ಹತ್ತನೇ ಮತ್ತು ಪಿಯುಸಿ ಪಾಸಾದವರಿಗೆ BSF ಹೆಡ್ ಕಾನ್ಸ್ಟೇಬಲ್ (RO, RM) ನೇಮಕಾತಿ 2025 || ಒಟ್ಟು 1121 ಹುದ್ದೆಗಳಿಗೆ ಆನ್ಲೈನಲ್ಲಿ ಅರ್ಜಿ ಆಹ್ವಾನ

BSF ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025 : ಗಡಿ ಭದ್ರತಾ ಪಡೆ (BSF) ಒಟ್ಟು 1,121 ಹೆಡ್ ಕಾನ್ಸ್‌ಟೇಬಲ್ (ರೇಡಿಯೋ ಆಪರೇಟರ್) ಮತ್ತು ಹೆಡ್ ಕಾನ್ಸ್‌ಟೇಬಲ್ (ರೇಡಿಯೋ ಮೆಕ್ಯಾನಿಕ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡ ಮಾಡಿದೆ. ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. BSF ಹೆಡ್ ಕಾನ್ಸ್ಟೇಬಲ್ ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳು, ದೈಹಿಕ ಮಾನದಂಡಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

BSF ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು
  • ಸಂಸ್ಥೆಯ ಹೆಸರು : ಗಡಿ ಭದ್ರತಾ ಪಡೆ (BSF)
  • ಹುದ್ದೆಯ ಹೆಸರು : ಹೆಡ್ ಕಾನ್ಸ್‌ಟೇಬಲ್ (ರೇಡಿಯೋ ಆಪರೇಟರ್) ಮತ್ತು ಹೆಡ್ ಕಾನ್ಸ್‌ಟೇಬಲ್ (ರೇಡಿಯೋ ಮೆಕ್ಯಾನಿಕ್) ಹುದ್ದೆಗಳು
  • ಒಟ್ಟು ಹುದ್ದೆಗಳು : 1,121 ಹುದ್ದೆಗಳು
  • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
  • ಉದ್ಯೋಗ ಸ್ಥಳ : ಅಖಿಲ ಭಾರತ
ಹುದ್ದೆಯ ವಿವರಗಳು
  • ಹೆಡ್ ಕಾನ್ಸ್‌ಟೇಬಲ್ (ರೇಡಿಯೋ ಆಪರೇಟರ್) : 910 ಹುದ್ದೆಗಳು
  • ಹೆಡ್ ಕಾನ್ಸ್‌ಟೇಬಲ್ (ರೇಡಿಯೋ ಮೆಕ್ಯಾನಿಕ್) : 211 ಹುದ್ದೆಗಳು
ಅರ್ಹತಾ ಮಾನದಂಡಗಳ ವಿವರಗಳು

ಬಿಎಸ್‌ಎಫ್ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ  10 ನೇ ತರಗತಿ, ಮತ್ತು ಐಟಿಐ, 12 ನೇ ತರಗತಿ ಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ :

  • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
  • ಆಕಾಂಕ್ಷಿಗಳ ಗರಿಷ್ಠ ವಯಸ್ಸು :  25 ವರ್ಷಗಳು
ವಯೋಮಿತಿ ಸಡಿಲಿಕೆ :
  • ಒಬಿಸಿ ಆಕಾಕ್ಷಿಗಳು : 03 ವರ್ಷಗಳು
  • SC/ST ಆಕಾಂಕ್ಷಿಗಳು : 05 ವರ್ಷಗಳು
ವೇತನ ಶ್ರೇಣಿ

ಬಿಎಸ್‌ಎಫ್ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ತಿಂಗಳಿಗೆ ರೂ.25500 – 81100 ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ
  • UR/OBC/EWS (ಪುರುಷ) ಆಕಾಂಕ್ಷಿಗಳಿಗೆ : ಪ್ರತಿ ಹುದ್ದೆಗೆ ರೂ. 100/- + ರೂ. 59/- CSC ಶುಲ್ಕಗಳು.
  • SC/ST, ಮಹಿಳೆಯರು, ಇಲಾಖಾ, ಮಾಜಿ ಸೈನಿಕರಿಗೆ : NIL
ಆಯ್ಕೆ ಪ್ರಕ್ರಿಯೆ
  • ದೈಹಿಕ ಪ್ರಮಾಣೀಕರಣ ಪರೀಕ್ಷೆ
  • ದೈಹಿಕ ದಕ್ಷತೆ ಪರೀಕ್ಷೆ
  • ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ದಾಖಲೆ ಪರಿಶೀಲನೆ
  • ಉಕ್ತಲೇಖನ ಪರೀಕ್ಷೆ
  • ಪ್ಯಾರಾಗ್ರಾಫ್ ಓದುವ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ
BSF ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
  • BSF ಹೆಡ್ ಕಾನ್ಸ್ಟೇಬಲ್ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
  • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
  • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಕಲೆಗಳನ್ನು ಭರ್ತಿ ಮಾಡಿ
  • ನಿಮ್ಮ ಭಾವಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
  • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ
  • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 24 ಆಗಸ್ಟ್‌ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23 ಸೆಪ್ಟೆಂಬರ್ 2025
ಪ್ರಮುಖ ಲಿಂಕ್‌ ಗಳು

ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

Author: admin

Leave a Reply

Your email address will not be published. Required fields are marked *