UPSC RECRUITMENT 2025 : 845 ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆಗೆ ಆನ್ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ

UPSC ನೇಮಕಾತಿ 2025 : ಕೇಂದ್ರ ಲೋಕಸೇವಾ ಆಯೋಗ (ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್UPSC) ಅಖಿಲ ಭಾರತದಾದ್ಯಂತ ಒಟ್ಟು 845 ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷಾ (ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಎಕ್ಸಾಮಿನೇಷನ್) ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಹಾಗೂ UPSC – ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗೆ ತಯಾರಾಗುತ್ತಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಜೊತೆಗೆ ಕೇಂದ್ರ ಲೋಕಸೇವಾ ಆಯೋಗ ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

UPSC ನೇಮಕಾತಿ 2025

UPSC ನೇಮಕಾತಿ 2025 ರ ಪ್ರಮುಖ ವಿವರಗಳು

  • ಸಂಸ್ಥೆಯ ಹೆಸರು : ಕೇಂದ್ರ ಲೋಕಸೇವಾ ಆಯೋಗ (UPSC)
  • ಹುದ್ದೆಯ ಹೆಸರು : ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ
  • ಒಟ್ಟು ಹುದ್ದೆಗಳು : 845 ಹುದ್ದೆಗಳು
  • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
  • ವರ್ಗ : ಸರ್ಕಾರಿ ಕೆಲಸ
  • ಉದ್ಯೋಗ ಸ್ಥಳ : ಅಖಿಲ ಭಾರತ

ಹುದ್ದೆಗಳ ವಿವರಗಳು

ಕೋರ್ಸ್ ಹೆಸರುಒಟ್ಟು ಹುದ್ದೆಗಳ ಸಂಖ್ಯೆ
ಭಾರತೀಯ ಸೇನಾ ಅಕಾಡೆಮಿ100
ಭಾರತೀಯ ನೌಕಾ ಅಕಾಡೆಮಿ26
ವಾಯುಪಡೆ ಅಕಾಡೆಮಿ32
ಅಧಿಕಾರಿಗಳ ತರಬೇತಿ ಅಕಾಡೆಮಿ (ಪುರುಷರು)275
ಮಹಿಳಾ ಅಧಿಕಾರಿಗಳ ತರಬೇತಿ ಅಕಾಡೆಮಿ18
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಸೇನೆ)208
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ನೌಕಾಪಡೆ)42
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ವಾಯುಪಡೆ)120
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ವಾಯುಪಡೆ)24

UPSC ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು

ಶೈಕ್ಷಣಿಕ ಅರ್ಹತೆ :

UPSC ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗುತ್ತದೆ. ಆಕಾಂಕ್ಷಿಗಳು ಮಾನ್ಯತೆ ಮಡೆದ ಮಂಡಳಿ ಹಾಗೂ ವಿಶ್ವವಿದ್ಯಾಲಯದಿಂದ ಹತ್ತನೇ ತರಗತಿ, 12 ನೇ ತರಗತಿ, ಪದವಿ, ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.

ವಯೋಮಿತಿ :

ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ವಯೋಮಿತಿಯನ್ನು ಗುರುತಿಸಲಾಗುತ್ತದೆ.

  • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 20 ವರ್ಷಗಳು
  • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 24 ವರ್ಷಗಳು
  • ಮಾನದಂಡಗಳ ನಿಯಮಗಳ ಪ್ರಕಾರ, ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಮಾಸಿಕ ವೇತನ

ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ ರೂ. 56,100 – 2,25,000/- ಮಾಸಿಕ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ

ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆಗೆ

  • ಒಬಿಸಿ ಆಕಾಂಕ್ಷಿಗಳಿಗೆ : ರೂ. 200/-
  • ಎಸ್‌ ಸಿ / ಎಸ್‌ ಟಿ / ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳಿಗೆ : ಶುಲ್ಕ ವಿನಾಯಿತಿ

ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆಗೆ

  •  ಒಬಿಸಿ ಆಕಾಂಕ್ಷಿಗಳಿಗೆ : ರೂ. 100/-
  • ಎಸ್‌ ಸಿ / ಎಸ್‌ ಟಿ / ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳಿಗೆ : ಶುಲ್ಕ ವಿನಾಯಿತಿ

ಪಾವತಿ ವಿಧಾನ : ಅರ್ಜಿ ಶುಲ್ಕವನ್ನು ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ಯುಪಿಐ, ನೆಟ್‌ ಬ್ಯಾಂಕಿಂಗ್‌ ಮೂಲಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ

ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿ ಆಯ್ಕೆ ಪ್ರಕ್ರಿಯೆಯೂ ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ.

