ನಬಾರ್ಡ್ ನೇಮಕಾತಿ 2025 : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಗುತ್ತಿಗೆ ಆಧಾರದ ಮೇಲೆ ತಜ್ಞರ ನೇಮಕಾತಿಗಾಗಿ 5 ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಯಾವುದೇ ಪದವಿಯನ್ನು ಪಡೆದ ಆಕಾಂಕ್ಷಿಗಳು ಅಧಿಸೂಚನೆಯನ್ನು ಓದಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಆಕಾಂಕ್ಷಿಗಳು ಕೊನೆಯ ದಿನಾಂಕದೊಳಗೆ ಆನ್ಲೈನ್ ನಲ್ಲಿ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಧಿಸೂಚನೆಯಲ್ಲಿ ಹೀಗೆ ಹೇಳಲಾಗಿದೆ: “ಅರ್ಜಿ ಸಲ್ಲಿಸುವ ಮೊದಲು, ಆಕಾಂಕ್ಷಿಗಳು ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಬೇಕು ಮತ್ತು ಹುದ್ದೆಗೆ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ನಬಾರ್ಡ್ ನೇಮಕಾತಿ 2025 ರ ಹುದ್ದೆಯ ವಿವರ, ಅರ್ಹತಾ ಮಾನದಂಡಗಳು, ವಯೋಮಿತಿ, ಮಾಸಿಕ ವೇತನ , ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.
ನಬಾರ್ಡ್ ನೇಮಕಾತಿ 2025 : ನೇಮಕಾತಿಯ ವಿವರ
- ಸಂಸ್ಥೆಯ ಹೆಸರು : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)
- ಹುದ್ದೆಯ ಹೆಸರು : ತಜ್ಞರು
- ಒಟ್ಟು ಹುದ್ದೆಗಳು : 5 ಹುದ್ದೆಗಳು
- ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ : ಮುಂಬೈ, ಮಹಾರಾಷ್ಟ್ರ
ನಬಾರ್ಡ್ ನೇಮಕಾತಿ 2025 : ಹುದ್ದೆಯ ವಿವರ
- ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO) : 01
- ಹವಾಮಾನ ಬದಲಾವಣೆ ತಜ್ಞ – ತಗ್ಗಿಸುವಿಕೆ : 01
- ಹವಾಮಾನ ಬದಲಾವಣೆ ತಜ್ಞ – ಹೊಂದಾಣಿಕೆ : 01
- ವಿಷಯ ಬರಹಗಾರರು : 01
- ಗ್ರಾಫಿಕ್ ಡಿಸೈನರ್ : 01
ನಬಾರ್ಡ್ ನೇಮಕಾತಿ 2025 : ಅರ್ಹತಾ ಮಾನದಂಡಗಳು
ವಿದ್ಯಾರ್ಹತೆ :
ನಬಾರ್ಡ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.
- ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO) : ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಬಿಇ/ಎಂಇ/ಬಿ.ಟೆಕ್/ಎಂ.ಟೆಕ್ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಬಿಸಿಎ/ಎಂಸಿಎ ಅಥವಾ ಬಿಎಸ್ಸಿ/ಎಂ.ಎಸ್ಸಿ
- ಹವಾಮಾನ ಬದಲಾವಣೆ ತಜ್ಞ – ತಗ್ಗಿಸುವಿಕೆ : ಸಂಬಂಧಿತ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ
- ಹವಾಮಾನ ಬದಲಾವಣೆ ತಜ್ಞ – ಹೊಂದಾಣಿಕೆ : ಹವಾಮಾನ ಸ್ಥಿತಿಸ್ಥಾಪಕ ಕೃಷಿ, ಜಲ ಸಂಪನ್ಮೂಲ ನಿರ್ವಹಣೆ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ
- ವಿಷಯ ಬರಹಗಾರರು : ಯಾವುದೇ ವಿಷಯದಲ್ಲಿ ಪದವಿ. ಇಂಗ್ಲಿಷ್, ಸಮೂಹ ಸಂವಹನ ಅಥವಾ ಪತ್ರಿಕೋದ್ಯಮದಲ್ಲಿ ಪದವಿ
- ಗ್ರಾಫಿಕ್ ಡಿಸೈನರ್ : ಅನ್ವಯಿಕ ಕಲೆ, ಗ್ರಾಫಿಕ್ ವಿನ್ಯಾಸ ಅಥವಾ ಮಲ್ಟಿಮೀಡಿಯಾದಲ್ಲಿ ಡಿಪ್ಲೊಮಾ/ಸ್ನಾತಕೋತ್ತರ ಪದವಿ.
