ರಾಯಚೂರು DCC ಬ್ಯಾಂಕ್ ನೇಮಕಾತಿ 2025 : ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ರಾಯಚೂರು DCC ಬ್ಯಾಂಕ್) ನಲ್ಲಿ ಒಟ್ಟು 70 ಶಾಖಾ ವ್ಯವಸ್ಥಾಪಕ, ಸಹಾಯಕ ಅಧಿಕಾರಿ ಹಾಗೂ ಹಾಜರಾತಿದಾರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಹಾಗೂ ಬ್ಯಾಂಕ್ ನಲ್ಲಿ ಉದ್ಯೋಗವನ್ನು ಬಯಸುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರದಲ್ಲಿ ಅದರಲ್ಲೂ ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಉದ್ಯೋಗಯನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ರಾಯಚೂರು DCC ಬ್ಯಾಂಕ್ ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು. ಮತ್ತೆ ಹೆಚ್ಚು ಬ್ಯಾಂಕ್ ಉದ್ಯೋಗ ಮಾಹಿತಿಗೆ Bank Recruitment
DCC Bank ರಾಯಚೂರು ನೇಮಕಾತಿ 2025
DCC ಬ್ಯಾಂಕ್ ರಾಯಚೂರು ನೇಮಕಾತಿಯ ಅವಲೋಕನ
- ಸಂಸ್ಥೆಯ ಹೆಸರು : ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ರಾಯಚೂರು DCC ಬ್ಯಾಂಕ್)
- ಹುದ್ದೆಯ ಹೆಸರು : ಶಾಖಾ ವ್ಯವಸ್ಥಾಪಕ, ಸಹಾಯಕ ಅಧಿಕಾರಿ ಹುದ್ದೆಗಳು
- ಒಟ್ಟು ಹುದ್ದೆಗಳು : 70 ಹುದ್ದೆಗಳು
- ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ : ಕರ್ನಾಟಕ – ರಾಯಚೂರು, ಕೊಪ್ಪಳ
ಹುದ್ದೆಗಳ ವಿವರಗಳು
| ಹುದ್ದೆಯ ಹೆಸರು | ಒಟ್ಟು ಹುದ್ದೆಗಳು |
| ಶಾಖಾ ವ್ಯವಸ್ಥಾಪಕ ಗ್ರೇಡ್-I | 15 |
| ಸಹಾಯಕ ದರ್ಜೆ-I | 45 |
| ಹಾಜರಾತಿದಾರ | 10 |
DCC Bank ರಾಯಚೂರು ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು
ವಿದ್ಯಾರ್ಹತೆ :
ರಾಯಚೂರು DCC ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗುತ್ತದೆ.
- ಶಾಖಾ ವ್ಯವಸ್ಥಾಪಕ ಗ್ರೇಡ್-I : ಪದವಿ ಪೂರ್ಣಗೊಳಿಸಿರಬೇಕು.
- ಸಹಾಯಕ ದರ್ಜೆ-I : ಪದವಿ ಪೂರ್ಣಗೊಳಿಸಿರಬೇಕು.
- ಹಾಜರಾತಿದಾರ : ಎಸ್.ಎಸ್.ಎಲ್.ಸಿ
ಹತ್ತನೇ ತರಗತಿ ಪಾಸಾದ ಆಕಾಂಕ್ಷಿಗಳಿಗೆ ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಈ ನೇಮಕಾತಿಯನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ವಯೋಮಿತಿ :
- ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
- ಆಕಾಂಕ್ಷಿಗಳ ಗರಿಷ್ಠ ವಯಸ್ಸು : 40 ವರ್ಷಗಳು
ವಯೋಮಿತಿ ಸಡಿಲಿಕೆ :
- 2A / 2B / 3A / 3B ಆಕಾಂಕ್ಷಿಗಳು : 3 ವರ್ಷಗಳು
- ಎಸ್ ಸಿ / ಎಸ್ ಟಿ / Cat-1 ಆಕಾಂಕ್ಷಿಗಳು : 5 ವರ್ಷಗಳು
- ಪಿಡಬ್ಲ್ಯೂಡಿ ಆಕಾಂಕ್ಷಿಗಳು : 10 ವರ್ಷಗಳು
ಮಾಸಿಕ ವೇತನ
ರಾಯಚೂರು DCC ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಆಕಾಂಕ್ಷಿಗಳನ್ನು ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
- ಶಾಖಾ ವ್ಯವಸ್ಥಾಪಕ ಗ್ರೇಡ್-I : ರೂ. 61,300 – 1,12,900/-
- ಸಹಾಯಕ ದರ್ಜೆ-I : ರೂ. 44,425 – 83,700/-
- ಹಾಜರಾತಿದಾರ : ರೂ. 37500 – 76,100/-
ಅರ್ಜಿ ಶುಲ್ಕ
- ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ ಆಕಾಂಕ್ಷಿಗಳಿಗೆ : ರೂ.1,000 + GST
- ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕರು, ಪಿಡಬ್ಲ್ಯೂಡಿ ಆಕಾಂಕ್ಷಿಗಳಿಗೆ : ರೂ.500 + GST
ಪಾವತಿ ವಿಧಾನ : ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕೆ.
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ
- ಸಂದರ್ಶನ
DCC Bank ರಾಯಚೂರು ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
- ರಾಯಚೂರು DCC ಬ್ಯಾಂಕ್ ನೇಮಕಾತಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್ ಮಾಡಿ.
- ಮಾನ್ಯ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನೊಂದಾಯಿಸಿ
- ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
- ನಿಮ್ಮ ಇತ್ತೀಚಿನ ಫೋಟೋ, ಸಹಿ,ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿ
- ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
- ಅರ್ಜಿಯನ್ನು ಪೂರ್ಣಗೊಳಿಸಿದ ನಂತರ ಸಲ್ಲಿಸು ಬಟನ್ ಕ್ಲಿಕ್ ಮಾಡಿ, ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ.
DCC Bank ರಾಯಚೂರು ನೇಮಕಾತಿ 2025 : ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 21 ನವೆಂಬರ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22 ಡಿಸೆಂಬರ್ 2025
- ಪರೀಕ್ಷೆಯ ದಿನಾಂಕ : 15 ಜನವರಿ 2026
ಪ್ರಮುಖ ಲಿಂಕ್ ಗಳು
| ಅಧಿಸೂಚನೆ ಲಿಂಕ್ | ಮೇಲೆ ಕ್ಲಿಕ್ ಮಾಡಿ |
| ಅಪ್ಲಿಕೇಶನ್ ಲಿಂಕ್ | ಮೇಲೆ ಕ್ಲಿಕ್ ಮಾಡಿ |
