afp header code starts here --> afp header code starts here -->

SSC CHSL ನೇಮಕಾತಿ 2025 || ಒಟ್ಟು 3131 ಲೋವರ್ ಡಿವಿಷನ್ ಕ್ಲರ್ಕ್ ಮತ್ತು ಇತರ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್‌ ನಲ್ಲಿ ಅರ್ಜಿ ಆಹ್ವಾನ

SSC CHSL ನೇಮಕಾತಿ 2025 : ಸಿಬ್ಬಂದಿ ಆಯ್ಕೆ ಆಯೋಗ (SSC) , ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (CHSL)  ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಒಟ್ಟು 3131 ಲೋವರ್ ಡಿವಿಷನ್ ಕ್ಲರ್ಕ್ (LDC), ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (JSA), ಡೇಟಾ ಎಂಟ್ರಿ ಆಪರೇಟರ್ (DEO), ಪೋಸ್ಟಲ್ ಅಸಿಸ್ಟೆಂಟ್ (PA), ಮತ್ತು ಸಾರ್ಟಿಂಗ್ ಅಸಿಸ್ಟೆಂಟ್ (SA), ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

SSC CHSL ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು

  • ಸಂಸ್ಥೆಯ ಹೆಸರು : ಸಿಬ್ಬಂದಿ ಆಯ್ಕೆ ಆಯೋಗ (SSC)
  • ಹುದ್ದೆಯ ಹೆಸರು : ಲೋವರ್ ಡಿವಿಷನ್ ಕ್ಲರ್ಕ್ (LDC), ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (JSA), ಹಾಗೂ ಇತರ ಹುದ್ದೆಗಳು
  • ಒಟ್ಟು ಹುದ್ದೆಗಳು : 3131 ಹುದ್ದೆಗಳು
  • ಉದ್ಯೋಗ ಸ್ಥಳ : ಭಾರತದಾದ್ಯಂತ
  • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
ನೇಮಕಾತಿಯ ವಿವರಗಳು
  • ಲೋವರ್ ಡಿವಿಷನ್ ಕ್ಲರ್ಕ್ (LDC)
  • ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (JSA)
  • ಅಂಚೆ ಸಹಾಯಕ (PA)
  • ವಿಂಗಡಣಾ ಸಹಾಯಕ (SA)
  • ಡೇಟಾ ಎಂಟ್ರಿ ಆಪರೇಟರ್ (DEO)

ಅರ್ಹತಾ ಮಾನದಂಡಗಳ ವಿವರಗಳು

ಶೈಕ್ಷಣಿಕ ಅರ್ಹತೆ :

ಆಕಾಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12 ನೇ ತರಗತಿ (ಅಥವಾ ತತ್ಸಮಾನ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. 12ನೇ ತರಗತಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ, ಆದರೆ ದಾಖಲೆ ಪರಿಶೀಲನೆಗಾಗಿ ಕಟ್ಆಫ್ ದಿನಾಂಕದೊಳಗೆ ಅವರು ಅಗತ್ಯವಿರುವ ಅರ್ಹತೆಯನ್ನು ಹೊಂದಿರಬೇಕು. 

ವಯೋಮಿತಿ :

  • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
  • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 27 ವರ್ಷಗಳು
  • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಮಾಸಿಕ ವೇತನ

ಆಯ್ಕೆಯಾದ ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

  • ಲೋವರ್ ಡಿವಿಷನ್ ಕ್ಲರ್ಕ್ (ಎಲ್‌ಡಿಸಿ)/ ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (ಜೆಎಸ್‌ಎ): ಪೇ ಲೆವೆಲ್-2 (ರೂ. 19,900-63,200).
  • ಡೇಟಾ ಎಂಟ್ರಿ ಆಪರೇಟರ್ (DEO) : ವೇತನ ಹಂತ-4 (ರೂ. 25,500-81,100) ಮತ್ತು ಹಂತ-5 (ರೂ. 29,200-92,300).
  • ಡೇಟಾ ಎಂಟ್ರಿ ಆಪರೇಟರ್, ಗ್ರೇಡ್ ‘ಎ’: ವೇತನ ಮಟ್ಟ-4 (ರೂ. 25,500-81,100).
ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
  • ಸಾಮಾನ್ಯ /ಒಬಿಸಿ /ಇಡಬ್ಲ್ಯೂಎಸ್ ಆಕಾಂಕ್ಷಿಗಳಿಗೆ : 100 ರೂ. 
  • ಮಹಿಳಾ ಆಕಾಂಕ್ಷಿಗಳಿಗೆ / ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ ಮತ್ತು ಮಾಜಿ ಸೈನಿಕರ ವರ್ಗಗಳಿಗೆ ಸೇರಿದ ಆಕಾಂಕ್ಷಿಗಳಿಗೆ : ಅರ್ಜಿ ಶುಲ್ಕವಿಲ್ಲ 

ಪಾವತಿ ವಿಧಾನ : ಅರ್ಜಿ ಶುಲ್ಕವನ್ನು UPI, ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ವಿಧಾನಗಳ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದು.

ಆಯ್ಕೆ ಪ್ರಕ್ರಿಯೆ
  • ಶ್ರೇಣಿ 1: ಆನ್‌ಲೈನ್ ವಸ್ತುನಿಷ್ಠ ಮಾದರಿ ಪರೀಕ್ಷೆ
  • ಶ್ರೇಣಿ 2 ವಿವರಣಾತ್ಮಕ ಮತ್ತು ಕೌಶಲ್ಯ ಆಧಾರಿತ ಪರೀಕ್ಷೆಗಳು
  • ಕೌಶಲ್ಯ/ಟೈಪಿಂಗ್ ಪರೀಕ್ಷೆ: ಹುದ್ದೆಗೆ ಅನುಗುಣವಾಗಿ ಅನ್ವಯಿಸುತ್ತದೆ.
SSC CHSL ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
  • SSC CHSL ನೇಮಕಾತಿ 2025 ರ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
  • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
  • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
  • ನಿಮ್ಮ ಇತ್ತೀಚಿನ ಛಾಯಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ
  • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ.
  • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತಗೆದುಕೊಳ್ಳಿ
ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 23-06-2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-07-2025
ಪ್ರಮುಖ ಲಿಂಕ್‌ ಗಳು

ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

ಅಪ್ಲಿಕೇಶನ್‌ ಲೀಂಕ್‌ : ಮೇಲೆ ಕ್ಲಿಕ್‌ ಮಾಡಿ

Comments

Leave a Reply

Your email address will not be published. Required fields are marked *