NFDC ನೇಮಕಾತಿ 2025 : ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC) ಒಟ್ಟು 11 ಹಿರಿಯ ಕಾರ್ಯನಿರ್ವಾಹಕ, ಸಹಾಯಕ ವ್ಯವಸ್ಥಾಪಕ, ಸಹಾಯಕ ಸಂಯೋಜಕ ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳು ಮೂವಿ ಫೆಸ್ಟಿವಲ್‌ಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವವರಿಗೆ, ಫಿಲ್ಮ್ ಸ್ಟಡೀಸ್, ಮಾಸ್ ಕಮ್ಯುನಿಕೇಶನ್, ಐಟಿ ಕ್ಷೇತ್ರದಲ್ಲಿ ಉತ್ಸಾಹ ಹೊಂದಿರುವ ಆಕಾಂಕ್ಷಿಗಳಿಗೆ ಸುವರ್ಣಾವಕಾಶವಾಗಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು NFDC ನೇಮಕಾತಿ 2025 ರ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಅಥವಾ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
NFDC ನೇಮಕಾತಿಯ ಹುದ್ದೆಯ ವಿವರ, ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.
NFDC ನೇಮಕಾತಿ 2025 : ನೇಮಕಾತಿಯ ವಿವರಗಳು
- ಸಂಸ್ಥೆಯ ಹೆಸರು : ಭಾರತೀಯ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC)
- ಹುದ್ದೆಯ ಹೆಸರು : ಸಹಾಯಕ ವ್ಯವಸ್ಥಾಪಕ, ಸಹಾಯಕ ಸಂಯೋಜಕ
- ಒಟ್ಟು ಹುದ್ದೆಗಳು : 11 ಹುದ್ದೆಗಳು
- ಅರ್ಜಿ ಸ್ವರೂಪ : ಆನ್ಲೈನ್ / ಆಫ್ಲೈನ್ ಮೂಲಕ
- ಉದ್ಯೋಗ ಸ್ಥಳ : ಮುಂಬೈ – ಮಹಾರಾಷ್ಟ್ರ
NFDC ನೇಮಕಾತಿ 2025 : ಹುದ್ದೆಯ ವಿವರಗಳು
- ಹಿರಿಯ ಪ್ರೋಗ್ರಾಮರ್ : 02
- ಸಹಾಯಕ ವ್ಯವಸ್ಥಾಪಕ (ಐಟಿ) : 01
- ಹಿರಿಯ ಕಾರ್ಯನಿರ್ವಾಹಕ (ಆಡಳಿತ ಮತ್ತು ಲೆಕ್ಕಪತ್ರಗಳು) : 01
- ಸಹಾಯಕ ಸಂಯೋಜಕರು (ಚಿತ್ರಕಥೆಗಾರರ ಪ್ರಯೋಗಾಲಯ) : 01
- ಅಸೋಸಿಯೇಟ್ ಫಿಲ್ಮ್ ಪ್ರೋಗ್ರಾಮರ್ : 02
- ಉತ್ಸವ ಸಂಯೋಜಕರು : 04
NFDC ನೇಮಕಾತಿ 2025 : ಅರ್ಹತಾ ಮಾನದಂಡಗಳು
ವಿದ್ಯಾರ್ಹತೆ :
- ಹಿರಿಯ ಪ್ರೋಗ್ರಾಮರ್ : ಸಮೂಹ ಸಂವಹನ ಅಥವಾ ಚಲನಚಿತ್ರ ಅಧ್ಯಯನದಲ್ಲಿ ಪದವಿ/ಸ್ನಾತಕೋತ್ತರ ಪದವಿ. ಚಲನಚಿತ್ರ ಕಾರ್ಯಕ್ರಮ, ಕ್ಯುರೇಶನ್ ಅಥವಾ ಉತ್ಸವ ನಿರ್ವಹಣೆಯಲ್ಲಿ ಕನಿಷ್ಠ 6 ವರ್ಷಗಳ ಅನುಭವ ಇರಬೇಕು.
- ಸಹಾಯಕ ವ್ಯವಸ್ಥಾಪಕ (ಐಟಿ) : ಕಂಪ್ಯೂಟರ್ ಸೈನ್ಸ್, ಸಿಸ್ಟಮ್ಸ್ ಎಂಜಿನಿಯರಿಂಗ್ ಅಥವಾ ನೆಟ್‌ವರ್ಕ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪೂರ್ಣ ಸಮಯದ ಪದವಿ. ಐಟಿ/ಡೇಟಾ ಸಾಫ್ಟ್‌ವೇರ್/ನೆಟ್‌ವರ್ಕ್ ಆಡಳಿತದಲ್ಲಿ ಕನಿಷ್ಠ 4 ವರ್ಷಗಳ ಅನಿಭವ.