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ
  • SSB ಸಂದರ್ಶನ

UPSC ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

  • UPSC ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ.
  • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೊಂದಾಯಿಸಿ
  • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
  • ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
  • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
  • ಅರ್ಜಿಯನ್ನು ಪೂರ್ಣಗೊಳಿಸಿದ ನಂತರ ಸಲ್ಲಿಸು ಬಟನ್‌ ಮೇಲೆ ಕ್ಲಿಕ್‌ ಮಾಡಿ, ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ.

UPSC ನೇಮಕಾತಿ 2025 : ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10 ಡಿಸೆಂಬರ್‌ 2025
  • ಅರ್ಜಿ ಸಲಿಸು ಕೊನೆಯ ದಿನಾಂಕ : 30 ಡಿಸೆಂಬರ್ 2025
  • ಪರೀಕ್ಷೆಯ ದಿನಾಂಕ : 12 ಏಪ್ರಿಲ್ 2026

ಪ್ರಮುಖ ಲಿಂಕ್‌ ಗಳು

ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ

ಪ್ರಶ್ನೋತ್ತರಗಳು (FAQS)

1.UPSC ನೇಮಕಾತಿಯಲ್ಲಿ ಒಟ್ಟು ಎಷ್ಟು ಹುದ್ದೆಗಳನ್ನು ಭರ್ತಿಮಾಡಲಾಗುತ್ತದೆ? UPSC ನೇಮಕಾತಿಯಲ್ಲಿ ಒಟ್ಟು 845 ಹುದ್ದೆಗಳನ್ನು ಭರ್ತಿಮಾಡಲಾಗುತ್ತದೆ.

2. UPSC ವಿಸ್ತೃತ ರೂಪ ಯಾವುದು? UPSC ವಿಸ್ತೃತ ರೂಪ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್

3. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ ಕನಿಷ್ಠ ವಯಸ್ಸು ಎಷ್ಟು? ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ ಕನಿಷ್ಠ ವಯಸ್ಸು 20 ವರ್ಷಗಳು.

4. ಈ ನೇಮಕಾತಿಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕೆ? ಅಧಿಸೂಚನೆಯ ನಿಯಮಗಳ ಪ್ರಕಾರ ಒಬಿಸಿ ಆಕಾಂಕ್ಷಿಗಳು ರೂ. 200/- ಅರ್ಜಿ ಶುಲ್ಕವನ್ನು ಪಾವತಿಸಬೇಕು. ಆದರೆ ಎಸ್‌ ಸಿ / ಎಸ್‌ ಟಿ / ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳಿಗೆ ಶುಲ್ಕ ವಿನಾಯಿತಿಯನ್ನು ನೀಡಲಾಗಿದೆ.

5. ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ ಶೈಕ್ಷಣಿಕ ಅರ್ಹತೆ ಏನಿರಬೇಕು? ಅಧಿಸೂಚನೆಯ ನಿಯಮಗಳ ಪ್ರಕಾರ ಹುದ್ದೆಗಳ ಆಧಾರದ ಮೇಲೆ ಆಕಾಂಕ್ಷಿಗಳು ಮಾನ್ಯತೆ ಮಡೆದ ಮಂಡಳಿ ಹಾಗೂ ವಿಶ್ವವಿದ್ಯಾಲಯದಿಂದ ಹತ್ತನೇ ತರಗತಿ, 12 ನೇ ತರಗತಿ, ಪದವಿ, ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.

6. UPSC ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? UPSC ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಡಿಸೆಂಬರ್ 2025.

7. UPSC ನೇಮಕಾತಿಯ ಪರೀಕ್ಷಾ ದಿನಾಂಕ ಯಾವುದು? UPSC ನೇಮಕಾತಿಯ ಪರೀಕ್ಷಾ ದಿನಾಂಕ 12 ಏಪ್ರಿಲ್ 2026.

8. ಈ ನೇಮಕಾತಿಗೆ ಯಾವ ವಿಧಾನದ ಮೂಲಕ ಅರ್ಜಿ ಸಲ್ಲಿಸಬೇಕು? ಈ ನೇಮಕಾತಿಗೆ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

9. UPSC ನೇಮಕಾತಿಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಯಾವ ವಿಧಾನದ ಮೂಲಕ ಮಾಡಲಾಗುತ್ತದೆ? ಈ ನೇಮಕಾತಿಯಲ್ಲಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, SSB ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

Author: admin

Leave a Reply

Your email address will not be published. Required fields are marked *