 2025 ರ ಅಧಿಕೃತ ವೆಬ್ಸೈಟ್ ಗೆ ಬೇಟಿ ನೀಡಿ. ಲಿಂಕ್ ಮೇಲೆ ಕ್ಲಿಕ್ ಮಾಡಿ
- ಮಾನ್ಯ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನೋಂದಾಯಿಸಿ
- ಅಗತ್ಯವಿರುವ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ. ( ನಿಮ್ಮ ಇತ್ತೀಚಿನ ಭಾವಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿ)
- ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24-06-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-07-2025
- ಪೂರ್ವಭಾವಿ ಪರೀಕ್ಷೆಯ ಕರೆ ಪತ್ರಗಳ ಡೌನ್‌ಲೋಡ್: ಜುಲೈ 2025 ರ 3 ನೇ / 4 ನೇ ವಾರದಿಂದ
- ಹಂತ-I: ಆನ್‌ಲೈನ್ ಪೂರ್ವಭಾವಿ ಪರೀಕ್ಷೆ: ಜುಲೈ / ಆಗಸ್ಟ್ 2025
- ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಘೋಷಣೆ: ಆಗಸ್ಟ್ / ಸೆಪ್ಟೆಂಬರ್ 2025
- ಮುಖ್ಯ ಪರೀಕ್ಷೆಯ ಕರೆ ಪತ್ರದ ಡೌನ್‌ಲೋಡ್: ಆಗಸ್ಟ್ / ಸೆಪ್ಟೆಂಬರ್ 2025
- ಹಂತ-II: ಆನ್‌ಲೈನ್ ಮುಖ್ಯ ಪರೀಕ್ಷೆ: ಸೆಪ್ಟೆಂಬರ್ 2025
- ಮುಖ್ಯ ಪರೀಕ್ಷೆಯ ಫಲಿತಾಂಶ ಘೋಷಣೆ: ಸೆಪ್ಟೆಂಬರ್ / ಅಕ್ಟೋಬರ್ 2025
- ಹಂತ-III ಕರೆ ಪತ್ರದ ಡೌನ್‌ಲೋಡ್: ಅಕ್ಟೋಬರ್ / ನವೆಂಬರ್ 2025
- ಹಂತ-III: ಸೈಕೋಮೆಟ್ರಿಕ್ ಪರೀಕ್ಷೆ: ಅಕ್ಟೋಬರ್ / ನವೆಂಬರ್ 2025
- ಸಂದರ್ಶನ ಮತ್ತು ಗುಂಪು ವ್ಯಾಯಾಮಗಳು: ಅಕ್ಟೋಬರ್ / ನವೆಂಬರ್ 2025
- ಅಂತಿಮ ಫಲಿತಾಂಶದ ಘೋಷಣೆ: ನವೆಂಬರ್ / ಡಿಸೆಂಬರ್ 2025
- ಪರೀಕ್ಷಾ ಪೂರ್ವ ತರಬೇತಿಗಾಗಿ ಕರೆ ಪತ್ರಗಳ ಡೌನ್‌ಲೋಡ್ : ಜುಲೈ / ಆಗಸ್ಟ್ 2025
ಪ್ರಮುಖ ಲಿಂಕ್ ಗಳು
ಅಧಿಸೂಚನೆ ಲಿಂಕ್ : ಮೇಲೆ ಕ್ಲಿಕ್ ಮಾಡಿ
ಅಪಲಿಕೇಶನ್ ಲಿಂಕ್ : ಮೇಲೆ ಕ್ಲಿಕ್ ಮಾಡಿ
Leave a Reply