ಪ್ರತಿಷ್ಠಿತ ನ್ಯಾಯಾಲಯ ಸುಪ್ರೀಂ ಕೋರ್ಟ್ನಲ್ಲಿ ಖಾಲಿ ಇರುವ 241 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಯಾವೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಮಾಸಿಕ ಸಂಬಳ ಎಷ್ಟಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೇಶದ ಪ್ರತಿಷ್ಠಿತ ನ್ಯಾಯಾಲಯ ಸುಪ್ರೀಂ ಕೋರ್ಟ್ನಲ್ಲಿ ಕೆಲಸ ಮಾಡಲು ಇಚ್ಚೀಸುವವರಿಗೆ ಇಲ್ಲೊಂದು ಗುಡ್ನ್ಯೂಸ್ ಇದೆ. ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ಹೊಸ ಉದ್ಯೋಗಗಳನ್ನು ನೇಮಕ ಮಾಡಲು ಮುಂದಾಗಿದ್ದು ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಿದೆ. ಉದ್ಯೋಗಕ್ಕಾಗಿ ಹುಡುಕುತ್ತಿರುವವರು ನ್ಯಾಯಾಲಯದ ಕೆಲಸಗಳಿಗೆ ಪ್ರಯತ್ನ ಮಾಡಬಹುದು.
ನ್ಯಾಯಾಲಯವು ಈಗಾಗಲೇ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ವಿದ್ಯಾರ್ಹತೆ, ಪರೀಕ್ಷೆ, ಅರ್ಜಿ ಶುಲ್ಕ, ಅಗತ್ಯವಿರುವ ದಾಖಲೆ, ವಯಸ್ಸಿನ ಮಿತಿ, ಹೀಗೆ ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಲಿಂಕ್ ಕೂಡ ನಮೂದು ಮಾಡಲಾಗಿದೆ. ಜೊತೆಗೆ ಸಂಪೂರ್ಣ ಮಾಹಿತಿಯು ಇದೆ. ಹೀಗಾಗಿ ಈ ಆರ್ಟಿಕಲ್ ಅನ್ನು ಪೂರ್ಣವಾಗಿ ಮನನ ಮಾಡಿಕೊಳ್ಳಿ.
ಪೋಸ್ಟ್ ನ: ಪೂರ್ಣ ವಿವರ.
- ಉದ್ಯೋಗದ ಹೆಸರು: ಕಿರಿಯ ನ್ಯಾಯಾಲಯದ ಸಹಾಯಕ (Junior Court Assistant).
- ಒಟ್ಟು: 241 ಉದ್ಯೋಗಗಳು ಖಾಲಿ ಇವೆ.
- ಮಾಸಿಕ ವೇತನ: 72,040 ರೂಪಾಯಿ ಇರಲಿದೆ.
- ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ.
ಆಕಾಂಕ್ಷಿಗಳು ಹೊಂದಿರಬೇಕಾದ: ಅರ್ಹತ ಮಾನದಂಡಗಳು
ಶೈಕ್ಷಣಿಕ ಅರ್ಹತೆ:
- ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
- ಇಂಗ್ಲಿಷ್ ಟೈಪಿಂಗ್ ಸ್ಪೀಡ್ 35 ಡಬ್ಲು.ಪಿ. ಎಂ,ಕಂಪ್ಯೂಟರ್ ಜ್ಞಾನ ಇರಬೇಕು.
ವಯೋಮಿತಿ:
- ಆಕಾಂಕ್ಷಿಯ ಕನಿಷ್ಠ ವಯಸ್ಸು: 18 ವರ್ಷಗಳನ್ನು ಪೂರೈಸಿರಬೇಕು.
- ಆಕಾಂಕ್ಷಿಯ ಗರಿಷ್ಠ ವಯಸ್ಸು: 30 ವರ್ಷಗಳನ್ನು ಮೀರಿರಬಾರದು.
ಅರ್ಜಿ ಸಲ್ಲಿಸುವ ಮತ್ತು ಪಾವತಿಯ ವಿಧಾನ.
- ಜನರಲ್, OBC,EWS 1,000/- ರೂ
- SC,ST ಮಾಜಿ ಸೈನಿಕ 250/- ರೂ.
- ಆನ್ಲೈನ್ ಮೂಲಕ ಪಾವತಿ ಮಾಡಬೇಕು
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ (100 ಪ್ರಶ್ನೆಗಳು)
- ಕಂಪ್ಯೂಟರ್ ಜ್ಞಾನ Objective Type Test (25 ಪ್ರಶ್ನೆಗಳು).
- ಕಂಪ್ಯೂಟರ್ ಟೈಪಿಂಗ್ ( ನಿಮಿಷಕ್ಕೆ 35 ಪದಗಳ ಟೈಪಿಂಗ್ ವೇಗವನ್ನು ಹೊಂದಿರಬೇಕು).
- ಡಿಸ್ಕ್ರಿಪ್ಟಿವ್ ಟೈಪ್ ಪೇಪರ್ (Descriptive Test) ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ: ಫೆಬ್ರವರಿ-05-2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್-08-2025.
ಅರ್ಜಿ ಸಲ್ಲಿಸಲು ಆಕಾಂಕ್ಷಿಗಳಿಗೆ: ಪ್ರಮುಖ ಲಿಂಕುಗಳು.
| ಅರ್ಜಿ ಸಲ್ಲಿಸಲು. | ಇಲ್ಲಿ ಕ್ಲಿಕ್ ಮಾಡಿ |