- ಹಿರಿಯ ಕಾರ್ಯನಿರ್ವಾಹಕ (ಆಡಳಿತ ಮತ್ತು ಲೆಕ್ಕಪತ್ರಗಳು) : ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಕನಿಷ್ಠ 5 ವರ್ಷಗಳ ಅನುಭವ
- ಸಹಾಯಕ ಸಂಯೋಜಕರು (ಚಿತ್ರಕಥೆಗಾರರ ಪ್ರಯೋಗಾಲಯ) : ಸಮೂಹ ಸಂವಹನದಲ್ಲಿ ಪದವಿ.ಚಲನಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ
- ಅಸೋಸಿಯೇಟ್ ಫಿಲ್ಮ್ ಪ್ರೋಗ್ರಾಮರ್ : ಈವೆಂಟ್ ಮ್ಯಾನೇಜ್ಮೆಂಟ್, ಸಿನಿಮಾ ಅಧ್ಯಯನ, ಸಿನಿಮಾ ನಿರ್ಮಾಣ, ಸಂವಹನ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಪದವಿ. ಈವೆಂಟ್ ಕೋಆರ್ಡಿನೇಶನ್ ಅಥವಾ ಆರ್ಟ್ಸ್ ಆಡ್ಮಿನಿಸ್ಟ್ರೇಶನ್‌ನಲ್ಲಿ ಅನುಭವ
- ಉತ್ಸವ ಸಂಯೋಜಕರು : ಯಾವುದೇ ವಿಭಾಗದಲ್ಲಿ ಪದವಿ
ವಯೋಮಿತಿ :
- ಆಕಾಂಕ್ಷಿಗಳ ಗರಿಷ್ಠ ವಯಸ್ಸು : 45 ವರ್ಷಗಳು
- ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
NFDC ನೇಮಕಾತಿ 2025 : ಮಾಸಿಕ ವೇತನ
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC) ಅಧಿಕೃತ ಅಧಿಸೂಚನೆಯ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
- ಹಿರಿಯ ಪ್ರೋಗ್ರಾಮರ್ : 80,000 ರೂ
- ಸಹಾಯಕ ವ್ಯವಸ್ಥಾಪಕ (ಐಟಿ) : 70,000 ರೂ.
- ಹಿರಿಯ ಕಾರ್ಯನಿರ್ವಾಹಕ (ಆಡಳಿತ ಮತ್ತು ಲೆಕ್ಕಪತ್ರಗಳು) : 65,000 ರೂ
- ಸಹಾಯಕ ಸಂಯೋಜಕರು (ಚಿತ್ರಕಥೆಗಾರರ ಪ್ರಯೋಗಾಲಯ) : 55,000 ರೂ
- ಅಸೋಸಿಯೇಟ್ ಫಿಲ್ಮ್ ಪ್ರೋಗ್ರಾಮರ್ : 70,000 ರೂ
- ಉತ್ಸವ ಸಂಯೋಜಕರು : 50,000 ರೂ
NFDC ನೇಮಕಾತಿ 2025 : ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕವಿಲ್ಲ
NFDC ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
- ಸಂದರ್ಶನ
NFDC ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC) ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.
- NFDC ನೇಮಕಾತಿ 2025 ರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ .ಲಿಂಕ್ ಮೇಲೆ ಕ್ಲಿಕ್ ಮಾಡಿ
- ಮಾನ್ಯ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನೋಂದಾಯಿಸಿ
- ಅಗತ್ಯವಿರುವ ಶೈಕ್ಷಣಿಕ ದಾಖಲೆ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
- ನಿಮ್ಮ ಛಾಯಾಚಿತ್ರ, ಸಹಿ, ಅಂಕಪಟ್ಟಿಗಳು, ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕವನ್ನು ಆನ್‌ಲೈನ್ ಮೋಡ್ ಅಥವಾ ಆಫ್‌ಲೈನ್ ಮೋಡ್ ಮೂಲಕ ಪಾವತಿಸಬಹುದು. (ಅನ್ವಯಿಸಿದರೆ ಮಾತ್ರ)
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ
NFDC ನೇಮಕಾತಿ 2025 : ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 03 ಏಪ್ರಿಲ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಏಪ್ರಿಲ್ 2025
NFDC ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
ಅಧಿಸೂಚನೆ ಲಿಂಕ್ : ಮೇಲೆ ಕ್ಲಿಕ್ ಮಾಡಿ
ಅಪ್ಲಿಕೇಶನ್ ಲಿಂಕ್ : ಮೇಲೆ ಕ್ಲಿಕ್ ಮಾಡಿ