ವಯೋಮಿತಿ :
- ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO) : 45-55 ವರ್ಷಗಳು
- ಹವಾಮಾನ ಬದಲಾವಣೆ ತಜ್ಞ – ತಗ್ಗಿಸುವಿಕೆ : 35-55 ವರ್ಷಗಳು
- ಹವಾಮಾನ ಬದಲಾವಣೆ ತಜ್ಞ – ಹೊಂದಾಣಿಕೆ : 35-55 ವರ್ಷಗಳು
- ವಿಷಯ ಬರಹಗಾರರು : 21-45 ವರ್ಷಗಳು
- ಗ್ರಾಫಿಕ್ ಡಿಸೈನರ್ : 21-45 ವರ್ಷಗಳು
ನಬಾರ್ಡ್ ನೇಮಕಾತಿ 2025 : ವೇತನ ಶ್ರೇಣಿ
ನಬಾರ್ಡ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ವಾರ್ಷಿಕ ವೇತನವು ಈ ಕೆಳಕಂಡಂತೆ ಇರುತ್ತದೆ
- ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO) : ₹50-70 ಲಕ್ಷ
- ಹವಾಮಾನ ಬದಲಾವಣೆ ತಜ್ಞ – ತಗ್ಗಿಸುವಿಕೆ : ₹25-30 ಲಕ್ಷ
- ಹವಾಮಾನ ಬದಲಾವಣೆ ತಜ್ಞ – ಹೊಂದಾಣಿಕೆ : ₹25-30 ಲಕ್ಷ
- ವಿಷಯ ಬರಹಗಾರ : ₹12 ಲಕ್ಷ
- ಗ್ರಾಫಿಕ್ ಡಿಸೈನರ್ : ₹12 ಲಕ್ಷ
ನಬಾರ್ಡ್ ನೇಮಕಾತಿ 2025 : ಅರ್ಜಿ ಶುಲ್ಕ
- ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳಿಗೆ : ₹150/-
- ಇತರೆ ಎಲ್ಲಾ ವರ್ಗಗಳಿಗೂ : ₹850/-
- ಪಾವತಿ ವಿಧಾನ : ಆನ್ಲೈನ್ ಮೂಲಕ
ನಬಾರ್ಡ್ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
ನಬಾರ್ಡ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.
- ಶಾರ್ಟ್‌ಲಿಸ್ಟ್ : ಆಕಾಂಕ್ಷಿಗಳನ್ನು ಅವರ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ 1:3 ಅನುಪಾತದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ
- ಸಂದರ್ಶನ
- ವೈದ್ಯಕೀಯ ಪರೀಕ್ಷೆ
ನಬಾರ್ಡ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
ನಬಾರ್ಡ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.
- ನಬಾರ್ಡ್ ಅಧಿಕೃತ ವೆಬ್ಲೈಟ್ ಗೆ ಭೇಟಿ ನೀಡಿ www.nabard.org ಲಿಂಕ್ ಮೇಲೆ ಕ್ಲಿಕ್ ಮಾಡಿ
- ಮಾನ್ಯ ಇಮೇಲ್ ಐಡಿ , ಮೊಬೈಲ್ ನಂಬರ್ ಮೂಲಕ ನೋಂದಾಯಿಸಿ
- ಅಗತ್ಯವಿರುವ ಶೈಕ್ಷಣಿಕ ದಾಖಲೆ/ವೈಯಕ್ತಿಕ ದಾಖಲೆ ಗಳನ್ನು ಭರ್ತಿ ಮಾಡಿ
- ಛಾಯಾಚಿತ್ರ, ಸಹಿ, ಎಡ ಹೆಬ್ಬೆರಳಿನ ಗುರುತು ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ
ನಬಾರ್ಡ್ ನೇಮಕಾತಿ 2025 : ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 22-03-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-04-2025
ನಬಾರ್ಡ್ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
| ಅಧಿಸೂಚನೆ ಲಿಂಕ್ | ಮೇಲೆ ಕ್ಲಿಕ್ ಮಾಡಿ |
| ಅಪ್ಲಿಕೇಶನ್ ಲಿಂಕ್ | ಮೇಲೆ ಕ್ಲಿಕ್ ಮಾಡಿ |