afp header code starts here --> afp header code starts here -->

SSC MTS ನೇಮಕಾತಿ 2025 || ಒಟ್ಟು 1075 ಹವಾಲ್ದಾರ್ ಹುದ್ದೆಗಳಿಗೆ ಆನ್ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ

SSC MTS ಹವಾಲ್ದಾರ್ ನೇಮಕಾತಿ 2025 : ಸಿಬ್ಬಂದಿ ಆಯ್ಕೆ ಆಯೋಗ (ಸ್ಟಾಫ್ ಸೆಲೆಕ್ಷನ್ ಕಮಿಷನ್ SSC), ಒಟ್ಟು 1075 ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಮತ್ತು ಹವಾಲ್ದಾರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. SSC MTS ಎನ್ನುವುದು ಪ್ರತಿವರ್ಷ ಮಲ್ಟಿ-ಟಾಸ್ಕಿಂಗ್ (ತಾಂತ್ರಿಕೇತರ) ಸಿಬ್ಬಂದಿ ಮತ್ತು ಹವಾಲ್ದಾರ್ (CBIC ಮತ್ತು CBN) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ನಡೆಸುವ ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ ಹುದ್ದೆಯ ನೇಮಕಾತಿ, ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

SSC MTS ಹವಾಲ್ದಾರ್ ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು
  • ಸಂಸ್ಥೆಯ ಹೆಸರು : ಸಿಬ್ಬಂದಿ ಆಯ್ಕೆ ಆಯೋಗ (SSC)
  • ಹುದ್ದೆಯ ಹೆಸರು : ಸಿಬ್ಬಂದಿ ಆಯ್ಕೆ ಆಯೋಗ ಬಹು-ಕಾರ್ಯಕಾರಿ ಸಿಬ್ಬಂದಿ
  • ಒಟ್ಟು ಹುದ್ದೆಗಳು : 1075 ಹುದ್ದೆಗಳು
  • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
  • ಉದ್ಯೋಗ ಸ್ಥಳ : ಅಖಿಲ ಭಾರತ
ಹುದ್ದೆಗಳ ವಿವರಗಳು

ಬಹು ಕಾರ್ಯ ಸಿಬ್ಬಂದಿ (MTS), CBIC ಮತ್ತು CBN ನಲ್ಲಿ ಹವಾಲ್ದಾರ್ ಹುದ್ದೆಗಳು : ಒಟ್ಟು 1075 ಹುದ್ದೆಗಳು

ಅರ್ಹತಾ ಮಾನದಂಡಗಳ ವಿವರಗಳು

ಶೈಕ್ಷಣಿಕ ಅರ್ಹತೆ :

ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಂದರೆ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ :

  • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
  • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 27 ವರ್ಷಗಳು
ವೇತನ ಶ್ರೇಣಿ

ಅಧಿಸೂಚನೆಯ ನಿಯಮಗಳ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ  18,000/- ರಿಂದ 22,000/- ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
  • ಸಾಮಾನ್ಯ ವರ್ಗ / ಒಬಿಸಿ / ಇಡಬ್ಲ್ಯೂಎಸ್ ಆಕಾಂಕ್ಷಿಗಳಿಗೆ : ರೂ. 100/-
  • ಎಸ್‌ ಸಿ / ಎಸ್‌ ಟಿ / ಪಿಡಬ್ಲ್ಯೂಬಿಡಿ / ಮಾಜಿ ಸೈನಿಕರು /ಮಹಿಳಾ ಆಕಾಂಕ್ಷಿಗಳಿಗೆ : ಶುಲ್ಕ ವಿನಾಯಿತಿ

ಪಾವತಿ ವಿಧಾನ : ಆಕಾಂಕ್ಷಿಗಳೂ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಪಾವತಿಸಬೇಕು

ಆಯ್ಕೆ ಪ್ರಕ್ರಿಯೆ
  • ಕಂಪ್ಯೂಟರ್ ಆಧಾರಿತ ಪರೀಕ್ಷೆ
  • CBE ಅನ್ನು ಹಿಂದಿ, ಇಂಗ್ಲಿಷ್ ಮತ್ತು ಬಂಗಾಳಿ, ತಮಿಳು, ತೆಲುಗು, ಉರ್ದು ಮತ್ತು ಪಂಜಾಬಿಯಂತಹ 13 ಪ್ರಾದೇಶಿಕ ಭಾಷೆಗಳನ್ನು ಒಳಗೊಂಡಂತೆ ಒಟ್ಟು 15 ಭಾಷೆಗಳಲ್ಲಿ ನಿರ್ವಹಿಸಲಾಗುತ್ತದೆ.

SSC MTS ಹವಾಲ್ದಾರ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

  • SSC MTS ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
  • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
  • ಅಗತ್ಯವಿರುವ ಎಲ್ಲಾ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ. (ಇತ್ತೀಚಿನ ಭಾವಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ)
  • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ
  • ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 26-06-2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-07-2025
  • ‘ಅರ್ಜಿ ನಮೂನೆ ತಿದ್ದುಪಡಿಗಾಗಿ ವಿಂಡೋ’ ಮತ್ತು ತಿದ್ದುಪಡಿ ಶುಲ್ಕಗಳ ಆನ್‌ಲೈನ್ ಪಾವತಿ ದಿನಾಂಕಗಳು :  29-07-2025 ರಿಂದ 31-07-2025 (ರಾತ್ರಿ 23:00 ಗಂಟೆಗಳು)
  • ಪರೀಕ್ಷಾ ದಿನಾಂಕಗಳು : ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 24, 2025 ರವರೆಗೆ
  • ಪತ್ರಿಕೆ-I ಪ್ರವೇಶ ಪತ್ರ : ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.
  • ಫಲಿತಾಂಶ ಘೋಷಣೆ : ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.
ಪ್ರಮುಖ ಲಿಂಕ್‌ ಗಳು

ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

Comments

Leave a Reply

Your email address will not be published. Required fields are marked *