MPPSC Assistant Professor Recruitment 2025 (MPPSC) : ಮಧ್ಯಪ್ರದೇಶದ ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಸರ್ಕಾರಿ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗವು (MPPSC) ಬಹು ವಿಷಯಗಳಲ್ಲಿ ಒಟ್ಟು 1930 ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಸ್ನಾತಕೋತ್ತರ ಪದವಿ ಹಾಗೂ ಉನ್ನತ ಶಿಕ್ಷಣ ಪಡೆದಿರುವ ಆಕಾಂಕ್ಷಿಗಳು ಆನ್‌ಲೈನ್‌ನಲ್ಲಿಈಗಲೇ ಅರ್ಜಿ ಸಲ್ಲಿಸಬಹುದು. MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯಲ್ಲಿರುವ ಸೂಚನೆಗಳನ್ನು ಎಚ್ಚರಿಕೆಯಿಂದ ಓದಲು ಮತ್ತು ಅನುಸರಿಸಲು ಸೂಚಿಸಲಾಗಿದೆ. ಆಸಕ್ತ ಆಕಾಂಕ್ಷಿಗಳು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಬೇಕು. ಮಧ್ಯಪ್ರದೇಶದೊಳಗೆ ಉನ್ನತ ಶಿಕ್ಷಣದಲ್ಲಿ ವೃತ್ತಿಜೀವನವನ್ನು ಸ್ಥಾಪಿಸಲು ಬಯಸುವ ಆಕಾಂಕ್ಷಿಗಳಿಗೆ ಇದು ಸುವರ್ಣಾವಕಾಶ.
ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿದ್ದು, ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗ (MPPSC) ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗೆ ಆನ್‌ಲೈನ್ ಅರ್ಜಿ ದಿನಾಂಕವನ್ನು ನಿಗದಿ ಪಡಿಸಿದೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯೂ ಆಫ್ ಲೈನ್ ನಲ್ಲಿರುತ್ತದೆ. ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ಏಕೆಂದರೆ ಯಾವುದೇ ತಡವಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗವು ಪಾರದರ್ಶಕ ಮತ್ತು ವ್ಯವಸ್ಥಿತ ಆಯ್ಕೆ ಪ್ರಕ್ರಿಯೆಯ ಮೂಲಕ ಬಹು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ. ಈ ನೇಮಕಾತಿ ಡ್ರೈವ್ ಶೈಕ್ಷಣಿಕ ಕ್ಷೇತ್ರದಲ್ಲಿ ಸ್ಥಿರ ಮತ್ತು ಲಾಭದಾಯಕ ವೃತ್ತಿಜೀವನವನ್ನು ಒದಗಿಸುತ್ತದೆ.
ಹುದ್ದೆಗಳ ವಿವರ, ಅರ್ಹತೆ, ಅರ್ಜಿ ಪ್ರಕ್ರಿಯೆ, ಶುಲ್ಕಗಳು ಮತ್ತು ಪಾವತಿ ವಿಧಾನ, ಆಯ್ಕೆ ಮಾನದಂಡಗಳು, ವಯೋಮಿತಿ ಹಾಗೂ ಇತರೆ ಎಲ್ಲಾ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.
MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ನೇಮಕಾತಿಯ ವಿವರ
- ಸಂಸ್ಥೆಯ ಹೆಸರು : ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗ (MPPSC)
- ಹುದ್ದೆಯ ಹೆಸರು : ಸಹಾಯಕ ಪ್ರಾಧ್ಯಾಪಕರು
- ಒಟ್ಟು ಹುದ್ದೆಗಳು : 1930 ಹುದ್ದೆಗಳು
- ಪರೀಕ್ಷೆಯ ದಿನಾಂಕ : ಜೂನ್ 1, 2025
- ಅರ್ಜಿ ಸ್ವರೂಪ : ಆನ್ ಲೈನ್
MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಹುದ್ದೆಯ ವಿವರ
- ರಸಾಯನಶಾಸ್ತ್ರ – 199 ಹುದ್ದೆಗಳು
- ಸಮಾಜಶಾಸ್ತ್ರ – 92 ಹುದ್ದೆಗಳು
- ವಾಣಿಜ್ಯ – 111 ಹುದ್ದೆಗಳು
- ಸಸ್ಯಶಾಸ್ತ್ರ – 190 ಹುದ್ದೆಗಳು
- ಕಂಪ್ಯೂಟರ್ ಸೈನ್ಸ್ – 87 ಹುದ್ದೆಗಳು
- ಪ್ರಾಣಿಶಾಸ್ತ್ರ – 187 ಹುದ್ದೆಗಳು
- ಭೌತಶಾಸ್ತ್ರ – 186 ಹುದ್ದೆಗಳು
- ಗಣಿತ – 177 ಹುದ್ದೆಗಳು
- ರಾಜ್ಯಶಾಸ್ತ್ರ – 124 ಹುದ್ದೆಗಳು
- ಹಿಂದಿ – 113 ಹುದ್ದೆಗಳು
- ಇತಿಹಾಸ – 97 ಹುದ್ದೆಗಳು
- ಇಂಗ್ಲಿಷ್ – 96 ಹುದ್ದೆಗಳು
- ಭೂಗೋಳ – 96 ಹುದ್ದೆಗಳು
ಉರ್ದು, ಸಂಸ್ಕೃತ ಸಾಹಿತ್ಯ, ಸಂಗೀತ, ಮರಾಠಿ, ಸಂಸ್ಕೃತ ವ್ಯಾಕರಣ, ವೇದ, ಸಂಸ್ಕೃತ ಜ್ಯೋತಿಷ್ಯ ಇನ್ನು ಹಲವಾರು ವಿಷಯಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಅರ್ಹತಾ ಮಾನದಂಡಗಳು
ವಿದ್ಯಾರ್ಹತೆ :
- MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ ಆಕಾಂಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಶೇಕಡಾ 55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ (ಪಿಜಿ) ಪಡೆದಿರಬೇಕು.
- ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳಾದ UGC / CSIR NET / SLTE / SET ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಪಿಎಚ್‌ಡಿ ಪದವಿ ಪಡೆದ ಅಭ್ಯರ್ಥಿಗಳು (ಯುಜಿಸಿ ನಿಯಮಾವಳಿಗಳ ಪ್ರಕಾರ) ಎನ್‌ಇಟಿ ಅರ್ಹತೆಯಿಂದ ವಿನಾಯಿತಿ ಪಡೆದಿರುತ್ತಾರೆ.
ವಯೋಮಿತಿ :
MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ ಆಕಾಂಕ್ಷಿಗಳ ವಯಸ್ಸು ಈ ಕೆಳಗೆ ಸೂಚಿಸಿರುವ ಹಾಗೆ ಇರುತ್ತದೆ.
- ಕನಿಷ್ಠ ವಯಸ್ಸು: 21 ವರ್ಷಗಳು
- ಗರಿಷ್ಠ ವಯಸ್ಸು: 40 ವರ್ಷಗಳು
ವಯಸ್ಸಿನ ಸಡಿಲಿಕೆ : ಸರ್ಕಾರಿ ಮಾನದಂಡಗಳ ಪ್ರಕಾರ ಮೀಸಲು ವರ್ಗಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಮಾಸಿಕ ವೇತನ
MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
- ಸಾಮಾನ್ಯ ಮತ್ತು ಇತರ ರಾಜ್ಯಗಳು : ₹500 /-
- ಒಬಿಸಿ/ ಇಡಬ್ಲ್ಯೂಎಸ್/ ಎಸ್‌ಸಿ/ ಎಸ್‌ಟಿ/ ಪಿಡಬ್ಲ್ಯೂಡಿ : 250/-
ಪಾವತಿ ವಿಧಾನ : ಆಕಾಂಕ್ಷಿಗಳು ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಇ-ಚಲನ್ ಮೂಲಕ ಪಾವತಿಸಬಹುದು.
MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ ಕೆಳಗಿನ ಹಂತಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
- ಲಿಖಿತ ಪರೀಕ್ಷೆ (ಆಫ್ ಲೈನ್ ಪರೀಕ್ಷೆ)
- ಸಂದರ್ಶನ
- ದಾಖಲೆ ಪರಿಶೀಲನೆ
- ಅಂತಿಮ ಮೆರಿಟ್ ಪಟ್ಟಿ
MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
- MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅರ್ಜಿ ಸಲ್ಲಿಸಲು ಬಯಸುವ ಆಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: mppsc.mp.gov.in . ಲಿಂಕ್ ಅನ್ನು ಕ್ಲಿಕ್ ಮಾಡಿ
- ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿ.
- ಅಗತ್ಯವಿರುವ ವೈಯಕ್ತಿಕ, ಶೈಕ್ಷಣಿಕ ವಿವರಗಳನ್ನು ನಮೂದಿಸಿ
- ನಿಮ್ಮ ಛಾಯಾಚಿತ್ರ ಮತ್ತು ಸಹಿಯ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
- ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಅರ್ಜಿ ಶುಲ್ಕವನ್ನು ಪಾವತಿಸಿ
- ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯನ್ನು ಡೌನ್‌ಲೌಡ್ ಪ್ರಿಂಟ್ ತೆಗೆದುಕೊಳ್ಳಿ.
MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಪ್ರಮುಖ ದಿನಾಂಕಗಳು
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 27 ಫೆಬ್ರವರಿ 2025
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಮಾರ್ಚ್ 2025
- ಶುಲ್ಕ ಪಾವತಿಸಲು ಕೊನೆಯ ದಿನಾಂಕ: 26 ಮಾರ್ಚ್ 2025
- ಪರೀಕ್ಷಾ ದಿನಾಂಕ : 01 ಜೂನ್ 2025
- ಪ್ರವೇಶ ಪತ್ರ: 23 ಮೇ 2025
MPPSC ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
| ಅಧಿಸೂಚನೆ ಲಿಂಕ್ | ಮೇಲೆ ಕ್ಲಿಕ್ ಮಾಡಿ |
| ಅಪ್ಲಿಕೇಶನ್ ಲಿಂಕ್ | ಮೇಲೆ ಕ್ಲಿಕ್ ಮಾಡಿ |